ಕಾರ್ಮಿಕರ ಹಕ್ಕಿಗಾಗಿ ಬೃಹತ್ ಪ್ರತಿಭಟನೆ

varthajala
0

 ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಟಿತ ಕಾರ್ಮಿಕರ ಒಕ್ಕೂಟದಿಂದ ಸಾವಿರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿ

ಫೀಡಂಪಾರ್ಕ್ ಅವರಣ: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಟಿತ ಕಾರ್ಮಿಕರ ಒಕ್ಕೂಟವತಿಯಿಂದ ಕಾರ್ಮಿಕರ ಹಕ್ಕಿಗಾಗಿ  ವಿವಿಧ ಬೇಡಿಕೆಗಳನ್ನು ಅಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಅಧ್ಯಕ್ಷರಾದ ಬಿ.ದೇವರಾಜ್, ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿ ಅಧ್ಯಕ್ಷರಾದ ಚಿ.ನಾ.ರಾಮು, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಡಾ.ಬಿ.ಆರ್.ಅಂಬೇಡ್ಕರ್ ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷರಾದ ಕ್ರಾಂತಿರಾಜು, ವೈಭವ ಕರ್ನಾಟಕ ಅಧ್ಯಕ್ಷರಾದ ವೆಂಕಟೇಶಗೌಡ, ಖ್ಯಾತ ವಕೀಲರಾದ ಎನ್.ಮೂರ್ತಿ, ಕನ್ನಡ ಹೋರಾಟಗಾರ ನಟರಾಜ್ ಬೊಮ್ಮಸಂದ್ರ, ರಾಜ್ಯ ಕಾರ್ಯದರ್ಶಿ ಆರ್.ಶ್ರೀನಿವಾಸ್ ರಾಜ್ ರವರು ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸಾಮಾನ್ಯವಾಗಿ ಬಡತನದ ಬದುಕಿನಲ್ಲಿ ಬದುಕುತ್ತಾ ಹೆಚ್ಚಾಗಿ ಅವಿದ್ಯಾವಂತರಾಗಿರುತ್ತಾರೆ. ಇವರು ಕೆಲಸದಿಂದ ಕೆಲಸಕ್ಕೆ ಅಲೆದಾಡುತ್ತಾ ಕಟ್ಟಡ ನಿರ್ಮಾಣದಲ್ಲಿ ಮೇಸನ್, ಸೆಂಟ್ರಿಂಗ್, ಕಾರ್ಪೆಂಟರ್, ಫಂಬಿಂಗ್, ಸಿಮೆಂಟ್ ಕಾಂಕ್ರೀಟ್ ಕೆಲಸ ಹಾಗೂ ಇನ್ನಿತರೆ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿರುತ್ತಾರೆ. ಇವರಿಗೆ ಯಾವುದೇ ಭದ್ರತೆಯ ಬದುಕು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಹಾಗೂ ನವೀಕರಣ ಮಾಡಿಸಿಕೊಳ್ಳಲು ಮಂಡಳಿಯು ಹಲವಾರು ಷರತ್ತುಗಳು ವಿಧಿಸಿರುತ್ತದೆ. ವೇತನ ಚೀಟಿ ಹಾಗೂ ಹಾಜರಾತಿ ನಿಯಮಗಳನ್ನು ರದ್ದುಗೊಳಿಸಬೇಕು. ಕಾರಣ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಾರ್ಮಿಕರ ನೋಂದಣಿ ನವೀಕರಣಕ್ಕಾಗಿ ನಿಯಮಗಳನ್ನು ಸರಳೀಕರಣಗೊಳಿಸಲು ಆದೇಶವನ್ನು ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.

ಹೀಗಿರುವಾಗ ಕಾಮಿಕರು ಅತಂತ್ರ ಬದುಕು ಸಾಗಿಸುತ್ತ ಕೆಲಸ ನಿರ್ವಹಿಸುವ ಸಮಯದಲ್ಲಿ ನೋಂದಣಿಯಾಗಿ ಹಾಗೂ ನವೀಕರಣಕ್ಕಾಗಿ ಕಟ್ಟಡ ಪರವಾನಿಗೆ ಪತ್ರ ಹಾಗೂ ನಕ್ಷೆ, ವೇತನ ಚೀಟಿ ಹಾಗೂ ಹಾಜರಾತಿ ಪುಸ್ತಕ ಕೇಳಿರುವುದು ಇವರಿಗೆ ಒದಗಿಸಿಕೊಡುವುದು ಅಸಾಧ್ಯ ವಿಷಯವಾಗಿರುತ್ತದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಇಂತಹ ಜಾಗದಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದಾಗ ಅದನ್ನು ಪರಿಶೀಲಿಸಿ ಸತ್ಯ ಅಸತ್ಯತೆಯನ್ನು ತನಿಖೆ ಮಾಡುವ ಅಧಿಕಾರ ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರಿಗೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕಾನೂನುಗಳನ್ನು ಜಾರಿ ಮಾಡಿರುವುದರಿಂದ ಸಾವಿರಾರು ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರಿಗೆ ರೂ.5.00,000/-ಗಳ ವಸತಿ ಸೌಲಭ್ಯವನ್ನು ಕಾರ್ಮಿಕ ಇಲಾಖೆಯಿಂದ ಕೂಡಲೆ ಘೋಷಣೆ ಆಗಬೇಕು.

ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್, ಕಾರ್ಮಿಕ ಇಲಾಖೆಯಿಂದ ಕೂಡಲೇ ನೀಡಲು ಆದೇಶ ಹೊರಡಿಸಬೇಕು.

ಕರ್ನಾಟಕ ರಾಜ್ಯಾದ್ಯಂತ ಜಿಲ್ಲೆ ಮತ್ತು ತಾಲ್ಲೋಕುಗಳಲ್ಲಿ ಕಾರ್ಮಿಕ ಕಲ್ಯಾಣ ಮಂಟಪ ಮತ್ತು ಕಾರ್ಮಿಕ ಸಮುದಾಯ ಭವನ ನಿರ್ಮಾಣವಾಗಬೇಕು. 4)ಕಾರ್ಮಿಕರಿಗೆ 2013 ರಿಂದ ಸತತವಾಗಿ ಕನಿಷ್ಟ ವೇತನ ನೀಡಬೇಕಾಗಿ ಕೇಳಿದರು ಕೂಡ ಇದುವರೆಗೂ ಬೇಡಿಕೆ, ಈಡೇರಿಸಿಲ್ಲ ಹಾಗಾಗಿ ಕನಿಷ್ಠ ವೇತನ ಒಳಪಡುವ ಕಾರ್ಮಿಕರಿಗೆ 35 ಸಾವಿರ ರೂ.ಗಳನ್ನು ನಿಗದಿಪಡಿಸಬೇಕು.

 ಕಾರ್ಮಿಕ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿರುವ ಸಲಭ್ಯವನ್ನು 2019-20ಸಾಲಿನಲ್ಲಿ ಏನು ನಿಗದಿ ಆಗಿದೆಯೋ ಅದೇ ಸೌಲಭ್ಯವನ್ನು 2023-24ನೇ ಸಾಲಿನಲ್ಲೂ ಕೊಡಲೇ ಕೊಡಬೇಕು.

ನೋಂದಣಿ ಆಗಿರುವ ಕಾರ್ಮಿಕರಿಗೆ ಚಿಕಿತ್ಸೆಗಾಗಿ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿಕಾರ್ಮಿಕರು ಚಿಕಿತ್ಸೆ ಹಾಗೂ ಅಪರೇಷನ್‌ಗೆ ಒಳಪಟ್ಟಲ್ಲಿ 5 ವರ್ಷದವರೆಗೆ ಮರು ಪಾವತಿ ನೀಡಬೇಕಾಗಿ ಅನುಕೂಲ ಮಾಡಿ ಕೊಡಬೇಕು. ಇದು ರಾಜ್ಯಾದ್ಯಂತ. ಕಾರ್ಮಿಕ ಇಲಾಖೆ ವತಿಯಿಂದ ವಂತಿಗೆ ಹಣವನ್ನು ಇಡೀ ರಾಜ್ಯಾದ್ಯಂತ ಶೇಕಡ 2% 7)

ಹೆಚ್ಚುವರಿಯಾಗಿ ಏರಿಸಿ ಪಾವತಿ ಮಾಡಿಸಿಕೊಳ್ಳಬೇಕು. ಇಡೀ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳಲ್ಲಿ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಪಿ.ಎಫ್ ಮತ್ತು ಇ.ಎಸ್.ಐ ಕೂಡಲೇ ಜಾರಿಗೆ ತರಬೇಕು.

ರಾಜ್ಯಾದ್ಯಂತ ನೋಂದಣಿಯಾಗಿರುವ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ಮಾಡುತ್ತಿರುವುದರಿಂದ ಮಂಡಳಿಯಲ್ಲಿರುವ ಹಣವು ದುರುಪಯೋಗವಾಗುತ್ತಿದೆ. ಆದ ಕಾರಣ ಆರೋಗ್ಯ ತಪಾಸಣೆಯನ್ನು ಕೂಡಲೇ ನಿಲ್ಲಿಸಬೇಕು.

ಕಾರ್ಮಿಕ ದಿನಾಚರಣೆ ಮೇ 1ರ ದಿನದಂದು ನೋಂದಣಿ ಆಗಿರುವ ಕಟ್ಟಡ ಕಾರ್ಮಿಕರಿಗೆ 25 ಸಾವಿರ ರೂಪಾಯಿಗಳನ್ನು ಬೋನಸ್ ಮೂಕಾಂತರ ನೀಡಬೇಕು.

 ಲೇಬರ್ ವೆಲ್‌ಫೇರ್ ಬೋರ್ಡಿನಲ್ಲಿ ವಂತಿಕೆ ಹಣವನ್ನು ಕಟ್ಟುತ್ತಿರುವ ಕಾರ್ಮಿಕರಿಗೆ ಮೇ 1ರ ದಿವಸದಂದು 25 ಸಾವಿರ ರೂಪಾಯಿಗಳನ್ನು ಬೋನಸ್ ಮುಖಾಂತರ ನೀಡಬೇಕು.

 ಕಟ್ಟಡ ಪರವಾನಿಗೆ ಪತ್ರ/ನಕ್ಷೆ ಅನುಮೋದನೆಯನ್ನು ಈ ಕೂಡಲೇ ಹಿಂಪಡೆಯಬೇಕು

ರಾಜ್ಯಾದ್ಯಂತ ಕಾರ್ಖಾನೆಗಳು, ಮಾಲ್‌ಗಳು, ಲಾಡ್ಜ್ ಗಳು, ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳು, ಗಾರ್‌ಮೆಂಟ್ಸ್ಗಳು ಮತ್ತು ಸೆಕ್ಯೂರಿಟಿಗಳಲ್ಲಿ ಕೆಲಸ ಮಾಡುವವರಿಗೆ ವೇತನ ಚೀಟಿ ನ್ಯಾಯಯುತವಾಗಿ ಸಿಗುತ್ತಿಲ್ಲ, ಇದನ್ನು ನ್ಯಾಯಯುತವಾಗಿ ಕಡ್ಡಾಯಗೊಳಿಸಿ. ಸಿಗುವಂತೆವಿವಿಧ ಕಾರ್ಮಿಕರಿಗೆ ನೀಡುವ ಕಿಟ್ಗಳಿಗಾಗಿ ವಹಿಸುವ ಟೆಂಡರ್‌ನ್ನು ತಕ್ಷಣವೇ ರದ್ದುಪಡಿಸಬೇಕು.

 ಸಂಚಾರಿ ವಾಹನ ಚಿಕಿತ್ಸೆಯನ್ನು ತಕ್ಷಣವೇ ರದ್ದುಗೊಳಿಸಬೇಕು.

2023-24ನೇ ಸಾಲಿನ ಶೈಕ್ಷಣಿಕ ಧನ ಸಹಾಯದ ಅರ್ಜಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಾರಂಭಿಸಬೇಕು.

 ನವೀಕರಣವನ್ನು ಮೊದಲಿನಂತೆ ಮೂರು ವರ್ಷದ ಅವಧಿಗೆ ವಿಸ್ತರಿಸಬೇಕು.

ಮದುವೆ ಧನ ಸಹಾಯ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಬೇಕು.

ಸ್ಥಗಿತಗೊಂಡಿರುವ ಮುಂದುವರಿಕೆ ಪೆನ್ನನ್ ಸೌಲಭ್ಯವನ್ನು ಕೂಡಲೇ ಪ್ರಾರಂಭಿಸಬೇಕು.

 60 ವರ್ಷಗಳ ನಂತರ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು.

ನೋಂದಾಯಿತ ಬೋಗಸ್ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಸ್ಲಂ ಬೋರ್ಡ್‌ಗೆ ನಿಡಿದ ಧನ ಸಹಾಯವನ್ನು ತನಿಖೆಗೆ ಒಳಪಡಿಸಿ ಮಂಡಳಿಗೆ ಅನುದಾನವನ್ನು ಹಿಂಪಡೆಯಬೇಕು.

 ರಾಜ್ಯ ಸರ್ಕಾರವು ಫೆಬ್ರವರಿ 2024ರ ಬಜೆಟ್‌ನಲ್ಲಿ ಕಾರ್ಮಿಕರಿಗಾಗಿ 1000 ಕೋಟಿ ರುಪಾಯಿಗಳ ಅನುದಾನವನ್ನು ಘೋಷಣೆ ಮಾಡಬೇಕು.

Post a Comment

0Comments

Post a Comment (0)