ಶಿಕ್ಷಕರ ದಿನಾಚರಣೆ, "ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ-2022" ಹಾಗೂ "ಅಲ್ಲೆಘೆನಿ ರೈಸಿಂಗ್ ಸ್ಟಾರ್ ಸೇವಾರತ್ನ" ಪ್ರಶಸ್ತಿ ಪ್ರದಾನ ಸಮಾರಂಭ

varthajala
0

ಬೆಂಗಳೂರು: ಅಲ್ಲೆಘನಿ ರೈಸಿಂಗ್ ಫೌಂಡೇಶನ್ ಟ್ರಸ್ಟ್ ಹಾಗೂ ಅಲ್ಲೆಘೆನಿ ಟೀಚರ್ಸ್ ಅಸೋಸಿಯೇಷನ್ ವತಿಯಿಂದ ಕೆಂಗೇರಿ ಉಪನಗರದ ಶ್ರೀಕೃಷ್ಣ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ-2022 ಹಾಗೂ ಅಲ್ಲೆಘೆನಿ ರೈಸಿಂಗ್ ಸ್ಟಾರ್ ಸೇವಾರತ್ನ ಪ್ರಶಸ್ತಿ ಸಮಾರಂಭವನ್ನು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ















ಡಿ.ಆರ್.ಡಿಎಲ್. ನ ನಿವೃತ್ತ ವಿಜ್ಞಾನಿಗಳು ಹಾಗೂ ಏರೋನಾಟಿಕಲ್ ಇಂಜಿನಿಯರಿಂಗ್ ನ ಪ್ರೊಫೆಸರ್ ಡಾ.ಅಚೀತ್ಯ ಕೃಷ್ಣ ಸರಕಾರ್, ಟಿವಿ 5 ವಾಹಿನಿಯ ಪ್ರಿನ್ಸಿಪಲ್ ಎಡಿಟರ್ ರಮಾಕಾಂತ್ ಆರ್ಯನ್, ಖ್ಯಾತ ಗಾಯಕರಾದ ಶಶಿಧರ್ ಕೋಟೆ,ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ಮಧುರ ಅಶೋಕ್ ಕುಮಾರ್, ಡಿಸಿಪಿ ಯೋಗೇಶ್, ಡಿ ವೈ.ಎಸ್.ಪಿ ರಮೇಶ, ಡಾ.ಉಷಾ, ಎಅ.ರೇಷ್ಮಾ,  ಪ್ರಾಂಶುಪಾಲರಾದ ಆರ್.ಡಿ.ಸತೀಶ್, ಶ್ರೀಕೃಷ್ಣ ಗ್ರ್ಯಾಂಡ್ ಹೋಟೆಲ್ ನ ಮಾಲಿಕರಾದ ಪ್ರತಾಪ್ ಶೆಟ್ಟಿ, ಸಂಜೆ ಪ್ರಭ ಪತ್ರಿಕೆಯ ಸಂಪಾದಕರಾದ ವೆಂಕಟೇಶ್ ಪೈ,  ಚಲನಚಿತ್ರ‌ ನಟ ಅಂಜನ್,

ಸಂಸ್ಥೆಯ ಅಧ್ಯಕ್ಷರಾದ  ಕನ್ನಡಪಾಷಾ (ಫರ್ವೇಜ್ ಪಾಷಾ),ಪ್ರಧಾನ‌ ಕಾರ್ಯದರ್ಶಿಗಳಾದ ಆಯೇಷಾ ಸುಲ್ತಾನ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಮಾರು 60 ಜನ ಹಿರಿಯ ಶಿಕ್ಷಕರಿಗೆ " ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ-2022" ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ  ಸಾಧಕರಿಗೆ " ಅಲ್ಲೆಘೆನಿ ರೈಸಿಂಗ್ ಸ್ಟಾರ್ " ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದ ಮಕ್ಕಳಿಗೆ ಸಚಿವರಾದ ಎಸ್.ಟಿ.ಸೋಮಶೇಖರ್ ರವರು ಗೌರವಧನ ನೀಡಿ ಪುರಸ್ಕರಿಸಿದರು. ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವರು ವೀಕ್ಷಿಸಿ ಸುಮಾರು ಎರಡೂ ಗಂಟೆಗೂ ಹೆಚ್ಚು ಕಾಲ ಸಮಾರಂಭದಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.

Post a Comment

0Comments

Post a Comment (0)