ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ಸಂವಿಧಾನ ದಿನಾಚರಣೆ ಹಾಗೂ ವಿಶೇಷೋಪನ್ಯಾಸ

varthajala
0

 ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವಿಭಾಗದಿಂದ ದಿನಾಂಕ:26.11.2021 ರಂದು ಸಂವಿಧಾನ ದಿನಾಚರಣೆ ಹಾಗೂ ವಿಶೇಷೋಪನ್ಯಾಸ ಕಾರ್ಯಕ್ರಮವನ್ನು ಬೆಳಿಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ಸಭಾಂಗಣ, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-18 ಇಲ್ಲಿ  ಆಯೋಜಿಸಲಾಗಿತ್ತು.

    ಕಾರ್ಯಕ್ರಮವು ಪ್ರಾರ್ಥನೆಯ ಮೂಲಕ ಆರಂಭವಾಯಿತು. ಪ್ರಾರ್ಥನೆಯನ್ನು ಕಸಂವಿಯ ಸಂಶೋಧನಾ ಸಹಾಯಕರಾದ ವಿದುಷೀ, ಸಾವಿತ್ರೀ ಪೂಜಾರಿಯವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅತಿಥಿ ಗಣ್ಯರೆಲ್ಲರು ಪುಷ್ಪವನ್ನು ಅರ್ಪಿಸಿ ನಮಸ್ಕರಿಸಿದರು.

     ಕಾರ್ಯಕ್ರಮದ ಆರಂಭದಲ್ಲಿ ಪ್ರಸ್ತಾವಿಕ ನುಡಿಯನ್ನು ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜಕರು ಹಾಗೂ ಪ್ರಸಾರಾಂಗದ ಉಪ ನಿರ್ದೇಶಕರಾದ ಡಾ. ಗೋವಿಂದರವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ 2020-21 ರಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು

     ಸಂವಿಧಾನ ದಿನಾಚರಣೆ ಹಾಗೂ ವಿಶೇಷೋಪನ್ಯಾಸ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದಂತಹ ಡಾ. ಸಿ. ನಂಜುAಡಯ್ಯ, ಪ್ರಶಾಸನ ಸಮಿತಿ ಸದಸ್ಯರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಇವರು ಮಾತನಾಡುತ್ತಾ ಕರಡು ಸಮಿತಿ ರಚನೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ ಜೊತೆಯಲ್ಲಿ ಕೋಲಾರದ ಚನ್ನಯ್ಯ ಎನ್ನುವವರು ಕೂಡ ಇದ್ದರು ಎಂಬುವ ವಿಷಯವನ್ನು ಪ್ರಸ್ತಾವನೆಯನ್ನು ಮಾಡಿದರು.

      ಸಂವಿಧಾನ ದಿನಾಚರಣೆ ಹಾಗೂ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷೋಪನ್ಯಾಸಕರಾಗಿ ಆಗಮಿಸಿದಂತಹ ಡಾ. ಹೆಚ್. ವೆಂಕಟೇಶಪ್ಪ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು, ಇವರು ಮಾತನಾಡುತ್ತಾ ಸಂವಿಧಾನ ಎನ್ನುವಂಥದ್ದು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಇರುವಂತದ್ದಾಗಿದೆ. ಮತ್ತು ಸಂವಿಧಾನ ರಚನಾ ಸಂದರ್ಭದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರು ಅನೇಕ ಅಡೆ ತಡೆಗಳನ್ನು ಅನುಭವಿಸಿದರು ಹಾಗೂ ಅನೇಕ ರಾಷ್ಟçಗಳ ಸಂವಿಧಾನಕ್ಕೆ ಸಂಬAಧಿಸಿದ ವಿಷಯಗಳನ್ನು ಅಧ್ಯಯನ ಮಾಡಿ ಅತ್ಯಂತ ಕಡಿಮೆ ಅವಧಿಯಲ್ಲಿ ಕರಡುಪ್ರತಿಯನ್ನು ರಚಿಸಿದರು ಎಂಬುವ ವಿಷಯಗಳನ್ನು ಸವಿಸ್ತೃತವಾಗಿ ನುಡಿದರು.

     ಸಂವಿಧಾನ ದಿನಾಚರಣೆ ಹಾಗೂ ವಿಶೇಷೋಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಂ. ಕೊಟ್ರೇಶ್ ರವರು ವಹಿಸಿದ್ದರು. ಅವರು ಮಾತನಾಡತ್ತಾ ಡಾ. ಬಿ. ಆರ್ .ಅಂಬೇಡ್ಕರ್ ರವರ ಅಧ್ಯಯನ ಶೀಲತೆ ಹೇಗಿತ್ತು ಎಂದರೆ ಗ್ರಮಥಾಲಯದಲ್ಲಿ ಅವರು ಪುಸ್ತಕಗಳನ್ನು ಓದುತ್ತಾ ಅವರ ಮುಂದೆ ಪುಸ್ತಕಗಳ ರಾಶಿಯೇ ಬೆಳೆದು ನಿಂತಿತ್ತು, ಪುಸ್ತಕಗಳ ರಾಶಿಯ ನಡುವೆ ಇದ್ದ ಡಾ. ಅಂಬೇಡ್ಕರ್ ರವರನ್ನು ಕಾಣದೆ ಗ್ರಂಥಾಲಯದ ಸಿಬ್ಬಂದಿ ಸಮಯ ಮುಗಿದಿದ್ದರಿಂದ ಗ್ರಂಥಾಲಯವನ್ನು ಬೀಗ ಹಾಕೊಕೊಂಡು ಹೋಗಿರುತ್ತಾರೆ, ಆ ಸಂದರ್ಭದಲ್ಲಿ ಡಾ. ಬಿ. ಆರ್ .ಅಂಬೇಡ್ಕರ್ ರವರು ಕಣ್ಣು ಮಂಜಾಗ್ತಿದೆಯಲ್ಲ ಎಂದು ನೋಡಿದಾಗ ಕತ್ತಲೆಯಾಗಿತ್ತು, ಗ್ರಂಥಾಲಯವನ್ನು ಮುಚ್ಚಿಕೊಂಡು ಹೋಗಿರುವುದು ತಿಳಿಯುತ್ತದೆ. ಆಗ  ಇವತ್ತು ಯಾವುದೇ ಒತ್ತಡವಿಲ್ಲದೇ ಜಂಜಾಟವಿಲ್ಲದೇ ನಿರ್ವಿಘ್ನವಾಗಿ ರಾತ್ರಿ ಪೂರ್ಣ ಪುಸ್ತಕಗಳನ್ನು ಆನಂದದಿAದ ಓದಬಹುದು ಎಂದು ಬಾವಿಸಿದರು ಎಂಬುವ ವಿಷಯಗಳನ್ನು ರಸವತ್ತಾಗಿ ನುಡಿದರು ಮತ್ತು ಯಾವುದೇ ಒಂದು ವರ್ಗಕ್ಕೆ ಸೀಮಿತಮಾಡದೆ ಎಲ್ಲರೂ ಆರಾಧಿಸುವಂತಾಗಬೇಕು.  ಡಾ. ಬಿ.ಆರ್ .ಅಂಬೇಡ್ಕರ್ ರವರು ಎಂಬುವ ವಿಚಾರವನ್ನು ನುಡಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ಪ್ರಾಧ್ಯಾಪಕರುಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಗ್ರಂಥಪಾಲಕರಾದ ಅರುಣ್ ಕುಮಾರ್ ರವರು ನಿರ್ವಹಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ವಿದ್ವಾನ್, ಶಿವಮೂರ್ತಿಯವರು ಮಾಡಿದರು. ಅಂತಿಮವಾಗಿ ಕಾರ್ಯಕ್ರಮ ಶಾಂತಿಮAತ್ರದೊAದಿಗೆ ಮುಕ್ತಾಯವಾಯಿತು.


Tags

Post a Comment

0Comments

Post a Comment (0)