ಎಐಡಿಎಸ್‌ಓ 9 ನೇ ಬಳ್ಳಾರಿ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಮ್ಮೇಳನ

varthajala
0

ಬಳ್ಳಾರಿ : ಎಐಡಿಎಸ್‌ಓ ಬಳ್ಳಾರಿ ಜಿಲ್ಲಾ ಸಮಿತಿಯಿಂದ 9ನೇ ಬಳ್ಳಾರಿ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಮ್ಮೇಳನ ನಗರದ ಗಾಂಧಿ ಭವನದಲ್ಲಿ ಜರುಗಿತು. ವಿದ್ಯಾರ್ಥಿ ಸಮ್ಮೇಳನವನ್ನು AIDSO ಅಖಿಲ ಭಾರತ ಉಪಾಧ್ಯಕ್ಷರಾದ ಡಾ.ಎನ್. ಪ್ರಮೋದ್ ಅವರು ಉದ್ಘಾಟಿಸಿ  ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಮತ್ತು ವಿದ್ಯಾರ್ಥಿಗಳ ಹೋರಟಗಳಲ್ಲಿ ಹುತಾತ್ಮರಾದ ಎಲ್ಲಾ ಹುತಾತ್ಮರಿಗೆ  ಕ್ರಾಂತಿಕಾರಿ ವಂದನೆಗಳನ್ನು ಸಲ್ಲಿಸಿದರು. ನಂತರ ಸಮ್ಮೇಳನದ ಪ್ರತಿನಿಧಿಗಳನ್ನು ಉದ್ದೇಶಿಸಿ ಡಾ. ಪ್ರಮೋದ್ ರವರು ಮಾತನಾಡುತ್ತಾ.., "ಸಮ್ಮೇಳನದಲ್ಲಿ ವಿದ್ಯಾರ್ಥಿ ಚಳುವಳಿಯನ್ನು ಪ್ರಬಲಗೊಳಿಸಲು ಒಂದು ಹೊಸ ಉತ್ಸಾಹ, ನಾಯಕತ್ವವನ್ನು ನೀಡಲಿ. ಸಮ್ಮೇಳನದ ಪ್ರಮುಖ ಬೇಡಿಕೆಯಾದ ಎನ್‌ಇಪಿ-2020 ಧಿಡೀರ್ ಹೇರಿಕೆ ವಾಪಸ್ ಪಡೆಯಿಲಿ, ಶಿಕ್ಷಣ ಖಾಸಗಿಕರಣ ನಿಲ್ಲಿಸಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು ಸಮಗ್ರ ಹೋರಾಟ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು".


ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮವಾರ್ಷಿಕಕ್ಕೆ ಸಮರ್ಪಿಸಲಾಗಿರುವ ಈ ಸಮ್ಮೇಳನದಲ್ಲಿ ಂIಆSಔ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಜಿ. ಸುರೇಶ್ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಾತನಾಡುತ್ತಾ.., "ಶಿಕ್ಷಣದ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಒಗ್ಗಟ್ಟು ಹೋರಾಟ ಕಟ್ಟುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು. ನಂತರ ಬಳ್ಳಾರಿ ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಮತ್ತು ಎಐಡಿಎಸ್‌ಓ ನ ಮುಖ್ಯ ಗುರಿಗಳ ಬಗ್ಗೆ ವಿವರಣೆಯಿದ್ದ ಮುಖ್ಯ ಗೊತ್ತುವಳಿಯ ಮಂಡನೆಯಾಗಿ, ಅನುಮೋದನೆ ಆಯಿತು. 9ನೇ ಬಳ್ಳಾರಿ ಜಿಲ್ಲಾಮಟ್ಟದ ವಿದ್ಯಾರ್ಥಿ ಸಮ್ಮೇಳನದಲ್ಲಿ ನೂತನ ಅಧ್ಯಕ್ಷರಾಗಿ ಗುರಳ್ಳಿ ರಾಜ,  ಕಾರ್ಯದರ್ಶಿಯಾಗಿ  ರವಿಕಿರಣ್. ಜೆ.ಪಿ, ಉಪಾಧ್ಯಕ್ಷರುಗಳಾಗಿ ಜೆ.ಸೌಮ್ಯ, ಕಛೇರಿ ಕಾರ್ಯದರ್ಶಿಯಾಗಿ ಕೆ.ಈರಣ್ಣ ಹಾಗೂ 8 ಜನ ಜಿಲ್ಲಾ ಸೆಕ್ರೆಟರಿಯೆಟ್ ಸದಸ್ಯರು, 29 ಜನರ ಎಕ್ಸಿಕ್ಯೂಟಿವ್ ಸದಸ್ಯರು ಮತ್ತು 116 ಜನ ಕೌನ್ಸಿಲ್ ಸದಸ್ಯರ ಸಮಿತಿ ಆಯ್ಕೆಯಾಯಿತು. 

ಸಮ್ಮೇಳನದಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಉದ್ದೇಶಿಸಿ SUCI ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್. ರಾಧಾಕೃಷ್ಣ ಉಪಾಧ್ಯ ಅವರು ಮಾತನಾಡುತ್ತಾ "ವಿದ್ಯಾರ್ಥಿ ಸಮಸ್ಯೆಗಳ ವಿರುದ್ಧ ಬಲಿಷ್ಠ ಹೋರಾಟ ಕಟ್ಟುಲು ಮುಂದಾಗಿ, ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳ ಮೇಲೆ ಇದೆ, ಈ ಜವಾಬ್ದಾರಿ ನಿಭಾಯಿಸಲು ಸಂಘಟನೆಯ ಕಾರ್ಯಕರ್ತರು ಬಹುಮುಖ್ಯ ಪಾತ್ರ ಎಂದು ಹೇಳಿದರು. ಈ ಸಮ್ಮೇಳನದಲ್ಲಿ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು.

Tags

Post a Comment

0Comments

Post a Comment (0)