ವ್ಯಂಗ್ಯ, ಪ್ರತಿರೋಧ ಮತ್ತು ಅಸಮಾಧಾನದ ಗಣರಾಜ್ಯ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಗಮನ ಸೆಳೆದ 'ರಿಪಬ್ಲಿಕಾ ಆಫ್ ಪಿಪೊಲಿಪಿನಾಸ್'

varthajala
0

 ಬೆಂಗಳೂರು :17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ರೆನಿ ದಿಮ್ಲಾ ನಿರ್ದೇಶನದ ವಿಮರ್ಶಾತ್ಮಕವಾಗಿ ಪ್ರಶಂಸಿಸಲ್ಪಟ್ಟ 'ರಿಪಬ್ಲಿಕಾ ಆಫ್ ಪಿಪೊಲಿಪಿನಾಸ್' ಎಂಬ ಮಾಕ್ಯುಮೆಂಟರಿ ಚಿತ್ರವು ಫಿಲಿಪಿನೋ ಸಿನೆಮಾದ ತೀಕ್ಷ್ಣ ಮತ್ತು ವ್ಯಂಗ್ಯಭರಿತ ಧ್ವನಿಯಾಗಿ ಹೊರಹೊಮ್ಮಿದೆ. ದಿಮ್ಲಾ ಅವರ ಮೊದಲ ಭಾರತ ಭೇಟಿಯಾಗಿದ್ದು, ಇಲ್ಲಿನ ಪ್ರೇಕ್ಷಕರ ಉತ್ಸಾಹ ಮತ್ತು ಚಿತ್ರೋತ್ಸವದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ನೋಡಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ನೈಜ ಘಟನೆಗಳ ಆಧಾರಿತ ರಾಜಕೀಯ ಮಾಕ್ಯುಮೆಂಟರಿಯಾದ ಈ ಚಿತ್ರವು ಕೋರಾ ವಿಟುಗ್ ಎಂಬ ರೈತ ಮಹಿಳೆಯ ಕಥೆಯನ್ನು ಹೇಳುತ್ತದೆ. ಸರ್ಕಾರವು ಭೂಮಿಯನ್ನು ವಶಪಡಿಸಿಕೊಳ್ಳುವುದರ ವಿರುದ್ಧ ಪ್ರತಿಭಟನೆಯಾಗಿ ಆಕೆ ತನ್ನ ಪೌರತ್ವವನ್ನು ತ್ಯಜಿಸಿ, ಒಂದು ಸಣ್ಣ ರಾಷ್ಟ್ರವನ್ನು ರೂಪಿಸಿಕೊಳ್ಳುತ್ತಾಳೆ.
ನೋವಿನ ವಿಷಯವನ್ನು ಚರ್ಚಿಸಲು ಹಾಸ್ಯ ಮತ್ತು ವ್ಯಂಗ್ಯವು ಅತ್ಯಂತ ಪ್ರಾಮಾಣಿಕ ಮಾರ್ಗವೆಂದು ತಮಗೆ ಅನ್ನಿಸಿತು ಎಂದು ನಿರ್ದೇಶಕ ದಿಮ್ಲಾ ವಿವರಿಸಿದ್ದಾರೆ. ಫಿಲಿಪಿನೋ ಕಥೆ ಹೇಳುವ ಸಂಪ್ರದಾಯದಲ್ಲಿ ಹಾಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ, ಕಹಿ ಸತ್ಯಗಳನ್ನು ಜನರಿಗೆ ಆಕರ್ಷಕವಾಗಿ ತಲುಪಿಸಲು ಅವರು ವಾಸ್ತವಿಕ ಚಿತ್ರಣಕ್ಕಿಂತ ಹೆಚ್ಚಾಗಿ ಮಾಕ್ಯುಮೆಂಟರಿ ಶೈಲಿಯನ್ನು ಆಯ್ದುಕೊಂಡಿದ್ದಾರೆ.ಈ ಚಿತ್ರದ ವ್ಯಂಗ್ಯವು ಸಂಪೂರ್ಣವಾಗಿ ವಾಸ್ತವದಲ್ಲಿ ಬೇರೂರಿದೆ. ಚಿತ್ರದ ಹಲವು ಪಾತ್ರಗಳು ತಮ್ಮ ನೈಜ ವ್ಯಕ್ತಿತ್ವವನ್ನೇ ಪರದೆಯ ಮೇಲೆ ಬಿಂಬಿಸಿವೆ. ಫಿಲಿಪೈನ್ಸ್‍ನಲ್ಲಿನ ಸ್ಥಳಾಂತರ, ಭ್ರμÁ್ಟಚಾರ ಮತ್ತು ರಾಜಕೀಯ ನಿರ್ಲಕ್ಷ್ಯದ ನೈಜ ಅನುಭವಗಳನ್ನು ಈ ಕಥೆ ಒಳಗೊಂಡಿದೆ. ಅತಿರಂಜಿತ ಹಾಸ್ಯ ಮತ್ತು ವಿಡಂಬನೆ ಚಿತ್ರದ ಧಾಟಿಯಾಗಿದ್ದರೂ, ಕಥೆಯ ಭಾವನಾತ್ಮಕ ಮತ್ತು ರಾಜಕೀಯ ಅಧಿಕೃತತೆಯನ್ನು ಕಾಪಾಡಿಕೊಳ್ಳಲು ಈ ನೈಜತೆ ಅತ್ಯಗತ್ಯವಾಗಿತ್ತು ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಚಿತ್ರವು ವ್ಯಾಪಕವಾಗಿ ಸಂಚಲನ ಮೂಡಿಸಿದೆ. ಬೆಂಗಳೂರಿನಲ್ಲಿ ಚಿತ್ರ ಪ್ರದರ್ಶನದ ನಂತರ ಪ್ರೇಕ್ಷಕರು ದಿಮ್ಲಾ ಅವರನ್ನು ಭೇಟಿಯಾಗಿ, ಚಿತ್ರದಲ್ಲಿ ಚಿತ್ರಿಸಲಾದ ವ್ಯವಸ್ಥಿತ ಶೋಷಣೆ ಮತ್ತು ಭಾರತದಲ್ಲಿನ ಸಾಮಾಜಿಕ-ರಾಜಕೀಯ ವಾಸ್ತವಗಳ ನಡುವಿನ ಸಾಮ್ಯತೆಗಳನ್ನು ಹಂಚಿಕೊಂಡರು. ಅಧಿಕಾರ ದುರುಪಯೋಗ ಮತ್ತು ಪ್ರಜೆಗಳ ಪ್ರತಿರೋಧದ ಕಥೆಗಳು ರಾಷ್ಟ್ರೀಯ ಗಡಿಗಳನ್ನು ಮೀರಿ ನಿಲ್ಲುತ್ತವೆ ಎಂಬುದಕ್ಕೆ ಈ ಸ್ಪಂದನೆಯೇ ಸಾಕ್ಷಿ ಎಂದು ಅವರು ಹೇಳಿದರು.ಸ್ವತಂತ್ರ ರಾಜಕೀಯ ಸಿನಿಮಾಗಳಿಗೆ ಸಾಮಾನ್ಯವಾಗಿ ಎದುರಾಗುವ ಸೆನ್ಸಾರ್‍ಶಿಪ್ ಅಪಾಯಗಳ ನಡುವೆಯೂ, ಚಿತ್ರದ ಹಾಸ್ಯಮಯ ಶೈಲಿಯೇ ಅದನ್ನು ರಕ್ಷಿಸಿದೆ ಎಂದು ದಿಮ್ಲಾ ತಿಳಿಸಿದರು. ಆಶ್ಚರ್ಯಕರ ಸಂಗತಿಯೆಂದರೆ, ಫಿಲಿಪೈನ್ಸ್ ಸರ್ಕಾರವು ಈ ಯೋಜನೆಗೆ ಉತ್ಪಾದನೆ ಮತ್ತು ಅಂತರಾಷ್ಟ್ರೀಯ ಪ್ರದರ್ಶನಗಳಿಗಾಗಿ ಅನುದಾನ ನೀಡುವ ಮೂಲಕ ಬೆಂಬಲಿಸಿದೆ.ಚಿತ್ರೋತ್ಸವದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಅಭೂತಪೂರ್ವವಾಗಿದ್ದು, ಪ್ರೇಕ್ಷಕರು ಚಿತ್ರದ ಸಂಭಾಷಣೆಗಳನ್ನು ನಿರ್ದೇಶಕರ ಮುಂದೆ ಉಲ್ಲೇಖಿಸಿದ್ದು ಅವರಿಗೆ ತೃಪ್ತಿ ತಂದಿದೆ. ಮಾಕ್ಯುಮೆಂಟರಿ ಶೈಲಿಯ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಈ ಚಿತ್ರವು ತನ್ನ ಬುದ್ಧಿವಂತಿಕೆ, ಧೈರ್ಯ ಮತ್ತು ರಾಜಕೀಯ ತೀಕ್ಷ್ಣ್ಣತೆಗಾಗಿ ವಿಮರ್ಶಕರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ಪಡೆದಿದೆ. ವಿವಿಧ ಸಂಸ್ಕøತಿಗಳ ನಡುವೆ ಸಂವಾದವನ್ನು ಬೆಳೆಸುವಲ್ಲಿ ಬಿಐಎಫ್‍ಎಫ್ ಅಂತಹ ವೇದಿಕೆಗಳ ಪಾತ್ರ ಮಹತ್ವದ್ದಾಗಿದ್ದು, ಸತ್ಯದಲ್ಲಿ ಬೇರೂರಿರುವ ಹಾಸ್ಯವು ಹೇಗೆ ಪ್ರಬಲ ಪ್ರತಿರೋಧದ ಅಸ್ತ್ರವಾಗಬಲ್ಲದು ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿದೆ ಎಂದರು.

Post a Comment

0Comments

Post a Comment (0)