ಭಾರತೀಯ ಪರಂಪರೆಯಲ್ಲಿ ಒಂದು ವಿಮರ್ಶೆಯ ಪರಂಪರೆ ಇರಲಿಲ್ಲ: ಎಚ್.ಎಸ್. ಶಿವಪ್ರಕಾಶ್

varthajala
0

 ಬೆಂಗಳೂರು :  ಬೆಂಗಳೂರು ನಗರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಷ್ಟçಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಇಂದು ಕನ್ನಡ ಭವನದ ನಯನ ಸಭಾಂಗಣದಲ್ಲಿ, 'ಭಾರತೀಯ ವಿಮರ್ಶೆ: ಸಮಕಾಲೀನ ಸಂದರ್ಭ' ಎಂಬ ವಿಷಯದ ಕುರಿತು ರಾಷ್ಟಿçÃಯ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಕವಿಗಳಾದ ಎಚ್.ಎಸ್. ಶಿವಪ್ರಕಾಶ್ ಅವರು ದೀಪ ಬೆಳಗುವ ಮೂಲಕ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಒಂದು ವಿಮರ್ಶೆಯ ಪರಂಪರೆ ಎನ್ನುವುದು ಇರಲಿಲ್ಲ. ಕಾವ್ಯ ವೀಮಾಂಸೆ ಇತ್ತು. ವಿಮರ್ಶೆ ಎನ್ನುವ ಸಾಹಿತ್ಯ ಪ್ರಕಾರ ದಕ್ಷಿಣದಿಂದ ಬಂದಿದೆ. ಕವಿಗಳೇ ವಿಮರ್ಶಕರಾಗಿದ್ದ ಕಾಲವೊಂದಿತ್ತು. ಅದಕ್ಕೆ ಉತ್ತಮ ಉದಾಹರಣ ಬೇಂದ್ರೆ ಎಂದರು. ಇನ್ನು ವಚನದಲ್ಲಿ ಕಾವ್ಯ ವಿಮರ್ಶೆಯ ಕಟುವಾದ ಟೀಕೆಯಿದೆ. ಆದರೆ ಅದು ವಚನದ ಚೌಕಟ್ಟಿನಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಸದಸ್ಯರಾದ ಡಾ. ಎಂ.ಎಸ್. ಆಶಾದೇವಿ ಅವರು, ಇಂದಿನ ಸಂಕೀರ್ಣ ಸಂದರ್ಭದಲ್ಲಿ ಸಾಹಿತ್ಯಿಕ ವಿಮರ್ಶೆಯ ಅಗತ್ಯತೆ ಮತ್ತು ಅದರ ಆಶಯಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ಜಿ ಎಸ್ ಎಸ್ ಅವರು ನಡೆಸುತ್ತಿದ್ದ ವಿಚಾರ ಸಂಕೀರ್ಣಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದರು. ಹಾಗೆಯೇ ಜಿ ಎಸ್ ಎಸ್ ಕಾಲಘಟ್ಟದಲ್ಲಿ ಕನ್ನಡ ವಿಭಾಗಕ್ಕೆ ಸೇರಿ ನೀಡಿದ ಕೊಡುಗೆ ಬಹಳ ಅಪಾರ. ಅವರು ನಡೆಸುತ್ತಿದ್ದ ವಿಚಾರ ಸಂಕೀರ್ಣಗಳು ಮತ್ತು ವಿಚಾರ ಸಂಕೀರ್ಣದಲ್ಲಿ ನಡೆದ ಚರ್ಚೆಗಳನ್ನ ಅವರು ಕೃತಿ ರೂಪದಲ್ಲಿಯೂ ಪ್ರಕಟಿಸಿದ್ದರು. ಇಡೀ ಕನ್ನಡ ಸಾಹಿತ್ಯ ಪರಂಪರೆಯನ್ನ ಬರೀ ಮರು ಓದಿಗೆ ಮಾತ್ರವಲ್ಲದೇ, ಒಂದು ಮರು ಮೌಲ್ಯಮಾಪನಕ್ಕೆ ಬೇಕಾದ ಶಕ್ತವಾದ ವೇದಿಕೆಯನ್ನು ಜಿ ಎಸ್ ಎಸ್ ಕಟ್ಟಿಕೊಟ್ಟಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಮೋಹನ್ ಕೊಂಡಜ್ಜಿ ಅವರು ವಹಿಸಿದ್ದರು. ದಿನವಿಡೀ ನಡೆದ ಈ ಬೌದ್ಧಿಕ ಸಂವಾದದಲ್ಲಿ ಭಾರತೀಯ ಸಾಹಿತ್ಯ ವಿಮರ್ಶೆಯ ವಿವಿಧ ಮಗ್ಗುಲುಗಳ ಬಗ್ಗೆ ಗಹನವಾದ ಚರ್ಚೆಗಳು ನಡೆದವು. ಮೊದಲ ಗೋಷ್ಠಿಯಲ್ಲಿ ಭೋಪಾಲ್‌ನ ಹಿರಿಯ ಲೇಖಕ  ಡಾ. ಉದಯನ್ ವಾಜಪೇಯಿ ಅವರು 'ಭಾರತೀಯ ಸಂದರ್ಭದ ವಿಮರ್ಶೆ' ಕುರಿತು ವಿಷಯ ಮಂಡಿಸಿ ರಾಷ್ಟಿçÃಯ ಮಟ್ಟದ ವಿಮರ್ಶಾ ಪರಂಪರೆಯನ್ನು ವಿಶ್ಲೇಷಿಸಿದರೆ, ಎರಡನೇ ಗೋಷ್ಠಿಯಲ್ಲಿ ಶಿವಮೊಗ್ಗದ ಹಿರಿಯ ವಿಮರ್ಶಕರಾದ ಡಾ. ರಾಜೇಂದ್ರ ಚೆನ್ನಿ ಅವರು 'ಕನ್ನಡದ ಸಂದರ್ಭದ ವಿಮರ್ಶೆ' ಎದುರಿಸುತ್ತಿರುವ ಇಂದಿನ ಸವಾಲುಗಳು ಮತ್ತು ಪ್ರಸ್ತುತತೆಯ ಬಗ್ಗೆ ಬೆಳಕು ಚೆಲ್ಲಿದರು. 

ಮುಂದುವರಿದು, ಮೂರನೇ ಗೋಷ್ಠಿಯಲ್ಲಿ ಚಿತ್ರದುರ್ಗದ ಹಿರಿಯ ಲೇಖಕಿ ತಾರಿಣಿ ಶುಭದಾಯಿನಿ ಅವರು 'ದಲಿತ ಮತ್ತು ಮಹಿಳಾ ಸಂದರ್ಭದ ವಿಮರ್ಶೆ' ಕುರಿತು ಮಾತನಾಡಿ, ಈ ಆಯಾಮಗಳಲ್ಲಿ ವಿಮರ್ಶಾ ಪ್ರಜ್ಞೆ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ರಾಷ್ಟçಕವಿ ಡಾ ಜಿ. ಎಸ್ ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಆರ್. ಚಂದ್ರಶೇಖರ, ಸದಸ್ಯ ಸಂಚಾಲಕ ಡಾ.ಸಿರಾಜ್ ಅಹಮದ್ ಹಾಗೂ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಜಾಣಗೆರೆ ವೆಂಕಟರಾಮಯ್ಯ, ಆರ್.ಜಿ. ಹಳ್ಳಿ ನಾಗರಾಜ್ ಸಿ.ಕೆ. ಗುಂಡಣ್ಣ, ಡಾ. ಸಾಸ್ಟೇಹಳ್ಳಿ ಸತೀಶ್, ಚಂದ್ರಶೇಖರ ನಂಗಲಿ ಅವರು ಉಪಸ್ಥಿತರಿದ್ದರು.


Post a Comment

0Comments

Post a Comment (0)