ವಿದ್ಯಾರ್ಥಿಗಳಲ್ಲಿ ಪ್ರತಿಭೆ ಗುರ್ತಿಸಿ ಪ್ರೋತ್ಸಾಹಿಸಿ : ನರೇಂದ್ರ ಕುಮಾರ್

varthajala
0

ವಾರ್ತಾಜಾಲ, ಶಿಡ್ಲಘಟ್ಟ

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ಶಿಕ್ಷಣ ಎಂದರೆ ಕೇವಲ ಓದು ,ಬರಹ , ಲೆಕ್ಕಾಚಾರ ಮಾತ್ರವಲ್ಲ .ಅದು ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ದಾರಿದೀಪವಾಗಿರುವ ಜ್ಞಾನ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎ ನರೇಂದ್ರ ಕುಮಾರ್ ತಿಳಿಸಿದರು.  


ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತವು ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿದ್ದು ವಿವಿಧ ಕಲೆ ಸಂಗೀತ ಸಂಸ್ಕೃತಿಯನ್ನು ಉಳಿಸುವ ಕೆಲಸ ಯುವ ಪೀಳಿಗೆಯಿಂದ ಆಗಬೇಕಿದೆ ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರ ತರಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗಿವೆ ಎಂದರು.

ಸ್ವಚ್ಛತೆ ,ಆರೋಗ್ಯ ಮತ್ತು ಶಿಕ್ಷಣ ಪ್ರತಿಯೊಬ್ಬರಿಗೂ ಸ್ವಾಭಿಮಾನವನ್ನು ಮತ್ತು ಗೌರವವನ್ನು ತಂದುಕೊಡುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಲು ಅನೇಕ ಅವಕಾಶಗಳಿದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ. ಮುನಿರಾಜು ಅಭಿಪ್ರಾಯ ಪಟ್ಟರು.

 ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡಿದ್ದ ಸುಮಾರು 250 ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿ ಪೋಷಕರಿಗೆ ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷರಾದ ವಿಸ್ಡಂ ನಾಗರಾಜ್  ಮತ್ತು ಆಯ್ದ ಕೆಲವು ಶಾಲೆಗಳು ಊಟದ ವ್ಯವಸ್ಥೆ ಮಾಡಿದ್ದರು.

ತಾಲೂಕು ಹಂತದಲ್ಲಿ ಯಶಸ್ವಿ ಸಾಧಿಸಿ ಜಿಲ್ಲಾ ಹಂತಕ್ಕೆ 2023-24  ನೇ ಸಾಲಿಗೆ ನಗರ ಹಾಗೂ ತಾಲೂಕಿನ ವಿವಿಧ ಶಾಲೆಗಳ 47 ಮಕ್ಕಳು ಜಿಲ್ಲೆಗೆ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್ ವೆಂಕಟೇಶ್,ಕಾರ್ಯದರ್ಶಿ ಎಸ್ ರುದ್ರೇಶ್ ಮೂರ್ತಿ,

ಕ್ಷೇತ್ರ ಸಮನ್ವಯ ಅಧಿಕಾರಿ ತ್ಯಾಗರಾಜ್ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ ಮುನಿರಾಜು, ಬಿಆರ್ ಪಿ ಕುಂದಲಗುರ್ಕಿ ಮಂಜುನಾಥ್ ,ಲಕ್ಷ್ಮೀನಾರಾಯಣ, ಪರಿಮಳ ,ಭಾಸ್ಕರ್ ಗೌಡ , ವೆಂಕಟನರಸಪ್ಪ, ಮಂಜುಳ ಮತ್ತಿತರರು ಇದ್ದರು.

Post a Comment

0Comments

Post a Comment (0)