ಮನೆಯ ಅಲಂಕರಣಕ್ಕೆ ಕೆಲವು ಸರಳ ಸಲಹೆ....!

varthajala
0

ಓದುಗರೇ ಈ ದಿನ ನಾನು ನಿಮ್ಮ ಮನೆಯ ಅಲಂಕರಣ ಕ್ಕೆ ಕೆಲವು ಸರಳ ಸಲಹೆಗಳನ್ನು ಕೊಡುತ್ತಿದ್ದೇನೆ.

ಈ ಚಿತ್ರದಲ್ಲಿ ಕಾಣುವ ಮೋಡ ವಿದೇಶಿ ವೈರಿನಿಂದ ಮರದ ಕಾಲುಗಳಿಗೆ ಹೆನೆಯಲಾಗಿದೆ.ಇದನ್ನು ನನಗೆ ಒಬ್ಬ ಕಾರ್ಪೆಂಟರ್ ಮಾಡಿ ಕೊಟ್ಟಿದ್ದ. ಈ ತರಹದ ಪೀಠವು ಬೆಡ್ರೂಮಿನಲ್ಲಿ ಸುಮ್ಮನೆ ಅಂದಕ್ಕೆ, ಕೂರುವುದಕ್ಕೆ ಬಳಸಬಹುದು.



ಈ ಫೋಟೊದಲ್ಲಿರುವ ಬಾಗಿಲ ತೆರೆ ಬಹಳ ಹಳೆಯದು ೬೦ ರ ದಶಕದ ತೆರೆ.ಇದನ್ನು ನನ್ನ ಅಜ್ಜಿ ಅವರ ಅತ್ತಿಗೆಯ ಬಳಿ ತೆಗೆದುಕೊಂಡು ನನಗೆ ಇತ್ತೀಚೆಗೆ ನೀಡಿದ್ದರು. ಈ ಮಾದರಿಯ ಬೇರೆ ತೋರಣ ನಾವು ಬಾಗಿಲಿಗೆ ಹಾಕಬಹುದು.ಆದರೆ ಇದು ಈಗ ಔಟ್ ಆಫ್ ಫ್ಯಾಷನ್.ಇದನ್ನು ಮತ್ತೆ ಫ್ಯಾಷನಬಲ್ ಆಗಿ ಶುರು ಮಾಡಬಹುದು.



ಮನೆಯ ಗೋಡೆಗೆ ಬೇಕಾದರೆ ಈ ಫೋಟೊ ದಲ್ಲಿರುವ ವರ್ಲಿ ಗ್ಲಾಸ್ ಪೈಂಟಿಂಗ್ ಹಾಕಬಹುದು. ಪೈಂಟಿಂಗ್ ನಲ್ಲಿ ಬಹಳ ವಿಧಗಳಿವೆ.ನಾನು ಇಲ್ಲಿ ನಾನು ಮಾಡಿದ ಪೈಂಟಿಂಗ್ ಹಾಕಿದ್ದೇನೆ.

ಇದೊಂದು ಮಿಕ್ಕ ಬಟ್ಟೆಯಲ್ಲಿ ಹೊಲೆದಿರುವ ಪೋಸ್ಟ್ ಕಾರ್ಡ್ ಹೋಲ್ಡರ್.ಇದಕ್ಕೆ embroidery ತುಣಿಕಿನ ಅಲಂಕಾರ ಇದೆ.

 ಹೀಗೆ ಇನ್ನಷ್ಟು ಅಲಂಕಾರ,ಮನೆಯ ಸೌಂದರ್ಯ ಹೆಚ್ಚಿಸಲು ಕಡಿಮೆ ಖರ್ಚಿನಲ್ಲಿ, ಮಿಕ್ಕ ಸಾಮಗ್ರಿ ಗಳಿಂದ ಮಾಡಿಸಬಹುದು.ಆದರೆ ನಿಮಗೆ ಒಳ್ಳೆಯ ಟೈಲರ್ ಹಾಗೂ ಕಾರ್ಪೆಂಟರ್ ನ ಪರಿಚಯ ಇರಬೇಕು.

ಮತ್ತಷ್ಟು ಟಿಪ್ಸ್ ಗಳೊಂದಿಗೆ ಮತ್ತೆ ಬೇರೆ article ಬರೆಯುವೆ.ನಮಸ್ಕಾರಗಳು...

Radhika GN

7019990492

Post a Comment

0Comments

Post a Comment (0)