ರಾಮಾಯಣ ಮಹಾಕಾವ್ಯ ಇಂದಿಗೂ ಮಾನವೀಯತೆ ಧರ್ಮ ಸಂಸ್ಕಾರ ನೆಲೆಸಲು ಕಾರಣವಾಗಿದೆ.

varthajala
0

 ರಾಮ ರಾಜ್ಯವನ್ನು ಈಗಿನ ಕಲಿಯುಗಕ್ಕೆ ಸಾರಿದ ಮಹಾನ್ ಪುರುಷರು ವಾಲ್ಮೀಕಿ ಮಹರ್ಷಿಗಳು. ವಾಲ್ಮೀಕಿ ಮಹರ್ಷಿ ಅವರು ರಚಿಸಿದ ರಾಮಾಯಣವನ್ನು ನಮ್ಮ ದೇಶ ಮಾತ್ರವಲ್ಲ ಜಗತ್ತಿನ ಅನೇಕ ರಾಷ್ಟ್ರಗಳು ಒಪ್ಪಿವೆ. ಈ ಮಹಾಕಾವ್ಯ ಇಂದಿಗೂ ಮಾನವೀಯತೆ ಧರ್ಮ ಸಂಸ್ಕಾರ ನೆಲೆಸಲು ಕಾರಣವಾಗಿದೆ. ಎಂದು ಶಾಸಕ ಬಿ ಎನ್ ರವಿಕುಮಾರ್ ತಿಳಿಸಿದರು.

ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ಶ್ರೀ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲೂಕು ಆಡಳಿತ ಮತ್ತು ನಾಡ ಹಬ್ಬಗಳ ಆಚರಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಎಲ್ಲಾ ವರ್ಗದವರ ಹೇಳಿಗೆಗೆ ನಾನು ನಿಸ್ವಾರ್ಥವಾಗಿ ಶ್ರಮಿಸುವೆ. ಈ ಕ್ಷೇತ್ರದಲ್ಲಿ 70% ಶೈಕ್ಷಣಿಕವಾಗಿ  ಹಿಂದುಳಿದಿದ್ದು ಈ ಕ್ಷೇತ್ರದಲ್ಲಿ ಉತ್ತಮ ಉಚಿತ ಶಿಕ್ಷಣ ನೀಡುವ ಗುರಿ ಹೊಂದಿದ್ದೇನೆ. ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದಾದ ರಾಮಾಯಣ ಹಿಂದೂ ಮಹಾಕಾವ್ಯವನ್ನು ಬರೆದಿದ್ದಕ್ಕಾಗಿ ವಾಲ್ಮೀಕಿ ಅವರು ಅತ್ಯಂತ ಪ್ರಸಿದ್ಧರಾಗಿದ್ದಾರೆ. ಭಗವಾನ್ ವಿಷ್ಣುವಿನ ಎಂಟು ಅವತಾರಗಳ ಕಥೆಯನ್ನು ಹೇಳುವ ಭಾರತ ದೇಶ ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿರುವ ಶ್ರೀ ವಾಲ್ಮೀಕಿ ಮಹರ್ಷಿಗಳು ಇಂದು ನಮಗೆ ದಾರೀದೀಪವಾಗಿದ್ದಾರೆ. ಹಾಗೆಯೇ ವಾಲ್ಮೀಕಿ ಸಮುದಾಯಕ್ಕೆ 4% ಮೀಸಲಾತಿಯನ್ನು ನೀಡಿದ್ದು ಮಾಜಿ ಪ್ರಧಾನಿ ದೇವೆಗೌಡ ಅವರನ್ನು ಮರೆಯುವಂತಿಲ್ಲ ಎಂದು ತಿಳಿಸಿದರು. 


ವಾಲ್ಮೀಕಿ  ಜೀವನಚರಿತ್ರೆ ಹಾಗೂ ಅವರು ರಚಿಸಿದ ರಾಮಾಯಣದ ಮಹಾನ್ ಗ್ರಂಥದ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಇಂದಿನ ಸಮಾಜದಲ್ಲಿ ಮಕ್ಕಳಿಗೆ ಶಿಕ್ಷಣವೇ ಅಮೂಲ್ಯ ಆಸ್ತಿ. ಬಡತನ ಜೀವನದಲ್ಲಿ ಮುಖ್ಯವಲ್ಲ. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಬೇಕಾದರೆ ನಾವು ನಮ್ಮ ಮನದಲ್ಲಿ ಕೀಳರಿಮೆಯನ್ನು ಬಿಡಬೇಕು. ಮನಸ್ಸು ಶುದ್ದಿ ಮಾಡಿಕೊಳ್ಳಬೇಕಿದೆ. ವಾಲ್ಮೀಕಿ ಮಹರ್ಷಿ ಸಾಮಾನ್ಯ ವ್ಯಕ್ತಿಯಲ್ಲ ಅವರು ಮಹಾನ್ ಶಕ್ತಿ. ಅವರ ಆದರ್ಶ ತತ್ವ ಸಿದ್ದಾಂತಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕಿದೆ ಎಂದು ಮುಖ್ಯ ಭಾಷಣಕಾರರು ಹಾಗೂ ಹಿರಿಯ ವಕೀಲರಾದ ಟಿ. ಎಸ್. ವಿಜಯ್ ಶಂಕರ್ ತಿಳಿಸಿದರು.


ನಗರದ ಮಯೂರ ವೃತ್ತದ ಬಳಿ ಇರುವ ಶ್ರೀ ಮಹರ್ಷಿ ವಾಲ್ಮೀಕಿ ದೇವಾಲಯದಲ್ಲಿ ಮೊದಲಿಗೆ ಪೂಜೆ ಸಲ್ಲಿಸಿದ ಶಾಸಕರು ನಂತರ ವಾಲ್ಮೀಕಿ ಮಹರ್ಷಿಯ ವಿವಿಧ ಪಲ್ಲಕ್ಕಿಗಳಿಗೆ ಚಾಲನೆಯನ್ನು ನೀಡಿ ವಿವಿಧ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವೇದಿಕೆ ಕಾರ್ಯಕ್ರಮಕ್ಕೆ ಹಾಜರಾದರು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ಶಾಸಕರು ವೈಯಕ್ತಿಕವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂಪಾಯಿಗಳನ್ನು ವಿದ್ಯಾಭ್ಯಾಸಕ್ಕಾಗಿ ನೀಡಿದರು.


ಈ ಸಂದರ್ಭದಲ್ಲಿ ಪ್ರಭಾರಿ ತಹಶೀಲ್ದಾರ್ ಮುನಿಸ್ವಾಮಿರೆಡ್ಡಿ , ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ , ಕಾರ್ಯನಿರ್ವಣಾಧಿಕಾರಿ ಮುನಿರಾಜು , ಆರಕ್ಷಕ ವೃತ್ತ  ನಿರೀಕ್ಷಕ ಶ್ರೀನಿವಾಸ್ ,ಸಮಾಜ ಕಲ್ಯಾಣ ಇಲಾಖೆಯ ಜಗದೀಶ್, ಮುಖಂಡರಾದ ಬಂಕ್ ಮುನಿಯಪ್ಪ, ಎನ್.ಮುನಿಯಪ್ಪ  ತಾದೂರು ರಘು , ಬಂಕ್ ಮಂಜುನಾಥ್ ,ಮುತ್ತೂರು ವೆಂಕಟೇಶ್ , ನಗರ ಸಭೆ ಸದಸ್ಯ ಮಂಜುನಾಥ್ , ಗಿರೀಶ್ ನಾಯಕ್, ಬಂಕ್ ಮಂಜುನಾಥ್, ಶ್ರೀನಾಥ್,ಸೇರಿದಂತೆ ಸಮುದಾಯದ ಆನೇಕ ಮುಖಂಡರು ಸಂಘಸಂಸ್ಥೆಗಳ ಪದಾಧಿಕಾರಿಗಳು ಮುಂತಾದವರು ಹಾಜರಿದ್ದರು.

####

ಹಿಂದೆ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ವಾಲ್ಮೀಕಿ ಮಹರ್ಷಿ ಅವರು ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಾ ಅವರ ತಲೆ ಹೊಡೆಯುತ್ತಿದ್ದ ಎಂಬ ಮಾತಿದೆ. ಒಮ್ಮೆ ನಾರದ ಮಹರ್ಷಿಗಳು ಇದೇ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ವಾಲ್ಮೀಕಿಗೆ ಜ್ಞಾನಾರ್ಜನೆಯನ್ನು ನೀಡಿದರು.  ಆದ್ದರಿಂದ ಈ ಪ್ರದೇಶಕ್ಕೆ ತಲಕಾಯಲ ಬೆಟ್ಟ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.

ನಾರಾಯಣಸ್ವಾಮಿ. ಅರ್ಚಕರು

Post a Comment

0Comments

Post a Comment (0)