ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು- ಮುಖ್ಯಮಂತ್ರಿ ಸಿದ್ದರಾಮಯ್ಯ

varthajala
0

 ಬೆಂಗಳೂರು, ಫೆಬ್ರವರಿ 13, (ಕರ್ನಾಟಕ ವಾರ್ತೆ): ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು. ನಮ್ಮ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಕರೆದಿದ್ದರು. ಅವು ಕೇವಲ ಕಾಂಕ್ರೀಟ್ ರಚನೆಗಳಲ್ಲ, ಬದಲಿಗೆ ನಮ್ಮ ಕೃಷಿ ಸಮೃದ್ಧಿ ಮತ್ತು ಕೈಗಾರಿಕಾ ಪ್ರಗತಿಯ ಜೀವನಾಡಿಗಳಾಗಿವೆ, ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.


ಇಂದು ಬೆಂಗಳೂರಿನ ಜೆ.ಎನ್. ಟಾಟಾ ಸಭಾಂಗಣದಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ, ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆ, ಕೇಂದ್ರ ಜಲ ಆಯೋಗ (CWC), ಭಾರತೀಯ ವಿಜ್ಞಾನ ಸಂಸ್ಥೆ (IISc) ಮತ್ತು ವಿಶ್ವಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ (ICDS)-2026ನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ದೇವರಾಜ ಅರಸು ಅವರಂತಹ ನಾಯಕರ ನೀರಾವರಿ ಕ್ರಾಂತಿಯನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

ಅಣೆಕಟ್ಟು ಸುರಕ್ಷತೆ: ರಾಷ್ಟ್ರೀಯ ಭದ್ರತೆಯ ಆದ್ಯತೆ:

ಭಾರತವು ವಿಶ್ವದ ಮೂರನೇ ಅತಿದೊಡ್ಡ ಅಣೆಕಟ್ಟು ಹೊಂದಿರುವ ದೇಶವಾಗಿದ್ದು (6,628 ಅಣೆಕಟ್ಟುಗಳು), ಕರ್ನಾಟಕವು 231 ಅಣೆಕಟ್ಟುಗಳೊಂದಿಗೆ ದೇಶದಲ್ಲೇ ಆರನೇ ಸ್ಥಾನದಲ್ಲಿದೆ. ನಮ್ಮ ದೇಶದ ಶೇ. 70 ರಷ್ಟು ಅಣೆಕಟ್ಟುಗಳು 25 ವರ್ಷಗಳಿಗಿಂತ ಹಳೆಯದಾಗಿವೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಹಠಾತ್ ಪ್ರವಾಹ, ಭೂಕಂಪನ ಭೀತಿ ಮತ್ತು ಹೂಳು ತುಂಬುವಿಕೆಯಂತಹ ಸವಾಲುಗಳನ್ನು ಎದುರಿಸಲು ಅಣೆಕಟ್ಟುಗಳ ಸುರಕ್ಷತೆಯನ್ನು 'ರಾಷ್ಟ್ರೀಯ ಭದ್ರತೆ'ಯ ಭಾಗವಾಗಿ ಪರಿಗಣಿಸುವುದು ಅನಿವಾರ್ಯ ಎಂದು ಅವರು ಒತ್ತಿ ಹೇಳಿದರು.

ತಂತ್ರಜ್ಞಾನ ಮತ್ತು ಸೈಬರ್ ಭದ್ರತೆ:
ಅಣೆಕಟ್ಟುಗಳು ಡಿಜಿಟಲ್ ರೂಪದಲ್ಲಿ ಕಾರ್ಯಾಚರಣೆಗೊಳ್ಳುತ್ತಿರುವ ಇಂದಿನ ಕಾಲದಲ್ಲಿ, ತಾಂತ್ರಿಕ ವಿಧ್ವಂಸಕ ಕೃತ್ಯಗಳು ಮತ್ತು ಸೈಬರ್ ದಾಳಿಗಳಿಂದ ಅಣೆಕಟ್ಟುಗಳನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಭದ್ರತೆಯ ಭಾಗವಾಗಿ ಸೈಬರ್ ಸುರಕ್ಷತೆಯನ್ನು ಅನುಸರಿಸಬೇಕು ಎಂದು ತಿಳಿಸಿದರು.

ಅಂತರರಾಜ್ಯ ಸಹಕಾರ: ನೀರು ಮತ್ತು ಅಣೆಕಟ್ಟುಗಳ ಸುರಕ್ಷತೆಗೆ ರಾಜಕೀಯ ಗಡಿಗಳಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 'ಸಹಕಾರ ಸಂಯುಕ್ತ' ವ್ಯವಸ್ಥೆಯಡಿ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ತುರ್ತು ಕ್ರಿಯಾ ಯೋಜನೆ: ಅಣೆಕಟ್ಟುಗಳ ಸುರಕ್ಷತಾ ತಪಾಸಣೆ ಮತ್ತು ತುರ್ತು ಕ್ರಿಯಾ ಯೋಜನೆಗಳು (Emergency Action Plans) ಕೇವಲ ಔಪಚಾರಿಕ ದಾಖಲೆಗಳಾಗದೆ, ಪ್ರಾಯೋಗಿಕವಾಗಿ ಜಾರಿಯಲ್ಲಿರಬೇಕು.

ಮಾನವೀಯ ದೃಷ್ಟಿಕೋನ: ಬೃಹತ್ ಯೋಜನೆಗಳಿಂದ ಸ್ಥಳಾಂತರಗೊಳ್ಳುವ ಜನರ ಪುನರ್ವಸತಿ ಪ್ರಕ್ರಿಯೆಯು ಪಾರದರ್ಶಕ ಮತ್ತು ಮಾನವೀಯತೆಯಿಂದ ಕೂಡಿರಬೇಕು.

ಅಭಿವೃದ್ಧಿಯ ನಿಜವಾದ ಮಾಪನ ನಾವು ಎಷ್ಟು ಎತ್ತರದ ಅಣೆಕಟ್ಟು ಕಟ್ಟುತ್ತೇವೆ ಎಂಬುದರ ಮೇಲಲ್ಲ, ಬದಲಾಗಿ ನಾವು ಅದನ್ನು ಎಷ್ಟು ಸುರಕ್ಷಿತವಾಗಿ ನಿರ್ವಹಿಸುತ್ತೇವೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ ಎಂದು ತಿಳಿಸಿದರು.

ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಕೃμÁ್ಣ ಮೇಲ್ದಂಡೆ ಯೋಜನೆ ಜಾರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಣೆಕಟ್ಟುಗಳ ಬಳಿಯ 500 ಮೀಟರ್ ನಿಬರ್ಂಧ ಸಡಿಲಿಕೆಗೆ ಮನವಿ
ರಾಜ್ಯದ 58 ಅಣೆಕಟ್ಟುಗಳ ದುಸ್ತಿಗೆ 1,500 ಕೋಟಿ ರೂಪಾಯಿ ವೆಚ್ಚ
ಅಣೆಕಟ್ಟು ಸುರಕ್ಷತೆಯಲ್ಲಿ ಕರ್ನಾಟಕ ದೇಶಕ್ಕೆ ಮಾದರಿ

ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಕೇಂದ್ರ ಸರ್ಕಾರ ಅನುಮತಿ ನೀಡಿದ ಕೂಡಲೇ ರಾಜ್ಯ ಸರ್ಕಾರ ಮೇಕೆದಾಟು ಮತ್ತು ಕೃμÁ್ಣ ಮೇಲ್ದಂಡೆ ಯೋಜನೆಗಳನ್ನು ಅನುμÁ್ಠನಕ್ಕೆ ತರಲಿದೆ. ಈ ಮಹತ್ವದ ಯೋಜನೆಗಳಿಗೆ ಕೇಂದ್ರದಿಂದ ಶೀಘ್ರದಲ್ಲೇ ಒಪ್ಪಿಗೆ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಬೆಂಗಳೂರಿನ ಭವಿಷ್ಯಕ್ಕಾಗಿ ಮೇಕೆದಾಟು ಅಗತ್ಯ:

ಇಂದು ಇಡೀ ವಿಶ್ವವೇ ಬೆಂಗಳೂರಿನತ್ತ ನೋಡುತ್ತಿದೆ. ನಗರದ ಜನಸಂಖ್ಯೆ ಈಗಾಗಲೇ 1.5 ಕೋಟಿ ಮೀರಿದ್ದು, ದಿನೇ ದಿನೇ ಬೆಳೆಯುತ್ತಿದೆ. ಈ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ ನಮಗೆ ಅನಿವಾರ್ಯ. ಈ ಯೋಜನೆಗೆ ಸುಪ್ರೀಂ ಕೋರ್ಟ್‍ನಲ್ಲಿ ನಮಗೆ ಪೂರಕವಾದ ತೀರ್ಪು ಬಂದಿದ್ದರೂ, ಕೇಂದ್ರದ ಅಂತಿಮ ಅನುಮತಿಗಾಗಿ ಕಾಯುತ್ತಿದ್ದೇವೆ. ಈ ಯೋಜನೆಯಿಂದ ಕೇವಲ ಕುಡಿಯುವ ನೀರು ಮಾತ್ರವಲ್ಲದೆ, 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯೂ ಸಾಧ್ಯವಾಗಲಿದೆ ಎಂದರು.

ಪ್ರವಾಸೋದ್ಯಮಕ್ಕೆ ಉತ್ತೇಜನ: ನಿಯಮ ಸಡಿಲಿಕೆ:

ಅಣೆಕಟ್ಟುಗಳ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಇರುವ ನಿಬರ್ಂಧವನ್ನು ಸಡಿಲಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಈ ನಿಬರ್ಂಧ ಸಡಿಲಿಕೆಯಿಂದ ಅಣೆಕಟ್ಟುಗಳ ಬಳಿ ಪ್ರವಾಸೋದ್ಯಮ ಬೆಳೆಯಲು ಸಾಧ್ಯವಾಗುತ್ತದೆ. ಇದು ಸ್ಥಳೀಯ ಆರ್ಥಿಕತೆಗೆ ಹೆಚ್ಚಿನ ಶಕ್ತಿ ತುಂಬಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅಣೆಕಟ್ಟುಗಳ ಸುರಕ್ಷತೆ ಮತ್ತು ಆಧುನೀಕರಣ:

ಅಣೆಕಟ್ಟುಗಳನ್ನು ರಾಷ್ಟ್ರದ ಶಕ್ತಿ ಮತ್ತು ಪ್ರಗತಿಯ ಸಂಕೇತ ಎಂದು ಬಣ್ಣಿಸಿದ ಅವರು, ರಾಜ್ಯದ 58 ಅಣೆಕಟ್ಟುಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಸರ್ಕಾರ 1,500 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ.  

ಸಾಂಪ್ರದಾಯಿಕ ಮಾದರಿಗಳಿಂದ ಅಣೆಕಟ್ಟುಗಳ ಸುರಕ್ಷತೆ ಕಷ್ಟಸಾಧ್ಯ. ಹವಾಮಾನ ಬದಲಾವಣೆ ಮತ್ತು ಅನಿರೀಕ್ಷಿತ ಪ್ರವಾಹಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳು ಇಂದಿನ ತುರ್ತು ಅಗತ್ಯವಾಗಿವೆ.

ಭಾರತವು ಇಂದು ವಿಶ್ವದಲ್ಲೇ 3ನೇ ಅತಿ ಹೆಚ್ಚು (6,500) ಅಣೆಕಟ್ಟುಗಳನ್ನು ಹೊಂದಿದೆ. ಅಣೆಕಟ್ಟುಗಳನ್ನು 'ಆಧುನಿಕ ಭಾರತದ ದೇವಾಲಯಗಳು' ಎಂದು ಕರೆದ ನೆಹರೂ ಅವರ ದೂರದೃಷ್ಟಿಯೇ ಇದಕ್ಕೆ ಕಾರಣ.

ಅಣೆಕಟ್ಟುಗಳು ಕೇವಲ ಇಂಜಿನಿಯರ್‍ಗಳ ಆಸ್ತಿಯಲ್ಲ; ಅವು ದೇಶದ ಆಹಾರ ಭದ್ರತೆ, ಇಂಧನ ಭದ್ರತೆ ಮತ್ತು ಸಾಮಾಜಿಕ ಭದ್ರತೆಯ ತಳಹದಿ. ಅಣೆಕಟ್ಟು ಸುರಕ್ಷತೆಯಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿ. ಎಂದು ತಿಳಿಸಿದರು.

ಕರ್ನಾಟಕವು ಇಂಜಿನಿಯರಿಂಗ್ ಶಿಕ್ಷಣದ ಕೇಂದ್ರವಾಗಿದ್ದು, ಪ್ರತಿ ವರ್ಷ 1.5 ಲಕ್ಷ ಇಂಜಿನಿಯರ್‍ಗಳು ಇಲ್ಲಿಂದ ಹೊರಬರುತ್ತಿದ್ದಾರೆ. 1902ರಲ್ಲೇ ಏμÁ್ಯದ ಮೊದಲ ಜಲವಿದ್ಯುತ್ ಯೋಜನೆಯನ್ನು ಶಿವನಸಮುದ್ರದಲ್ಲಿ ಆರಂಭಿಸಿದ ಹೆಮ್ಮೆ ನಮ್ಮದು ಎಂದು ಅವರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ, ದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ವಿಶ್ವಬ್ಯಾಂಕ್ ಉಪಾಧ್ಯಕ್ಷ ಜೊಹನ್ನೆಸ್ ಕಾರ್ನೆಲ್ಸ್ ಮಾರಿಯಾ ಜಟ್, ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಸುಬೋಧ್ ಯಾದವ್, ಕೇಂದ್ರ ಜಲ ಆಯೋಗದ ಮಖ್ಯಸ್ಥ ಅನುಪಮ್ ಪ್ರಸಾದ, ಜಪಾನಿನ ಐಸಿಹೆಚ್‍ಎಆರ್‍ಎಂ ಕಾನಿರ್ವಾಹಕ ನಿರ್ದೇಶಕ ಪ್ರೊ.ತೊಶಿಯೋ ಕೊಯ್ಕೆ, ಬೃಹತ್ ಅಣೆಕಟ್ಟು ಅಂತರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಿ.ಕೆ.ಶರ್ಮಾ, ಭಾರತೀಯ ವಿಜ್ಞಾನ ಸಂಸ್ಥೆಯ ಡೀನ್ ಪ್ರೊ.ಸತ್ಯಂ ಸುವಾಸ್, ಸೇರಿದಂತೆ ಕೇಂದ್ರ ಜಲಶಕ್ತಿ ಸಚಿವಾಲಯದ ಪ್ರತಿನಿಧಿಗಳು, ವಿಶ್ವಬ್ಯಾಂಕ್ ಅಧಿಕಾರಿಗಳು, ಐಐಎಸ್‍ಸಿ ವಿಜ್ಞಾನಿಗಳು ಹಾಗೂ ದೇಶ-ವಿದೇಶಗಳ ಅಣೆಕಟ್ಟು ತಜ್ಞರು ಪಾಲ್ಗೊಂಡಿದ್ದರು.

Post a Comment

0Comments

Post a Comment (0)