ಸಹಾಯಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ದಾಖಲಾತಿ ಸಲ್ಲಿಕೆ

varthajala
0

ಬೆಂಗಳೂರು, ಸೆಪ್ಟೆಂಬರ್ 27 (ಕರ್ನಾಟಕ ವಾರ್ತೆ): ಕರ್ನಾಟಕ ಲೋಕಸೇವಾ ಆಯೋಗವು  2019ನೇ ಸಾಲಿನ ವಿವಿಧ ಇಲಾಖೆಯಲ್ಲಿನ ಸಹಾಯಕರು / ಪ್ರಥಮ ದರ್ಜೆ ಸಹಾಯಕರ ಮತ್ತು ಕರ್ನಾಟಕ ಭವನದಲ್ಲಿನ ಸಹಾಯಕರ ಹದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ  9ನೇ ಸೆಪ್ಟಂಬರ್ 2021ರಂದು ಅಂತರ್‍ಜಾಲದಲ್ಲಿ ಪ್ರಕಟಿಸಿದೆ.

 
ಅರ್ಹತಾ ಪಟ್ಟಿಯಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯ್ತಿ ಪಡೆದು, ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳು ಸದರಿ ಹುದ್ದೆಗಳ ಆನ್‍ಲೈನ್ ಅರ್ಜಿಯಲ್ಲಿ ಕೋರಲಾದ ಮೀಸಲಾತಿಗನುಗುಣವಾಗಿ ಪೂರಕ ಪ್ರಮಾಣ ಪತ್ರಗಳು, ಜನ್ಮದಿನಾಂಕ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದಂತೆ, ಪೂರಕ ಪ್ರಮಾಣ ಪತ್ರಗಳ ಮೇಲೆ ಅವರುಗಳ ಸಹಿ, ಹೆಸರು, ನೋಂದಣಿ ಸಂಖ್ಯೆಯನ್ನು ನಮೂದಿಸಿದ ಸ್ವಯಂ ದೃಢೀಕೃತದೊಂದಿಗೆ ಎರಡು ಜೆರಾಕ್ಸ್ ಪ್ರತಿಗಳನ್ನು ಎರಡು ಭಾವ ಚಿತ್ರ, ಆನ್‍ಲೈನ್ ಅರ್ಜಿ/ಪ್ರವೇಶ ಪತ್ರದ ಪ್ರತಿಗಳು ಮತ್ತು ಯಾವುದಾದರೊಂದು ಗುರುತಿನಚೀಟಿಯ ಪ್ರತಿ ಮತ್ತು ಸೂಚನಾ ಪತ್ರದೊಂದಿಗೆ ಲಗತ್ತಿಸಿರುವ ಘೋಷಣಾ ಪತ್ರದೊಂದಿಗೆ “ASSISTANT/FDA 2019 (RPC)  ಅಥವಾASSISTANT/FDA -2019(HK),  ಅಥವಾASSISTANT OF KARNATAKA BHAVAN”   ಎಂಬ ಶೀರ್ಷಿಕೆಯೊಂದಿಗೆ ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001 ಈ ವಿಳಾಸಕ್ಕೆ 16ನೇ ಅಕ್ಟೋಬರ್ 2021ರೊಳಗೆ ತಲುಪುವಂತೆ ಸ್ಫೀಡ್‍ಪೋಸ್ಟ್ ಅಂಚೆ ಮೂಲಕ ಸಲ್ಲಿಸುವಂತೆ ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು/ಎಸ್.ಎಂ.ಎಸ್./ಇ-ಮೇಲ್ ಜಾರಿ ಮಾಡಲು ಕ್ರಮವಹಿಸಲಾಗಿರುತ್ತದೆ. ಅಂಗವಿಕಲ (ಅಂಧ/ದೃಷ್ಟಿ ಮಾಂದ್ಯ) ಅಭ್ಯರ್ಥಿಗಳು ಇದರೊಂದಿಗೆ ನಿಯಮಾನುಸಾರ ವೈದ್ಯಕೀಯ ತಪಾಸಣಿಗೆ ಹಾಜರಾಗುವಂತೆ ತಿಳಿಸುವ ಸೂಚನಾ ಪತ್ರ-02/ಎಸ್.ಎಂ.ಎಸ್./ಇ-ಮೇಲ್ ಅನ್ನು ಸಹ ಜಾರಿ ಮಾಡಲು ಸಹ ಕ್ರಮವಹಿಸಲಾಗಿರುತ್ತದೆ ಹೆಚ್ಚಿನ ಮಾಹಿತಿಯನ್ನು ಕೆ.ಪಿ.ಎಸ್.ಸಿ ವೆಬ್‍ಸೈಟ್ http://kpsc.kar.nic.in   ಗೆ ಭೇಟಿ ನೀಡಿ ಪಡೆಯಬಹುದು ಎಂದು ಅಧಕೃತ ಪ್ರಕಟಣೆ ತಿಳಿಸಿದೆ.
Tags

Post a Comment

0Comments

Post a Comment (0)