ಬೆಂಗಳೂರು : ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿ ಐಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಜನೆ ಮತ್ತು ಆಡಳಿತ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ “ಡಿಜಿಟಲ್ ವಿಥ್ ಪರ್ಪಸ್” ಶೃಂಗಸಭೆ ನಗರದಲ್ಲಿ ನಡೆಯಿತು. ನಗರದ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಐರೋಪ್ಯ ವಲಯವನ್ನು ಮರು ರೂಪಿಸುವ ಸಮಿತಿ ಅಧ್ಯಕ್ಷರು ಹಾಗೂ ಐರೋಪ್ಯ ಒಕ್ಕೂಟದ ಮುಖ್ಯಸ್ಥರಾದ ಮರಿಯಾ ಜಾವೋ ರೋಡ್ರಿಗಸ್, ಟೀಮ್ ಲೀಸ್ ಡಿಜಿಟಲ್ ನ ಸಿಇಒ ನೀತಿ ಶರ್ಮಾ, ಜಿಇಎಸ್‌ಐ ಸಿಇಒ ಲೂಯಿಸ್ ನೇವೆಸ್, ಗ್ರೌಂಡಿಂಗ್ ಅಕಾಡೆಮಿಯಾ ಗ್ರೂಪ್ ಸಿಇಒ ಜಾನ್ ಕ್ಯೂನ್ನೇ ಮತ್ತಿತರೆ ಗಣ್ಯರು ತಂತ್ರಜ್ಞಾನದ ವಿವಿಧ ಆಯಾಮಗಳ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದರು.
ಫ್ಯೂಚರ್ ಐಸಿಟಿ ಫೋರಂ ಅಧ್ಯಕ್ಷ ಜೋಸ್ ಜಾಕೋಬ್ ಕೆ ಮಾತನಾಡಿ, ಜರ್ಮನಿಯ ಡಸೆಲ್ಡಾರ್ಫ್ ನಗರದ ಮೇಯರ್ ಡಾ. ಸ್ಟೀಫನ್ ಕೆಲ್ಲರ್ ಅವರೊಂದಿಗೆ ಇಂದು ಸುಸ್ಥಿರ ಬೆಳವಣಿಗೆ ಕುರಿತು ಚರ್ಚೆ ನಡೆಸಲಾಗಿದೆ. ಕಾರ್ಬನ್ ಇಂಗಾಲ ಹೊರಸೂಸುವ ಗುರಿ 2045 ಕ್ಕೆ ನಿಗದಿ ಮಾಡಿದ್ದು, ಆದರೆ ಡಸೆಲ್ಡಾರ್ಫ್ ನಗರ 2035 ಕ್ಕೆ ಹತ್ತು ವರ್ಷಗಳ ಮುಂಚೆಯೇ ಗುರಿ ತಲುಪುವ ಮಹತ್ವಾಕಾಂಕ್ಷೆ ಹೊಂದಿದೆ. ಅವರೊಂದಿಗೆ ಸೇರಿ ಸುಸ್ಥಿರ ನಗರದ ಗುರಿ ಸಾಧನೆಗೆ ಶ್ರಮಿಸುತ್ತಿರುವುದಾಗಿ ಹೇಳಿದರು. ಇದೇ ಮೊದಲ ಬಾರಿಗೆ ಮರಿಯಾ ರೋಡ್ರಿಗಸ್ ಅವರ ಜೊತೆ ಚರ್ಚೆ ನಡೆಸಲಾಗಿದೆ.
ಕಳೆದ ವಾರ ಮುಕ್ತ ವ್ಯಾಪಾರ ಒಪ್ಪಂದ ಆಗಿದ್ದು, ಈಗ ಯಾವ ರೀತಿ ಸಹಭಾಗಿತ್ವದಲ್ಲಿ ಬದಲಾವಣೆ ಮಾಡಬೇಕು. ಸ್ಥಿರ ಪಾಲುದಾರರು ಯಾರು ಎಂಬ ಕುರಿತು ಮಾತುಕತೆ ನಡೆಸಲಾಗಿದೆ. ಐರೋಪ್ಯ ರಾಷ್ಟ್ರಗಳಿಂದ ತುಂಬಾ ಜನ ಬಂದಿದ್ದಾರೆ. ಎಐ ಬಳಕೆ ಮಾಡಿ ಯುವ ಸಮೂಹಕ್ಕೆ ಅಗತ್ಯವಾಗಿರುವ ತಂತ್ರಜ್ಞಾನದ ಕೌಶಲ್ಯ ನೀಡಿ ಉದ್ಯೋಗ ದೊರಕಿಸಿಕೊಡುವ ಗುರಿ ಇದೆ. ಮುಂದಿನ ಒಂದು ದಶಕದಲ್ಲಿ ಈ ಸಹಭಾಗಿತ್ವ ಇನ್ನೂ ಬೆಳೆಯಬೇಕು ಎಂದರು.

ಕೃತಕ ಬುದ್ದಿಮತ್ತೆಯಿಂದ ಐಟಿ ವಲಯಕ್ಕೆ ಆಪತ್ತು ಎದುರಾಗಿದೆ. ಇಂತಹ ಸಂದರ್ಭದಲ್ಲಿ ಹೊಸ ಹೊಸ ಉತ್ಪನ್ನಗಳನ್ನು ಉತ್ಪಾದಿಸಿದರೆ ಲಾಭದ ಜೊತೆಗೆ ಉದ್ಯೊಗ ದೊರೆಯಲಿದೆ. ಇದು ಪರಿವರ್ತನೆ ಸಮಯ. ಇದಕ್ಕೆ ನಾವು ಸನ್ನದ್ಧರಾಗಬೇಕು. ಭಾರತ ಎಐನಲ್ಲಿ ನಾಯಕತ್ವ ವಹಿಸುವ ಕಾಲ ಬಂದಿದೆ. ಅತಿ ಹೆಚ್ಚು ಐಎ ತಂತ್ರಜ್ಞರು ಭಾರತದಲ್ಲಿದ್ದಾರೆ ಎಂದರು.