ಶ್ರೀ ಕೃಷ್ಣ ಪದವಿ ಕಾಲೇಜಿನಲ್ಲಿ ಸರ್ವೋದಯ ದಿನಾಚರಣೆ ಆಚರಣೆ

varthajala
0

  ಐಟಿಐ ಲೇಔಟ್ ಬನಶಂಕರಿ 3ನೇ ಹಂತದ ಕೃಷ್ಣ ಪದವಿ ಕಾಲೇಜಿನಲ್ಲಿ  ಸರ್ವೋದಯ ದಿನಾಚರಣೆ (ಹುತಾತ್ಮರ ದಿನ)ವನ್ನು  ಆಚರಿಸಲಾಯಿತು. ಕಾಲೇಜು ಆವರಣದಲ್ಲಿ  ನಡೆದ ಕಾರ್ಯಕ್ರಮಕ್ಕೆ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಂ. ರುಕ್ಮಾಂಗದ ನಾಯ್ಡು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.


ಶೈಕ್ಷಣಿಕ ನಿರ್ದೇಶಕ ಮನೋಹರ್, ಪ್ರಾಂಶುಪಾಲೆ ಡಾ. ಎನ್. ಉಷಾ ಕುಮಾರಿ, ಎನ್ಎಸ್ಎಸ್ ಘಟಕದ ಸಂಚಾಲಕ ಅವಿನಾಶ್, ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ಡಾ. ಚೌಡಯ್ಯ ಸೇರಿದಂತೆ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಹುತಾತ್ಮರಿಗೆ ಮೌನಾಚರಣೆ ಸಲ್ಲಿಸಿದ ಬಳಿಕ ಮಾತನಾಡಿದ ಡಾ. ರುಕ್ಮಾಂಗದ ನಾಯ್ಡು, ಮಹಾತ್ಮ ಗಾಂಧೀಜಿ ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕರೆಂದು ಸ್ಮರಿಸಿದರು.

 ಗಾಂಧೀಜಿಯ ಆದರ್ಶಗಳು ಇಂದಿನ ಯುವಜನತೆಗೆ ದಾರಿ ತೋರಿಸುವ ಶಕ್ತಿಯಾಗಿದ್ದು, ವಿದ್ಯಾರ್ಥಿಗಳು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ್ ತಿಲಕ್ ಸೇರಿದಂತೆ ಅನೇಕ ಮಹನೀಯರ ಪಾತ್ರವನ್ನು ಅವರು ನೆನಪಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಾಕಥಾನ ಕಾರ್ಯಕ್ರಮವೂ ನಡೆಯಿತು.


Post a Comment

0Comments

Post a Comment (0)