ಬೆಂಗಳೂರು: ಕನ್ನಡಿಗರಲ್ಲಿ ಅದರಲ್ಲಿಯೂ ಯುವಜನರಲ್ಲಿ ಕನ್ನಡ ಭಾಷೆಯ ಕುರಿತು ಆಸಕ್ತಿ ಬೆಳೆಸುವ ದೃಷ್ಟಿಯಿಂದ ಆಚರ‍್ಯ ಬಿ.ಎಂ.ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಡಿದ ವ್ಯವಸ್ಥೆ ಎಂದರೆ ಪರೀಕ್ಷೆಗಳು. ೧೯೪೦ ರಿಂದಲೂ ಪರೀಕ್ಷೆಗಳು ನಿರಂತರವಾಗಿ ನಡೆದು ಕೊಂಡು ಬರುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತು 2025-26 ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳು 2026ರ ಜನವರಿ 30,31 ಮತ್ತು ಫೆಬ್ರವರಿ 01ರಂದು ಬೆಂಗಳೂರು, ಕಲಬುರಗಿ, ಚಾಮರಾಜನಗರ, ಚಿಕ್ಕಮಗಳೂರು, ದೋಣಿಮಲೈ, ಧಾರವಾಡ, ಬಂಗಾರಪೇಟೆ, ಬಾಗಲಕೋಟೆ, ಬೀದರ್, ಮೂಡುಬಿದರೆ, ಮೈಸೂರು, ಶಿವಮೊಗ್ಗ, ಹಾಸನ ಒಟ್ಟು 13 (ಹದಿಮೂರು) ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.ಮೇಲ್ಕಂಡ ಪರೀಕ್ಷಾ ಪ್ರವೇಶ ಪತ್ರಗಳನ್ನು ವಿದ್ಯರ‍್ಥಿಗಳಿಗೆ ಅಂಚೆ ಮೂಲಕ ಕಳುಹಿಸಲಾಗುವುದು. 22-01-2026ರ ನಂತರವೂ ಪ್ರವೇಶ ಪತ್ರ ತಲುಪದಿರುವ ಬಗ್ಗೆ ವಿದ್ಯರ‍್ಥಿಗಳು ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18 ಇಲ್ಲಿ ವಿಚಾರಿಸಬಹುದು. ಸಂರ‍್ಕಿಸಬೇಕಾದ ದೂರವಾಣಿ ಸಂಖ್ಯೆ 080-26612991, 26623584, 26523867 ಹಾಗೂ ಮೊ. 8618296186
ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ತಿತಿತಿ.ಞಚಿsಚಿಠಿಚಿ.iಟಿ ಅಂರ‍್ಜಾಲ ತಾಣದ ಮೂಲಕ ಸಹ ಪಡೆದುಕೊಳ್ಳಬಹುದು.