ಮಾರ್ಗಶಿರ ಮಾಸದ ಹನುಮಜಯಂತಿ ತಮಗೆ ತಿಳಿದಿದೆಯೋ...?

varthajala
0

 ಮಾರ್ಗಶಿರ ಹನುಮಜಯಂತಿ  ಹಾಗೂವೈಶಾಖ ಹನುಮಜಯಂತಿ  ಆಚರಿಸಿರುವುದರ ತಮಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. 

ಇಂದು 16-12-2021 ಗುರುವಾರ, ಮಾರ್ಗಶಿರ ಮಾಸದ ಹನುಮಜಯಂತಿ ಆಚರಣೆ ಬಗ್ಗೆ ಎಲ್ಲೆಡೆ ಸಂಭ್ರಮದಿ0ದ ಆಚರಿಸುತ್ತಿದ್ದಾರೆ. ಸಂಕಷ್ಟದಲ್ಲಿರುವವರು ಸುಂದರ ಕಾಂಡ ರಾಮಾಯಣವನ್ನು ಪಾರಾಯಣ ಮಾಡುವುದರಿಂದ ಕಷ್ಟಗಳನ್ನು ಪರಿಹರಿಸುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ. 

ವೈಶಾಖ ಮಾಸದಲ್ಲಿ ಬರುವ ಹನುಮಜಯಂತಿ ಆಂಜನೇಯ ಹುಟ್ಟಿದ ದಿನದ ಆಚರಣೆಯಾಗಿರುವುದು. ಮಾರ್ಗಶಿರ ಮಾಸದ ಹನುಮ ಜಯಂತಿಯು ಲಂಕೆಯನ್ನು ಸುಟ್ಟು ರಾಕ್ಷಸರಿಗೆ ಸೋಲನ್ನು ಉಣಿಸಿದ ವಿಜಯದ ಸಂಕೇತವಾಗಿ ಸಂಭ್ರಮದ  ಆಚರಣೆ. ಇದನ್ನು ಭಾರತದಲ್ಲಿ ಮಾತ್ರವಲ್ಲದೇ ಇಂಡೋನೇಶಿಯಾದಲ್ಲಿ ಕೂಡಾ ಸಡಗರದಿಂದ ಆಚರಿಸುವುದುಂಟು. ಈ ಬಗ್ಗೆ ರಾಮಾಯಣದ ಸುಂದರ ಕಾಂಡದಲ್ಲಿ ಉಲ್ಲೇಖಿತವಾಗಿದೆ. 

-ವರದಿ : ರಾಜಣ್ಣ, ಮಾಲೂರು.

Post a Comment

0Comments

Post a Comment (0)