ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ

varthajala
0


ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 25(ಕರ್ನಾಟಕ ವಾರ್ತೆ): 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಕನ್ನಡಕ್ಕಾಗಿ ನಾವು” ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ “ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ”ಯನ್ನು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಆಯೋಜಿಸಲಾಗಿದೆ. 

ಸ್ಪರ್ಧೆಯು ಸಾರ್ವಜನಿಕರಿಗಾಗಿ ನಡೆಯಲಿದ್ದು, ಎಲ್ಲಾ ಕನ್ನಡಿಗರಿಗೆ ಭಾಗವಹಿಸಲು ಅವಕಾಶವಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಕನ್ನಡನಾಡಿನ ಜನಪದ ಬದುಕು, ಸಾಹಿತ್ಯ, ನಾಡು-ನುಡಿ ಅಥವಾ ಕಲೆ-ಸಂಸ್ಕೃತಿ ಈ ಯಾವುದಾದರೂ ಒಂದು ವಿಷಯದ ಬಗ್ಗೆ 3 ರಿಂದ 4 ನಿಮಿಷಗಳ ಕಾಲ ನಿರರ್ಗಳವಾಗಿ ಒಂದೂ ಅನ್ಯಭಾಷೆಯ ಪದಗಳನ್ನು ಬಳಸದೇ ಕೇವಲ ಕನ್ನಡದಲ್ಲೇ ಮಾತನಾಡುವ ದೃಶ್ಯಚಿತ್ರ(ಸೆಲ್ಪಿ) ಗಳನ್ನು ತಮ್ಮದೇ ಫೇಸ್ಬುಕ್ ಗೋಡೆಯಲ್ಲಿ ಅಥವಾ ತಮ್ಮದೇ ಯುಟ್ಯೂಬ್ ವಾಹಿನಿಯಲ್ಲಿ ಇದೇ 2021ರ ಅಕ್ಟೋಬರ್ 24 ರಿಂದ 29ರವರೆಗೆ ರಾತ್ರಿ 10.00 ಗಂಟೆಯೊಳಗೆ ಕೊಂಡಿಗೆ ಅಪ್ಲೋಡ್ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಆರಾಧ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ.


Post a Comment

0Comments

Post a Comment (0)