ಕೆ.ಪಿ.ಎಸ್.ಸಿಯಲ್ಲಿ ತೇರ್ಗಡೆಯಾದ 64ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ,

varthajala
0

ಕನ್ನಡಿಗರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಹುದ್ದೆಗಳನ್ನ ಅಲಂಕರಿಸಬೇಕು.




ಕರ್ನಾಟಕ ಲೋಕಸೇವಾ ಆಯೋಗವು 2022 ನೇ ಸಾಲಿನ ಫಲಿತಾಂಶವನ್ನು ಪ್ರಕಟಿಸಿದ್ದು, ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಲ್ಲಿ ಮಾರ್ಗದರ್ಶನ ತರಬೇತಿ ಪಡೆದ 64 ಮಂದಿ ಅಭ್ಯರ್ಥಿಗಳು ಯಶಸ್ಸು ಗಳಿಸಿದ್ದಾರೆ. ಈ ಶುಭ ಸಂದರ್ಭದಲ್ಲಿ ಇಂಡಿಯಾ ಫಾರ್ ಐ.ಎ.ಎಸ್. ಅಕಾಡಮಿಯಿಂದ ಪತ್ರಿಕಾ ಗೋಷ್ಠಿ ಏರ್ಪಡಿಸಲಾಗಿದೆ.

ಕೆ.ಪಿ.ಎಸ್.ಸಿ.ಪಾಸ ಸಾಧಕರಿಗೆ ಗೌರವ ಸನ್ಮಾನ ಜೊತೆಗೆ, ಕರ್ನಾಟಕದ ಯುವಜನತೆಯನ್ನು ಪ್ರೋತ್ಸಾಹಿಸಿ ಸ್ಫೂರ್ತಿ ಕಾರ್ಯಕ್ರಮ. ಆಡಳಿತ ಮಂಡಳಿಯ  ಉಪಾಧ್ಯಕ್ಷರಾದ ಡಾ.ಜಿ.ಎನ್ ಶ್ರೀ ಕಂಠಯ್ಯ IRS(R) ಅಕಾಡೆಮಿಯ ಇತರ ಆಡಳಿತ ಮಂಡಳಿ ಸದಸ್ಯರಾದ ಸಿ.ಇ.ಓ ಶ್ರೀನಿವಾಸ್,ನಿರ್ದೇಶಕರುಗಳಾದ ನಯನ್.ಎಸ್ ಮತ್ತು ನವೀನ್ ಕೆ.ಎಂ. ಬಾಬು ಸಂದೀಪ್,ಪ್ರಶಾಂತ್ ರವರು  ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು

ಇದೇ ಸಂದರ್ಭದಲ್ಲಿ ಕೆ.ಪಿ.ಎಸ್.ಸಿ. ಯಿಂದ Rank ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕರ್ನಾಟಕ ಯುವ ಸಮೂಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದಿಲ್ಲ, ಇದರಿಂದ ಉನ್ನತ ಹುದ್ದೆಗಳು ಆನ್ಯ ರಾಜ್ಯದ ವಿದ್ಯಾರ್ಥಿಗಳ ಪಾಲಿಗೆ ಹೋಗುತ್ತದೆ.

ಪ್ರತಿಭಾವಂತ ವಿದ್ಯಾರ್ಥಿಗಳ ಕೊರತೆ ಇಲ್ಲ ಸರಿಯಾದ ಮಾರ್ಗದರ್ಶನ ತರಭೇತಿ ನೀಡಿದರೆ ಕೇಂದ್ರ, ರಾಜ್ಯ ಸರ್ಕಾರದ ಆಡಳಿತದಲ್ಲಿ ಕನ್ನಡಿಗರು ಪಾರಪತ್ಯ ಮೆರೆಯಬಹುದು.

ಈ ನಿಟ್ಟಿನಲ್ಲಿ ಇಂಡಿಯಾ ಫಾರ್ ಐ.ಎ.ಎಸ್.ಸಂಸ್ಥೆ ಶ್ರಮಿಸುತ್ತಿದೆ. ನಮ್ಮ ಸಂಸ್ಥೆಯಲ್ಲಿ ತರಭೇತಿ ಪಡೆದ 40ವಿದ್ಯಾರ್ಥಿಗಳು ಐ.ಎ.ಎಸ್.ಐ.ಆರ್.ಎಸ್.ಮತ್ತು ಐ.ಎಫ್.ಎಸ್.ಅಧಿಕಾರಿಗಳಾಗಿದ್ದಾರೆ ಇದೀಗ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ .ಈ ವಿದ್ಯಾರ್ಥಿಗಳು ಇಂಡಿಯಾ ಫಾರ್ ಐ.ಎ.ಎಸ್.ತರಭೇತಿ ಪಡೆದವರು ಎಂಬ ಹೆಮ್ಮೆ ಇದೆ ಎಂದು ಸಂಸ್ಥೆಯವರು ಹೇಳಿದರು

Post a Comment

0Comments

Post a Comment (0)