ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮೊಳಗಿದ ಕನ್ನಡ ಕಹಳೆ.

varthajala
0

ಕನ್ನಡ ಸಾಹಿತ್ಯ ಪರಿಷತ್ತು , ಮಹದೇವಪುರ ವಿಧಾನ ಸಭಾ ಕ್ಷೇತ್ರ ಘಟಕದ ವತಿಯಿಂದ  ಕನ್ನಡ ಉತ್ಸವ ಜರುಗಿತು. ಬೆಳಿಗ್ಗೆ , 8-30 ರಿಂದ  ವರ್ತೂರು ಕೋಡಿಯಿಂದ  ರಾಮಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರಗೆ  ವಿವಿಧ ಕಲಾ ತಂಡಗಳೊಂದಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ, ಮೆರವಣಿಗೆಯ ಚಾಲನೆಗೆ ಆರ್ ಸಿ ಬಿ ಸೂಪರ್ ಪ್ಯಾನ್ ಸುಗುಮಾರ್ ರವರು ಆಗಮಿಸಿದರು, ಗ್ರಾಮಸ್ಥರು ಹಾಗೂ ನಾಡು ನುಡಿ, ಕಲೆ, ಸಾಹಿತ್ಯಾಸಕ್ತರೊಂದಿಗೆತಾಯಿ ಭುವನೇಶ್ವರಿದೇವಿಯ ಮೆರವಣಿಗೆ ನಡೆಯಿತು.

 ವೇದಿಕೆಯ ಕಾರ್ಯಕ್ರಮದಲ್ಲಿ ವಿವಿಧ ಸಾಹಿತ್ಯಾತ್ಮಕ ಪುಸ್ತಕಗಳನ್ನು  ಹಂಚುವುದರೊಂದಿಗೆ , ವೇದಿಕೆ ಗಣ್ಯರಾದ , ಕಸಾಪ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪ್ರಕಾಶ ಮೂರ್ತಿ. ಸಾಹಿತಿ, ಇತಿಹಾಸ ತಜ್ಞರಾದ ಡಾ.ಸಿ.ಚಂದ್ರಪ್ಪ. ಕಸಾಪ ಕುವೆಂಪುನಗರ ಕ್ಷೇತ್ರ ಘಟಕದ ಅಧ್ಯಕ್ಷರಾದ ಹನುಮಂತ ಪಿ.ಶೆಟ್ಟಿ. ಚಾಲನೆ ಕೊಟ್ಟರು. ಕಸಾಪ  ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಎಂ.ಪ್ರಕಾಶ ಮೂರ್ತಿ  ಮಾತನಾಡುತ್ತಾ ಬೆಂಗಳೂರಿನಲ್ಲಿ  ಕನ್ನಡ ಉಳಿದರೆ, ಕರ್ನಾಟಕದಲ್ಲಿ ಕನ್ನಡ ಉಳಿದೀತು, ವಲಸಿಗರು ದಿನೇ ದಿನೇ ಹೆಚ್ಚಾಗುತ್ತಿರು ಈ ಸಂದರ್ಭದಲ್ಲಿ,  ಹಳ್ಳಿಗಳು ನಗರೀಕರಣವಾಗುತ್ತಿರುವ ಈ ವೇಳೆಯಲ್ಲಿ, ಸ್ಥಳೀಯ ಕನ್ನಡಿಗರು ಕನ್ನಡವನ್ನು ಕಾಪಾಡಿಕೊಳ್ಳುವ ದೀಕ್ಷೆ ತೊಡುವ ಅನಿವಾರ್ಯತೆ ಇದೆ ಎಂದು ಉದಾಹರಣೆಯೊಂದಿಗೆ ತಿಳಿಸಿದರ.ಕಸಾಪ ಮಹದೇವಪುರ ಕ್ಷೇತ್ರ, ಘಟಕ ದ ಅಧ್ಯಕ್ಷರಾದ  ಟಿ. ವೀರಭದ್ರಪ್ಪ ಮಾತನಾಡುತ್ತಾ  ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಹೋರಾಟಗಳು, ಹೇಗಿದ್ದವು.ಈಗಿರುವ ಕನ್ನಡಪರ ಸಂಘಟನೆಗಳು ಏನು ಮಾಡುತ್ತಿವೆ. ಆಂಗ್ಲಮಾಧ್ಯಮ ಶಾಲೆಗಳು ಹೆಚ್ಚುತ್ತಿವೆ. ವಲಸಿಗರ ಮತ್ತು ಹೊರೆ ದೇಶದವರ ಸಂಖ್ಯೆ ವಿಪರೀತವಾಗಿ ಬಿಟ್ಟಿದೆ.ಹೀಗೆ ಮುಂದುವರಿದರೆ ಸ್ಥಳಿಯರು ಮೂಲಭೂತ ಅಗತ್ಯತೆಗಳಿಗೂ‌ ಕಷ್ಟಪಡುವ ಕಾಲ ಬರುವ ಮುನ್ನ, ನಾವುಗಳು ಕನ್ನಡಾಭಿಮಾನದೊಂದಿಗೆ ಎಚ್ಚೆತ್ತುಕೊಳ್ಳಬೇಕೆಂದರು. 

ಕ್ಷೇತ್ರ ಘಟಕ ಕಾರ್ಯದರ್ಶಿ ಕನ್ನಡದ ಭಕ್ತ ಕಿರಣ್,  ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕೊಡುಗೆಗಳನ್ನು ಸ್ಮರಿಸಿದರು.ಹನುಮಂತ .ಟಿ. ಶೆಟ್ಟಿ. ಕುಮಾರವ್ಯಾಸ ಭಾರತದ ಗಮಕಗಳನ್ನು ಪ್ರಸ್ತುತಪಡಿಸಿದರು.

ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಂವಿಧಾನದ ಆಶಯದ ಗೀತೆಗಳು ಮತ್ತು ನೃತ್ಯ ಹಾಗೂ,ಜಾನಪದ, ಕನ್ನಡನಾಡು, ನುಡಿ ಅಭಿಮಾನ ತುಂಬುವ ಗೀತಗಾಯನ ಹಾಗೂ  ನೃತ್ಯಗಳನ್ನು ಪ್ರಸ್ತುತಪಡಿಸಿದರು. ವಿಚಾರ ಗೋಷ್ಠಿಯಲ್ಲಿ, ಕವಯಿತ್ರಿ  ಪ್ರೊ.ಸುಜಾತ ಸತ್ಯನಾರಾಯಣ  "ಕನ್ನಡ ಸಂಸ್ಕೃತಿಯನ್ನು ಜಾಗೃತಿ ಗೊಳಿಸುವ ಬಗೆ"  ವಿಷಯ ಮಂಡಿಸಿದರು. ಲೇಖಕರಾದ ಅಶೋಕ್ ತಿಪ್ಪಾ, "ಅಂತರ್ಜಾಲ ಯುಗದಲ್ಲಿ ಕನ್ನಡದಿಂದ ಎಲ್ಲವೂ ಸಾಧ್ಯ" ಕುರಿತು ವಿಷಯ ಮಂಡಿಸಿದರು. ಅಧ್ಯಕ್ಷತೆವಹಿಸಿದ್ದ  ಸಾಹಿತಿ, ಮತ್ತು ಅನುವಾದಕರಾದ ವಿನೋದ್ ಕುಮಾರ್ ವಿಷಯ ಮಂಡಿಸಿದ ವಿಧಾನಕ್ಕೆ ವಿಷಯ ಸಂಗ್ರಹ ಮೆಚ್ಚಿಕೊಂಡರು. ತರುವಾಯ ನಡೆದ ಕವಿಗೋಷ್ಠಿಯಲ್ಲಿ  ಆಶಯ ನುಡಿದ  ಬಿ.ಶೃಂಗೇಶ್ವರ‌,  ಕಾವ್ಯ ಮೀಮಾಂಸೆಯ ಹಿನ್ನೆಲೆಯಲ್ಲಿ ಕವಿ,ಕಾವ್ಯ, ಸಹೃದಯ, ವಿಮರ್ಶಕ,ವ್ಯುತ್ಪತ್ತಿ, ‌ಹೊಸ ಹೊಸ ಹೊಳಹು, ಸಾಮಾಜಿಕ ಹಿತಚಿಂತಕಗಳನ್ನು ಕುರಿತು, ಹೊಸ ತಲೆಮಾರಿನ ಯುವ ಕವಿಗಳಿಗೆ ಸ್ಫೂರ್ತಿ ತುಂಬುವಂತೆ ಮಾತಾಡಿದರು.

ಕವಿಗೋಷ್ಠಿಯಲ್ಲಿ ಡಾ.ರವೀಂದ್ರ, ಆರ್.ಎಸ್. ಅರುಣ್ ಕುಮಾರ್ ಪುಷ್ಪದಂತ, ಶ್ರೀಮತಿ ಮಾಲತಿ ಆರಾಧ್ಯ. ಮಂಜೇಶ್ವರ ಸಂಗಮೇಶ್ವರದ, ಆರ್‌.ಕಿರಣ್ ಕುಮಾರ್ ಯಾದವ್, ಸೂರ್ಯಕುಮಾರ್. ಪ್ರಕಾಶ್ ,ಶ್ರೀ ರಾಮ್. ಎಂ. ಉಪೇಂದ್ರ ಕುಮಾರ್ ಎಂ.ಆರ್. ಕನ್ನಡದ ಭಕ್ತ ಕಿರಣ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾದ  ಪೂಜಾ .ವಿ.  ಚೈತನ್ಯ.ಎಂ. ಭವ್ಯ.ಎಂ. ಮೇಘನಾ, ಯೋಗೇಶ್ವರ್, ಸಂದೀಪ್,  ವಿನೋದ್. ಮನೀಶ್ ಮತ್ತಿತರು ಕವನಗಳನ್ನು ವಾಚಿಸಿದರು. ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿ,ವಿಮರ್ಶಕ. ರಾಂ.ಕೆ.ಹನುಮಂತಯ್ಯ. ಅತಿ ಮುಖ್ಯವಾಗಿ  ವಿದ್ಯಾರ್ಥಿಗಳನ್ನು. ಕೇಂದ್ರ ಬಿಂದುವಾಗಿರಿಸಿಕೊಂಡು ಮಾತನಾಡುತ್ತ, ಪ್ರತಿ ಕವಿಗೋಷ್ಠಿಗೊಂಡು ಒಂದು ಹೊಸ ಕವಿತೆ ಬರೆದು ವಾಚಿಸಿದರೆ, ವರ್ಷದೊಳಗೆ ಒಂದು ಕವನ ಸಂಕಲನ ಲೋಕಾರ್ಪಣೆ ಮಾಡಬಹುದೆಂದು ತಿಳಿಸಿದರು. ಇಡೀ ಕಾರ್ಯಕ್ರಮದ ಸಂಯೋಜನೆ ಮತ್ತು ನಿರ್ವಹಣೆಯ ಜವಾಬ್ದಾರಿ  ಹೊತ್ತ ಕನ್ನಡ ಕಾಯಕ ಜೀವಿ, ಪದಾಧಿಕಾರಿ, ಚಂದ್ರಶೇಖರ ಮೂರ್ತಿ.ಎಸ್.ಪಿ. ರವರ ಕಾರ್ಯವೈಖರಿ, ಸಂಘಟನೆ, ಮತ್ತು  ಅಕ್ಕರೆ ಆತ್ಮೀಯತೆಯ ಗುಣಗಳನ್ನು  ಮೆಚ್ಚಿಕೊಂಡರು.  ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಚಂದನ ವನ ತಂಡದವರು  ಗೀತಗಾಯನ ಪ್ರಸ್ತುತ ಪಡಿಸಿದರು. ವಿವಿಧ ಕ್ಷೇತ್ರಗಳಲ್ಲಿ   ಸಾಧನೆಗೈದು ಎಲೆಮರೆ ಕಾಯಿಯಂತಿದ್ದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

 ಕ್ಷೇತ್ರ ಘಟಕದ ಕಾರ್ಯದರ್ಶಿಗಳಾದ ಕನ್ನಡದ ಭಕ್ತ ಕಿರಣ್, ಉಪೇಂದ್ರ ಕುಮಾರ್ ಎಂ.ಆರ್.  ವಂದನಾರ್ಪಣೆ ತಿಳಿಸಿದರು

Post a Comment

0Comments

Post a Comment (0)