ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ವಿಜೇತರಿಗೆ ನಿರ್ಮಾಣ ನಿರ್ವಹಕರ ಒಕ್ಕೂಟದಿಂದ ಸನ್ಮಾನ

varthajala
0

 ಕರ್ನಾಟಕ ಸರ್ಕಾರವು ಪ್ರದಾನ ಮಾಡುವ ಪ್ರತಿಷ್ಠಿತ ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಚಲನಚಿತ್ರ ನಿರ್ಮಾಪಕ ಶ್ರೀಯುತ ಸಾ. ರಾ. ಗೋವಿಂದು ಹಾಗೂ ಹಿರಿಯ ನಟಿ ಶ್ರೀಮತಿ ಜಯಮಾಲ ಅವರಿಗೆ ನೀಡಲಾಗಿದೆ.ಈ ಮಹತ್ವದ ಸಾಧನೆಗಾಗಿ ಪ್ರಶಸ್ತಿ ಪಡೆದ ಇವರನ್ನು ಕರ್ನಾಟಕ ಚಲನಚಿತ್ರ ನಿರ್ಮಾಣ ನಿರ್ವಹಕರ ಒಕ್ಕೂಟದ ವತಿಯಿಂದ ಬೆಂಗಳೂರಿನ ಹೋಟೆಲ್ ಚೇತನಾ ಇಂಟರ್ನ್ಯಾಷನಲ್ನಲ್ಲಿ ನಡೆದ ಸಮಾರಂಭದಲ್ಲಿ ಭವ್ಯವಾಗಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಅವರು ಉಪಸ್ಥಿತರಿದ್ದು, ಪ್ರಶಸ್ತಿ ವಿಜೇತರಿಗೆ ಗೌರವ ಸಲ್ಲಿಸಿದರು. ಈ ಸಂದರ್ಭ ನಿರ್ಮಾಣ ನಿರ್ವಾಹಕ ಸಂಘದ ಅಧ್ಯಕ್ಷ ಎಸ್. ಸೋಮಶೇಖರ್, ಕಾರ್ಯದರ್ಶಿ ಗಗನಮೂರ್ತಿ, ಖಜಾಂಚಿ ಸುನಿಲ್, ಉಪಾಧ್ಯಕ್ಷ ರವಿಶಂಕರ್ ಚೆಲುವರಾಜು, ಸಮಿತಿಯ ಸದಸ್ಯ ಮೀಸೆ ಪ್ರಕಾಶ್ ಸೇರಿದಂತೆ ಹಲವು ಚಲನಚಿತ್ರ ಕಲಾವಿದರು ಹಾಗೂ ವಿವಿಧ ಚಲನಚಿತ್ರ ಸಂಬಂಧಿತ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಮಾರಂಭವು ಆತ್ಮೀಯ ಹಾಗೂ ಸ್ಮರಣೀಯವಾಗಿ ನಡೆಯಿತು.

Post a Comment

0Comments

Post a Comment (0)