ದೇಶದ 12 ಕೋಟಿ ಕಾರ್ಮಿಕರಿಗೆ ಮರಣ ಶಾಸನ- ಶಾಸಕ ರಂಗನಾಥ್

varthajala
0

 ಕೇಂದ್ರ ಸರ್ಕಾರವು ಜಾರಿಗೆ ತಂದಿರುವ 'ವಿಬಿ-ಗ್ರಾಮ್ ಜಿ' ಕಾಯ್ದೆ ದೇಶದ 12 ಕೋಟಿ ಕಾರ್ಮಿಕರಿಗೆ ಮರಣ ಶಾಸನವಾಗಲಿದೆ ಎಂದು ತಿಳಿಸಿ ಮುಖ್ಯಮಂತ್ರಿಗಳ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ಇಂದು ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ವಿಬಿ-ಗ್ರಾಮ್ ಜಿ' ಹೊಸ ಕಾಯ್ದೆಯು ವರ್ಷಕ್ಕೆ 12 ತಿಂಗಳ ಬದಲು 10 ತಿಂಗಳು ಮಾತ್ರ ಕೆಲಸಕ್ಕೆ ಅವಕಾಶ ನೀಡುತ್ತದೆ. ಕಾರ್ಮಿಕರಿಗೆ ನೀಡಲಾಗುವ ಕೂಲಿ ದರದ ಬಗ್ಗೆ ಯಾವುದೇ ಖಚಿತತೆ ಇಲ್ಲ. ಈ ಅನಿಶ್ಚತತೆಯು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ, ವಿಶೇಷವಾಗಿ ಮಹಿಳೆಯರು, ರೈತಾಪಿ ಜನರ ಹಕ್ಕುಗಳನ್ನು ಕಸಿದುಕೊಳ್ಳುವುದಲ್ಲದೇ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಪ್ರಯತ್ನವಾಗಿದೆ ಎಂದರು. ಮನರೇಗ ಕಾಯ್ದೆಯು ಕೂಲಿ ಕಾರ್ಮಿಕರ ಉಸಿರು. ಬಡವರಿಗೋಸ್ಕರ ರಚಿಸಲ್ಪಟ್ಟ ಕಾಯ್ದೆ. ಬಡವರನ್ನ ಉಳಿಸಿಕೊಳ್ಳುವುದಕ್ಕೆ ಮನರೇಗ ಕಾಯ್ದೆಯನ್ನು ಮರುಸ್ಥಾಪಿಸಲು ಉಗ್ರ ಹೋರಾಟ ನಡೆಸಲು ನಮ್ಮ ಸರ್ಕಾರ ಸದಾ ಸಿದ್ದ ಎಂದು ತಮ್ಮ ಬೆಂಬಲ ವ್ಯಕ್ತಪಡಿಸಿದರು.

Post a Comment

0Comments

Post a Comment (0)