ಪ್ರೌಢಶಾಲಾ ಸಹಶಿಕ್ಷಕರ ವರ್ಗಾವಣೆ : ಗಣಕೀಕೃತ ಕೌನ್ಸಿಲಿಂಗ್

varthajala
0


ಬೆ0ಗಳೂರು ನಗರ ಜಿಲ್ಲೆ, ಅ.25, (ಕರ್ನಾಟಕ ವಾರ್ತೆ):  2019-20 ನೇ ಸಾಲಿನ ಕಡ್ಡಾಯ ಮತ್ತು ಹೆಚ್ಚುವರಿ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ವರ್ಗಾವಣೆಯನ್ನು ಜಿಲ್ಲೆಯೊಳಗೆ ಖಾಲಿ ಹುದ್ದೆಗಳ ಲಭ್ಯತೆ ಮೇರೆಗೆ ಸ್ಥಳ ನಿಯುಕ್ತಿ ಪ್ರಯೋಜನವನ್ನು ನೀಡುವುದಕ್ಕೆ ಸ್ಥಳ ಆಯ್ಕೆ ಮಾಡಿಕೊಳ್ಳಲು ಗಣಕೀಕೃತ ವಿಶೇಷ ಕೌನ್ಸಿಲಿಂಗ್‌ನ್ನು ದಿನಾಂಕ 28/10/2021 ರಂದು ಬೆಳಿಗ್ಗೆ 11-00 ಗಂಟೆಗೆ ಅಪರ ಆಯುಕ್ತರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಐವಾನ್-ಶಾಹಿ ಬಡಾವಣೆ ಕಲಬುರಗಿಯಲ್ಲಿ  ಹಮ್ಮಿ ಕೊಳ್ಳಲಾಗಿದೆ.ಈ ಕುರಿತು ವೇಳಾಪಟ್ಟಿಯನ್ನು ಕೇಂದ್ರ ಕಛೇರಿಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರುರವರಿAದ ಪ್ರಕಟವಾಗಿದ್ದು, ವರ್ಗಾವಣೆಯ ಬಗ್ಗೆ ಹಚ್ಚಿನ ಮಾಹಿತಿಯನ್ನು (ಕೌನ್ಸಿಲಿಂಗ್ ಆದ್ಯತಾ ಪಟ್ಟಿ ಹಾಗೂ ಖಾಲಿ ಹುದ್ದೆಗಳ ಮಾಹಿತಿ ) ಅಪರ ಆಯುಕ್ತರ ಕಛೇರಿ  ಕಲಬುರಗಿ ಅಂತರ್ಜಾಲ  ಹಾಗೂ   ಆಯುಕ್ತರು, ಸಾರ್ವಜನಿಕಶಿಕ್ಷಣಇಲಾಖೆ   www. schooleducation.kar.nic.inದಿಂದ ಮಾಹಿತಿ ಪಡೆಯಬಹುದಾಗಿದೆ  ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ. 


Tags

Post a Comment

0Comments

Post a Comment (0)