ನವೀಕರಣಗೊಂಡ ಶ್ರೀ ಅದಿಶಕ್ತಿ ದೇವಾಲಯವನ್ನು ಸಚಿವರಾದ ರಾಮಲಿಂಗಾರೆಡ್ಡಿರವರು ಉದ್ಘಾಟನೆ ಮಾಡಿದರು

varthajala
0

 ಬೆಂಗಳೂರು:ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಕಾರದಿಂದ ಜಿಬಿಎ ಕೇಂದ್ರ ಕಛೇರಿ ಅವರಣದಲ್ಲಿರುವ ಏಳು ಸುತ್ತಿನಕೋಟೆ ಸಹಿತ ಶ್ರೀ ಅದಿಶಕ್ತಿ ದೇವಾಲಯದ ನವೀಕರಣ, ಜೀರ್ಣೋದ್ದಾರದ ದೇವಸ್ಥಾನ ಉದ್ಘಾಟನೆ ಮತ್ತು ದೇವತಾ ಕಾರ್ಯಕ್ರಮ ಚಾಲನೆ.ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು, ಜಯನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎನ್.ನಾಗರಾಜು, ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಉದ್ಘಾಟನೆ ನೇರವೆರಿಸಿದರು.

ಸಚಿವರಾದ ರಾಮಲಿಂಗಾರೆಡ್ಡಿರವರು ಮಾತನಾಡಿ 1983ರಲ್ಲಿ ನಾನು ಪಾಲಿಕೆ ಸದಸ್ಯನಾಗಿದ್ದ ಸಂದರ್ಭದಲ್ಲಿ ಶ್ರೀ ಅದಿಶಕ್ತಿ ದೇವಾಲಯ ಶೆಡ್ ನಲ್ಲಿತ್ತು. ಜಿಬಿಎ ಅಧಿಕಾರಿ, ನೌಕರರ 2ಕೋಟಿ ಅಧಿಕ ದೇಣಿಗೆ ನೀಡುವ ಮೂಲಕ ಸಹಕಾರದಿಂದ ದೇವಾಲಯ ನವೀಕರಣಗೊಂಡಿದೆ.ರಾಜ್ಯದಲ್ಲಿ ಎಲ್ಲ ದೇವಾಲಯಗಳು ಭಕ್ತರಿಂದ ತುಂಬಿ ತುಳುತ್ತಿದೆ.

ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಸರ್ಕಾರ ಗ್ಯಾರೆಂಟಿಯ ಯೋಜನೆ ಶಕ್ತಿ ಯೋಜನೆ ಕಾರಣ.ಶಕ್ತಿ ಯೋಜನೆ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತದಿಂದ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚವಾಗಿದೆ ಮತ್ತು ದೇವಾಲಯ ಸುತ್ತಮುತ್ತಲ ಹೂವು, ಹಣ್ಣು ಮತ್ತು ಇನ್ನಿತರೆ ವ್ಯಾಪಾರಸ್ಥರು ಆರ್ಥಿಕವಾಗಿ ಸಬಲರಾಗಿದ್ದಾರೆ ಮತ್ತು ದೇವಾಲಯದ ಅದಾಯವು ಸಹ ಹೆಚ್ಚಳವಾಗಿದೆ ಎಂದು ಹೇಳಿದರು. ಎ.ಅಮೃತ್ ರಾಜ್ ರವರು ಶ್ರೀ ಅದಿಶಕ್ತಿ ದೇವಾಲಯ ಐತಿಹಾಸಿಕ, ಇತಿಹಾಸವಿರುವ ದೇವಾಲಯವಾಗಿದ್ದು . ದೇವಾಲಯ ಹಳೆಯದಾಗಿ ಶೀಥಾಲವಸ್ಥೆಯಲ್ಲಿ ಇತ್ತು. 

ದೇವಸ್ಥಾನ ಆಡಳಿತ ಮಂಡಳಿಯವರು ದೇವಸ್ಥಾನ ನವೀಕರಣ ಕಾರ್ಯಕ್ಕೆ ಸಹಕಾರ ಕೋರಿದರು. ನಮ್ಮ ಸಂಘದಲ್ಲಿ ಅಧಿಕಾರಿ, ನೌಕರರು ತೀರ್ಮಾನ ಮಾಡಿ ಪ್ರತಿಯೊಬ್ಬ ನೌಕರರು ತಲಾ 1ಸಾವಿರ ಸಂಬಳ ಕಟಾವಣೆ ಮಾಡಿ ದೇವಸ್ಥಾನ ಅಭಿವೃದ್ದಿ ಕಾರ್ಯ ನೀಡಲಾಗಿದೆ ನಂತರ ಇನ್ನು ಹಣದ ಅವಶ್ಯಕತೆ ಇದ್ದ ಕಾರಣದಿಂದ ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ 20 ಮತ್ತು ಅಧಿಕಾರಿ, ನೌಕರರ ದೇಣಿಗೆಯಿಂದ 1ಕೋಟಿ 60ಲಕ್ಷ ರೂಪಾಯಿಗಳನ್ನು ದೇವಾಲಯ ಜೀರ್ಣೋದ್ಧಾರಕ್ಕೆ ವಿನಿಯೋಗಿಸಲಾಯಿತು.ಜ್ಯೋತಿಷಿ,

ಅಗಮ ಶಾಸ್ತ್ರ ಪಂಡಿತರಾದ ಭಾನುಪ್ರಕಾಶ್ ಶರ್ಮಾ ಮತ್ತು 40ಜನ ಪಂಡಿತರಿಂದ ಅಷ್ಟಮವರ್ಣ ಪೂಜಾ, ಮಹಾಗಣಪತಿ ಹೋಮ, ಪಂಚದೇವತೆಗಳಿಗೆ ಅಷ್ಟವಾರಣ ಪೂಜಾ, ನವಗ್ರಹಶಾಂತಿ ಹೋಮ, ಶನ್ವೇವರ ಹೋಮ, ಬಲಿಹರಣ ಪೂಜಾ ಹೋಮ, ದೇವತೆಗಳಿಗೆ ಚಕ್ರ ಸ್ಥಾಪನೆ , ದುರ್ಗ ದೀಪ ನಮಸ್ಕಾರ ಮತ್ತು ಪ್ರಸಾದ ವಿನಿಯೋಗ ನೇರವೆರಿತು.

Post a Comment

0Comments

Post a Comment (0)