ಸಮುತ್ಕರ್ಷ IAS ವತಿಯಿಂದ 6,7,8 ಹಾಗೂ 9 ನೇ ತರಗತಿಯ ಮಕ್ಕಳಿಗೆ " Pre-IAS foundation" ಕೋರ್ಸ್ ಪ್ರಾರಂಭ

varthajala
0
 ಬಳ್ಳಾರಿ ಜೂ.28 :ಸಮುತ್ಕರ್ಷ ಐಎಎಸ್ ಸಂಸ್ಥೆಯು ಕರ್ನಾಟಕದಲ್ಲಿ ಕಳೆದ ಏಳು ವರ್ಷಗಳಿಂದ ಶಾಲಾ ಮಕ್ಕಳಲ್ಲಿ ಐಎಎಸ್/ ಐಪಿಎಸ್ ಹಾಗೂ ನಾಗರೀಕ ಸೇವಾ ಪರೀಕ್ಷೆಗಳ ಬಗ್ಗೆ ಅರಿವು ಮತ್ತು ಈಗಿನಿಂದಲೇ ತಯಾರಿ ಮಾಡಲು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಪ್ರತಿವರ್ಷವೂ ಸಮುತ್ಕರ್ಷದ ಅಭ್ಯರ್ಥಿ ಗಳು ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಆಯ್ಕೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಶಾಲಾಮಕ್ಕಳಿಗಾಗಿ "ಶ್ರಧ್ಧಾ ಮತ್ತು "ಮೇಧಾ" ಹೆಸರಿನ Pre-IAS foundation ಕೋರ್ಸುಗಳನ್ನು ಪ್ರಾರಂಭಿಸಲಾಗುತ್ತಿದೆ. ಆ ಮೂಲಕ 6,7,8 ಹಾಗೂ 9  ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಗರೀಕ ಸೇವಾ ಪರೀಕ್ಷೆಗಳಿಗೆ ಅಗತ್ಯವಿರುವ ಮಾನಸಿಕ, ಬೌದ್ಧಿಕ ಸಾಮಥ್ರ್ಯಗಳ ಬೆಳವಣಿಗೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಮೂಲಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಉನ್ನತ ಕನಸು ಕಾಣುವತ್ತ ಅಡಿಪಾಯ ಹಾಕುವ ಉದ್ದೇಶ ಈ ಕೋರ್ಸನದ್ದು. ಈ ಹಿನ್ನೆಯಲಿ ್ಲಸಮುತ್ಕರ್ಷ ಐ.ಎ.ಎಸ್ – ಜುಲೈ 03, 2022 ರಂದು ಬೆಳಿಗ್ಗೆ 10:30 ರಿಂದ 12:30 ರವರೆಗೆ, ಬಳ್ಳಾರಿಯ ಬಾಲ ಭಾರತಿ ಸ್ಕೂಲ, ಗಾಂಧಿನಗರ, ಬಳ್ಳಾರಿ ಯಲ್ಲಿ ಪ್ರವೇಶ ಪರೀಕ್ಷೆ  ಏರ್ಪಡಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು  samutkarshias.in ವೆಬಸೈಟ್ ನಲ್ಲಿ ನೋಂದಣಿ ಮಾಡಿ, ಪರೀಕ್ಷೆ ಹಾಜರಾಗುವ ಮೂಲಕ ಕೋರ್ಸಗೆ ಪ್ರವೇಶ ಪಡೆಯಬಹುದು ಎಂದು ಟ್ರಸ್ಟನ ಕಾರ್ಯದರ್ಶಿ ಜಿತೇಂದ್ರ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 7337776772   ವಿಷ್ಣುಕುಮಾರ ಅವರನ್ನು  ಸಂಪರ್ಕಿಸಲು ಕೋರಲಾಗಿದೆ.





Tags

Post a Comment

0Comments

Post a Comment (0)