ಅರಸೀಕೆರೆಯಲ್ಲಿ ಮಾಲೇಕಲ್ ತಿರುಪತಿ, ಅಮರಗಿರಿ, ಚಿಕ್ಕ ತಿರುಪತಿ

varthajala
0

 ಓದುಗರೇ ಈ ದಿನ ನಾನು ಕರ್ನಾಟಕದ ಪ್ರಸಿದ್ಧ ದೇವಸ್ಥಾನ ಒಂದನ್ನು ಪರಿಚಯಿಸುತ್ತಿದ್ದೇವೆ. ಅರಸೀಕೆರೆ ಇಂದ ೩ ಕಿ. ಮೀ ಆಸುಪಾಸಿನಲ್ಲಿ ಮಾಲೇಕಲ್ ತಿರುಪತಿ, ಅಮರಗಿರಿ, ಚಿಕ್ಕ ತಿರುಪತಿ ಎಂದು ಕರೆಯಲ್ಪಡುವ ದೇವಾಲಯವಿದೆ.ಇದರ ಇತಿಹಾಸ ಎಂದರೆ ಇಲ್ಲಿ ತಪಸ್ಸು ಮಾಡುತ್ತಿದ್ದ ವಸಿಷ್ಠ ಮುನಿಗಳಿಗೆ ವೆಂಕಟೇಶ್ವರ ಸ್ವಾಮಿಯು ಪ್ರತ್ಯಕ್ಷ ಆದನಂತೆ. ಅದು ಆಶಾಡ ಶುದ್ಧ ದ್ವಾದಶಿ.ಹಾಗಾಗಿ ಇಲ್ಲಿ ರಥೋತ್ಸವ ಅದೇ ದಿನದಂದು ನಡೆಯುವುದು. ಈ ದೇವಾಲಯವನ್ನು ಚಿತ್ರದುರ್ಗದ ನಾಯಕರು ಕಟ್ಟಿಸಿದರು.ದೇವಾಲಯ ಹೊಯ್ಸಳ ಶೈಲಿಯಲ್ಲಿದೆ.ಬೆಟ್ಟದ ಮೇಲೆ ವೆಂಕಟೇಶ್ವರ ಸ್ವಾಮಿಯು ಪದ್ಮಾವತಿ ಸಮೇತ ಇದ್ದರೆ, ಕೆಳಗೆ ಗೋವಿಂದರಾಜ ಸ್ವಾಮಿಯ ವಿಗ್ರಹ ಇದೆ.ಇದು ಕೊಳದಲ್ಲಿ ಸಿಕ್ಕಿದ್ದನ್ತೆ.

ಈ ದೇವರು ನನ್ನ ತಂದೆಯ ಮನೆ ದೇವರು. ಈ ಅಸುಪಾಸಿನ ಸುಮಾರು ಬ್ರಾಹ್ಮಣ, ವೈಶ್ಯ ಹಾಗೂ ದೇವಾಂಗ ಜಾತಿಯವರಿಗೆ ಇದು ಮನೆ ದೇವರು.ಅಲ್ಲಿ ಪ್ರತ್ಯೇಕ ಚತ್ರಗಳು ಇವೆ.ರಥೋತ್ಸವದ ದಿನ ಪ್ರತ್ಯೇಕ ಅನ್ನದಾನ ಇರುತ್ತದೆ.ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಬಹಳ ಭಕ್ತಾದಿಗಳನ್ನು ಹೊಂದಿದೆ.

ನಾವು ಒಮ್ಮೆ ರಥೋತ್ಸವದ ಸಮಯದಲ್ಲಿ ಅಲ್ಲಿಗೆ ಹೋಗಿದ್ದಾಗ ತೆಗೆದ ಫೋಟೋಗಳನ್ನು ಹಂಚಿಕೊಂಡಿದ್ದೇನೆ.ಶ್ರಾವಣ ಮಾಸದ ಶನಿವಾರದಂದು ಮತ್ತೆ ಒಮ್ಮೆ ಸ್ವಾಮಿಯನ್ನು ನೆನೆಯೋಣ. ಸ್ವಾಮಿಯು ಭಕ್ತರು ಬೇಡಿದ್ದನ್ನು ಕೊಡುವ  ದಾನಿ.ಅಮ್ಮನವರು ಕೂಡ ಅಷ್ಟೇ.






ಹೆಚ್ಚಿನ ಮಾಹಿತಿಗಾಗಿ ದೇವಾಲಯದ ಕಚೇರಿಯನ್ನು ಸಂಪರ್ಕಿಸಿ.

Radhika GN

7019990492

Post a Comment

0Comments

Post a Comment (0)