BELLARY ವೀರಶೈವ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆ

varthajala
0

ಬಳ್ಳಾರಿ ಜ 12. ನಗರದ ಪ್ರತಿಷ್ಠಿತ ವೀರಶೈವ ಮಹಾವಿದ್ಯಾಲಯದಲ್ಲಿ ರಾಷ್ಟಿçಯ ಸೇವಾ ಯೋಜನೆ ಮತ್ತು ಯೂತ್ ರೆಡ್ ಕ್ರಾಸ್ ಸಹಯೋಗದೊಂದಿಗೆ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ರಾಷ್ಟಿçಯ ಯುವದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಈ ಕಾರ್ಯಕ್ರಮಕ್ಕೆ ಅತಿಥಿಗಳು ಮತ್ತು ಭಾಷಿಣಕಾರರಾಗಿ ರಾಜಶೇಖರರ‍್ರಾಮಕೃಷ್ಣ ವಿವೇಕಾನಂದ ಆಶ್ರಮ ಸಮಿತಿಯ ಸದಸ್ಯರು ಬಳ್ಳಾರಿ ಇವರು ಸ್ವಾಮಿ ವಿವೇಕಾನಂದರ ಜೀವನದಲ್ಲಿ ಅಳವಡಿಸಿಕೊಂಡಿರುವ ಮೌಲ್ಯಗಳನ್ನು ಮತ್ತು ಸಮಾಜಕ್ಕೆ ಅವರ ಕೊಡುಗೆಗಳನ್ನು ವಿವರಿಸಿದರು. ಸ್ವಾಮಿ ವಿವೇಕಾನಂದರ ತೀಕ್ಷಣ್ಣ್ಣವಾದ ಮಾತುಗಳು ಭಾರತದ ಯುವಕರ ಮನ ಮುಟ್ಟುವಂತೆ ಮಾಡಿದ ಕೆಲವು ಘಟನೆಗಳನ್ನು ವಿದ್ಯಾರ್ಥಿಗಳ ಜೊತೆಗೆ  ಹಂಚಿಕೊ0ಡರು. ಹಾಗೆಯೇ ಇನ್ನೂಬ್ಬ ಅತಿಥಿ  ಶಾಕಿಬ್ ಅಹ್ಮದ್ ನಿರ್ದೇಶಕರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಾತನಾಡಿ ಯುವ ರೆಡ್ ಕ್ರಾಸ್ ಸಂಸ್ಥೆಗಳ ಸ್ಥಾಪನೆ ಮತ್ತು ಉದ್ದೇಶಗಳನ್ನು ಈಡೇರಿಸಲು ಎಲ್ಲಾ ಕಾಲೇಜುಗಳ ಕಾರ್ಯ ನಿರ್ವಹಣೆಯಲ್ಲಿ ಹೊಂದಾಣಿಕೆಯನ್ನು, ರೆಡ್ ಕ್ರಾಸ್ ಸಂಸ್ಥೆ ಭಾವಿಸಿದಂತೆ ಇಂದಿನ ತೀವ್ರ ಮತ್ತು ತುರ್ತು ಅವಶ್ಯಕತೆಗಳಿಗಾಗಿ ಕಾಲೇಜು ವಿದ್ಯಾರ್ಥಿಗಳು ಹೇಗೆ ಕಾರ್ಯ ನಿರ್ವಹಿಸಬಹುದು ಎಂದು ವಿವರಿಸಿದರು.

ಕಾಲೇಜು ಪ್ರಾಂಶುಪಾಲರು ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಸ್ವಾಮಿ ವಿವೇಕಾನಂದರ ಮೌಲ್ಯಗಳನ್ನು ಭಾರತ ದೇಶದ ಯುವಕರಿಗೆ ಕೊಟ್ಟಂತಹ ಸುಸಂದೇಶಗಳನ್ನು ತಿಳಿಸಿದರು.

ಹಾಗೆಯೇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ದರೂರ್ ಶಾಂತನಗೌಡ್ರು ಮಾತನಾಡಿ ಸ್ವಾಮಿ ವಿವೇಕಾನಂದರ ಸಾರ್ಥಕ ಜೀವನದ ಬಗ್ಗೆ ಉದಾಹರಣೆಗಳೊಂದಿಗೆ ತಿಳಿಸಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಬರುವಂತೆ ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯರಾದ ಡಾ.ಕೆ.ಎಸ್.ಅಶೋಕ್ ಕುಮಾರ್, ಹನುಮಂತ ಗುಡಿಗಂಟಿ, ಮುಲ್ಲಂಗಿ ನಂದೀಶ್ ಭಾಗವಹಿಸಿ ಕಾರ್ಯಕ್ರಮಕ್ಕೆ ಶೊಭೆ ತಂದರು.

ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಶರಣಪ್ಪ, ಡಾ.ಡಿ.ನಾಗೇಶ  ಡಾ.ಜಿ.ಮನೋಹರ , ಜಿ ಮಲ್ಲನಗೌಡ ಮತ್ತು ಡಾ.ಟಿ.ಆರ್.ರವಿಕುಮಾರ್ ನಾಯ್ಕ ಕಾರ್ಯಕ್ರಮ ಅಧಿಕಾರಿಗಳಾದ ಶರಣ್ ಕುಮಾರ್ ಎಸ್.ಆರ್. ಭಾಗವಹಿಸಿದರು. ಕುಮಾರಿ ಸುಜಾತ ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

0Comments

Post a Comment (0)