ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಯುವಕರು ಸಶಕ್ತವಾಗಿ ಪಾಲ್ಗೊಳ್ಳುವಂತೆ ಮಾಡುವ ರಾಷ್ಟ್ರೀಯ ಕೌಶಲ್ಯ ಕಾರ್ಯಕ್ರಮವಾದ

varthajala
0

 ಬೆಂಗಳೂರು, ಭಾರತ ಏಪ್ರಿಲ್ 24,2024 ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆದ ಸ್ಯಾಮ್‌ಸಂಗ್ ಎಐ, ಐಓಟಿ, ಬಿಗ್ ಡೇಟಾ, ಮತ್ತು ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಮುಂತಾದ ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ  ಯುವಜನತೆಯ ಕೌಶಲ್ಯ ಹೆಚ್ಚಿಸಲು ವಿನ್ಯಾಸ ಮಾಡಲಾದ ತನ್ನ ರಾಷ್ಟ್ರೀಯ ಕೌಶಲ್ಯ ಕಾರ್ಯಕ್ರಮ ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್ ನ ಎರಡನೇ ಆವೃತ್ತಿಯನ್ನು ಪ್ರಾರಂಭಿಸಿದೆ. ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಕಾರ್ಯಕ್ರಮವು 18-25 ವರ್ಷ ವಯಸ್ಸಿನ ಯುವಜನತೆಗೆ ಭವಿಷ್ಯದ ತಂತ್ರಜ್ಞಾನಗಳ ಕೌಶಲ್ಯ ಒದಗಿಸುವ ಮತ್ತು ಆ ಮೂಲಕ ಅವರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮವು ಭಾರತದ ಅಭಿವೃದ್ಧಿಯಲ್ಲಿ ಪಾಲುದಾರರಾಗುವ ಮತ್ತು ಪ್ರಗತಿಗೆ ಕೊಡುಗೆ ನೀಡುವ ಸ್ಯಾಮ್‌ಸಂಗ್ ನ ಉದ್ದೇಶಕ್ಕೆ ಪುರಾವೆಯಾಗಿದೆ. ಯುವಜನತೆಗೆ ಸರಿಯಾದ ಅವಕಾಶಗಳನ್ನು ಸೃಷ್ಟಿ ಮಾಡಲು ರೂಪಿಸಲಾಗಿರುವ ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳನ್ನು ಬೆಂಬಲಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಭಾರತದಾದ್ಯಂತ ಇರುವ 3,500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ತಿಳುವಳಿಕೆ ಒಪ್ಪಂದಕ್ಕೆ ಈ ವಾರದ ಆರಂಭದಲ್ಲಿ ಸ್ಯಾಮ್‌ಸಂಗ್ ಮತ್ತು ಎಲೆಕ್ಟ್ರಾನಿಕ್ಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ ಆಫ್ ಇಂಡಿಯಾ (ಇಎಸ್‌ಎಸ್‌ಸಿಐ) ನಡುವೆ ಸಹಿ ಮಾಡಲಾಗಿದೆ. ಈ ವರ್ಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಒದಗಿಸುವುದರ ಜೊತೆಗೆ ಇನ್ನೂ ಹೆಚ್ಚಿನ ಆಸಕ್ತಿಕರ ಅಂಶಗಳು ಸೇರ್ಪಡೆಗೊಂಡಿವೆ. ಪ್ರತಿ ಕ್ಷೇತ್ರದಲ್ಲಿ ರಾಷ್ಟ್ರೀಯ ಟಾಪರ್‌ ಸ್ಥಾನ ಪಡೆಯುವವರು ದೆಹಲಿ/ಎನ್‌ಸಿಆರ್‌ನಲ್ಲಿರುವ ಸ್ಯಾಮ್‌ಸಂಗ್ ಘಟಕಗಳಿಗೆ ಭೇಟಿ ನೀಡುವ ಅವಕಾಶ ಪಡೆಯುತ್ತಾರೆ. ಜೊತೆಗೆ ರೂ. 1 ಲಕ್ಷದ ನಗದು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಘಟಕಗಳಿಗೆ ಭೇಟಿ ನೀಡುವ ವಿದ್ಯಾರ್ಥಿಗಳು ಸ್ಯಾಮ್‌ಸಂಗ್‌ನ ನಾಯಕತ್ವದ ತಂಡಗಳೊಂದಿಗೆ ಸಂವಹನ ನಡೆಸುವ ಮತ್ತು ಅವರಿಂದ ಮಾರ್ಗದರ್ಶನ ಪಡೆಯುವ ಅವಕಾಶ ಹೊಂದಲಿದ್ದಾರೆ. ರಾಷ್ಟ್ರ ಮಟ್ಟದ ಕೋರ್ಸ್ ಟಾಪರ್‌ಗಳು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ವಾಚ್‌ಗಳಂತಹ ಅತ್ಯಾಕರ್ಷಕ ಸ್ಯಾಮ್‌ಸಂಗ್ ಉತ್ಪನ್ನಗಳನ್ನು ಸಹ ಪಡೆಯಲಿದ್ದಾರೆ.

 ಈ ಕುರಿತು ಮಾತನಾಡಿದ ಸ್ಯಾಮ್‌ಸಂಗ್ ನೈಋತ್ಯ ಏಷ್ಯಾದ ಅಧ್ಯಕ್ಷ ಮತ್ತು ಸಿಇಓ ಶ್ರೀ ಜೆಬಿ ಪಾರ್ಕ್, ಸ್ಯಾಮ್‌ಸಂಗ್ ಭಾರತದಲ್ಲಿ ಕಳೆದ 28 ವರ್ಷಗಳಿಂದ ತನ್ನ ಅಸ್ತಿತ್ವದ ಹೊಂದಿದ್ದು, ಈ ಎಲ್ಲಾ ವರ್ಷಗಳಲ್ಲಿ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಿದೆ. ನಮ್ಮ ದೃಷ್ಟಿಕೋನವು ಯುವಜನರಿಗೆ ಕೌಶಲ್ಯ ಒದಗಿಸುವ ಮತ್ತು ಅವರಿಗೆ ವೃತ್ತಿಪರ ಬೆಳವಣಿಗೆಯ ಅವಕಾಶಗಳನ್ನು ಒದಗಿಸಿ ಅವರನ್ನು ಸಬಲೀಕರಣಗೊಳಿಸುವ ಭಾರತ ಸರ್ಕಾರದ ಉದ್ದೇಶಗಳೊಂದಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ ಮೂಲಕ, ನಾವು ಯುವಜನತೆಯ ಕೌಶಲ್ಯವನ್ನು ವೃದ್ಧಿಸುವ ಕೌಶಲ್ಯ ಆಧಾರಿತ ಕಲಿಕೆಯ ವೇದಿಕೆಯನ್ನು ನಿರ್ಮಿಸುತ್ತಿದ್ದೇವೆ. ಅದರಿಂದ ಯುವಕರು ಭವಿಷ್ಯದ- ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ ಮತ್ತು ಅರ್ಥಪೂರ್ಣ ಬದಲಾವಣೆ ಸಾಧ್ಯವಾಗಲಿದೆಎಂದು ಹೇಳಿದರು. .
 ಇಎಸ್‌ಎಸ್‌ಸಿಐ ಸಂಸ್ಥೆಯು ಕೌಶಲಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಉದ್ಯಮ ಸಂಘಗಳಿಂದ ಉತ್ತೇಜಿಸಲ್ಪಟ್ಟ ರಾಷ್ಟ್ರೀಯ ಮಟ್ಟದ ಕೌಶಲ್ಯ ಒದಗಿಸುವ ಸಂಸ್ಥೆಯಾಗಿದೆ ಮತ್ತು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ಅಡಿಯಲ್ಲಿ ಸೆಕ್ಟರ್ ಸ್ಕಿಲ್ ಕೌನ್ಸಿಲ್ (ವಲಯ ಕೌಶಲ್ಯ ಮಂಡಳಿ)ಆಗಿ ಕಾರ್ಯನಿರ್ವಹಿಸುತ್ತದೆ. ಇದು ತನ್ನ ರಾಷ್ಟ್ರವ್ಯಾಪಿ ಇರುವ ಅನುಮೋದಿತ ತರಬೇತಿ ಮತ್ತು ಶಿಕ್ಷಣ ಪಾಲುದಾರರ ನೆಟ್ವರ್ಕ್ ಮೂಲಕ ಸ್ಥಳೀಯ ಮಟ್ಟದಲ್ಲಿ ತರಬೇತಿಯನ್ನು ನೀಡುತ್ತದೆ. ಇಎಸ್‌ಎಸ್‌ಸಿಐ ಸಂಸ್ಥೆಯು ಭಾರತದ ಸಣ್ಣ ಪಟ್ಟಣಗಳಲ್ಲಿ ಎಲ್ಲೆಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ತಂತ್ರಜ್ಞಾನ ಶಿಕ್ಷಣದ ಲಭ್ಯತೆ ಇಲ್ಲವೋ ಅಲ್ಲೆಲ್ಲಾ ಯುವಜನತೆಗೆ ಕೋರ್ಸ್‌ಗಳನ್ನು ಒದಗಿಸುವ ಅವಕಾಶಗಳನ್ನು ಕೂಡ ಎದುರು ನೋಡುತ್ತದೆ.
 ಇಎಸ್‌ಎಸ್‌ಸಿಐ ಚೀಫ್ ಆಫರೇಟಿಂಗ್ ಆಫೀಸರ್(Officiating CEO) ಡಾ. ಅಭಿಲಾಷಾ ಗೌರ್, "ದೇಶದಲ್ಲಿ ಕೌಶಲ್ಯ ಒದಗಿಸುವ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಸಿಎಸ್‌ಆರ್‌ ಉಪಕ್ರಮಕ್ಕಾಗಿ ಸ್ಯಾಮ್‌ಸಂಗ್ ಜೊತೆಗೆ ಪಾಲುದಾರಿಕೆ ಹೊಂದಲು ಇಎಸ್‌ಎಸ್‌ಸಿಐ ಸಂತೋಷ ಪಡುತ್ತದೆ. ನಮ್ಮ ಉದ್ದೇಶಕ್ಕೆ ಅನುಗುಣವಾಗಿ ರಾಷ್ಟ್ರದ ಯುವಜನರಿಗೆ ಅದರಲ್ಲೂ ವಿಶೇಷವಾಗಿ ಕಡಿಮೆ ಸವಲತ್ತು ಹೊಂದಿರುವ ವಿದ್ಯಾರ್ಥಿಗಳಿಗೆ ಭವಿಷ್ಯದ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಕೌಶಲ್ಯ ಮತ್ತು ಅಗತ್ಯ ಜ್ಞಾನವನ್ನು ಒದಗಿಸಲು ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ ಒದಗಿಸುತ್ತದೆ ಮತ್ತು ಅವರನ್ನು ಉದ್ಯೋಗಕ್ಕೆ ಸಿದ್ಧಗೊಳಿಸುತ್ತದೆ ಎಂಬ ಭರವಸೆ ನಮಗಿದೆಎಂದು ಹೇಳಿದರು. ಕಾರ್ಯಕ್ರಮದ ಸಮಯದಲ್ಲಿ, ದೇಶಾದ್ಯಂತ ಇರುವ ಇಎಸ್‌ಎಸ್‌ಸಿಐ ಅನುಮೋದಿತ ತರಬೇತುದಾರರು ಮತ್ತು ಶಿಕ್ಷಣ ಪಾಲುದಾರರ ಮೂಲಕ ಭಾಗವಹಿಸುವವರು ಬೋಧಕರ ನೇತೃತ್ವದಲ್ಲಿ ನಡೆಯುವ ಕ್ಲಾಸ್ ರೂಮ್ ಮತ್ತು ಆನ್‌ಲೈನ್ ತರಬೇತಿಯನ್ನು ಪಡೆಯುತ್ತಾರೆ. ಕಾರ್ಯಕ್ರಮಕ್ಕೆ ದಾಖಲಾದ ಯುವಜನತೆ ತರಗತಿ ಮೂಲಕ ಮತ್ತು ಆನ್‌ಲೈನ್ ತರಬೇತಿ ಪಡೆಯುತ್ತಾರೆ ಹಾಗೂ ಎಐ, ಐಓಟಿ, ಬಿಗ್ ಡೇಟಾ ಮತ್ತು ಕೋಡಿಂಗ್ ಆಂಡ್ ಪ್ರೋಗ್ರಾಮಿಂಗ್‌ನಲ್ಲಿ ತಮ್ಮ ಆಯ್ದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕ್ಯಾಪ್‌ಸ್ಟೋನ್ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸುತ್ತಾರೆ.
 ಅವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಸಾಫ್ಟ್ ಸ್ಕಿಲ್ಸ್ ತರಬೇತಿಯನ್ನೂ ನೀಡಲಾಗುವುದು. ಭಾಗವಹಿಸುವವರು ಭಾರತದಾದ್ಯಂತ ಇರುವ ಇಎಸ್‌ಎಸ್‌ಸಿಐ ಯ ತರಬೇತಿದಾರರು ಮತ್ತು ಶಿಕ್ಷಣ ಪಾಲುದಾರರ ಮೂಲಕ ಸಿದ್ಧಗೊಳಿಸಲಾಗುತ್ತದೆ. ಈ ಕಾರ್ಯಕ್ರಮವು ಆಫ್‌ಲೈನ್ ಮತ್ತು ಆನ್‌ಲೈನ್ ಕಲಿಕೆ, ಹ್ಯಾಕಥಾನ್‌ಗಳು ಮತ್ತು ಕ್ಯಾಪ್‌ಸ್ಟೋನ್ ಪ್ರಾಜೆಕ್ಟ್ ಗಳು ಮತ್ತು ಸ್ಯಾಮ್‌ಸಂಗ್ ಉದ್ಯೋಗಿಗಳು ಒದಗಿಸುವ ಪರಿಣಿತ ಮಾರ್ಗದರ್ಶನವನ್ನು ಒಳಗೊಂಡಿರುತ್ತದೆ.
 ಪಠ್ಯಕ್ರಮದ ರಚನೆಯು ಆಯ್ಕೆಮಾಡಿದ ಕೋರ್ಸ್ ಟ್ರ್ಯಾಕ್ ಗೆ ಅನುಗುಣವಾಗಿ ಬದಲಾಗುತ್ತದೆ. ಉದಾಹರಣೆಗೆ, ಎಐ ಕೋರ್ಸ್ ಅನ್ನು ಆಯ್ಕೆಮಾಡುವವರು 270 ಗಂಟೆಗಳ ಥಿಯರಿ ತರಬೇತಿಯಲ್ಲಿ ಭಾಗವಹಿಸಬೇಕು ಮತ್ತು 80 ಗಂಟೆಗಳ ಪ್ರಾಜೆಕ್ಟ್ ಕೆಲಸವನ್ನು ಮಾಡಬೇಕು. ಐಓಟಿ ಅಥವಾ ಬಿಗ್ ಡೇಟಾ ಕೋರ್ಸ್‌ಗಳನ್ನು ಆಯ್ಕೆ ಮಾಡುವವರು 160 ಗಂಟೆಗಳ ತರಬೇತಿ ಪಡೆಯಬೇಕು. ಇದು ಜೊತೆಗೆ 80 ಗಂಟೆಗಳ ಪ್ರಾಯೋಗಿಕ ಪ್ರಾಜೆಕ್ಟ್ ಕೆಲಸ ಒಳಗೊಂಡಿರುತ್ತದೆ. ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಕೋರ್ಸ್‌ನಲ್ಲಿ ಭಾಗವಹಿಸುವವರು 80 ಗಂಟೆಗಳ ತರಬೇತಿಯಲ್ಲಿ ಭಾಗವಹಿಸಬೇಕು ಮತ್ತು 3-ದಿನದ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಹೊಂದುತ್ತಾರೆ. ಈ ಕಾರ್ಯಕ್ರಮವು ನಾಲ್ಕು ರಾಜ್ಯಗಳಲ್ಲಿ ಎಂಟು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುತ್ತದೆ. ದೇಶದ ಉತ್ತರ ಭಾಗದಲ್ಲಿ, ದೆಹಲಿ ಎನ್‌ಸಿಆರ್‌ನಲ್ಲಿರುವ ಎರಡು ಕೇಂದ್ರಗಳ ಜೊತೆಗೆ ಲಕ್ನೋ ಮತ್ತು ಗೋರಖ್‌ಪುರದಲ್ಲಿ ಎರಡು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ದಕ್ಷಿಣ ಭಾರತದಲ್ಲಿ, ತಮಿಳುನಾಡಿನ ಚೆನ್ನೈ ಮತ್ತು ಶ್ರೀಪೆರಂಬದೂರಿನಲ್ಲಿ 2 ಕೇಂದ್ರಗಳು ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಎರಡು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಕಾರ್ಯಕ್ರಮವು ಏಪ್ರಿಲ್ 2024ರಲ್ಲಿ ಪ್ರಾರಂಭವಾಗಲಿದೆ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆರು ತಿಂಗಳ ಕೋರ್ಸ್ ಅಕ್ಟೋಬರ್ 2024ರಲ್ಲಿ ಕೊನೆಗೊಳ್ಳುತ್ತದೆ. ನವೆಂಬರ್ 2024ರಲ್ಲಿ ಕೋರ್ಸ್ ಟಾಪರ್‌ಗಳ ಹೆಸರನ್ನು ಘೋಷಿಸಲಾಗುತ್ತದೆ.
 2023ರಲ್ಲಿ, ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಕಾರ್ಯಕ್ರಮವು 3000 ವಿದ್ಯಾರ್ಥಿಗಳಿಗೆ ಭವಿಷ್ಯದ-ತಂತ್ರಜ್ಞಾನ ಕೋರ್ಸ್‌ಗಳಲ್ಲಿ ಯಶಸ್ವಿಯಾಗಿ ತರಬೇತಿ ನೀಡಿತ್ತು. ಈ ಉಪಕ್ರಮದಲ್ಲಿ ಸ್ಯಾಮ್‌ಸಂಗ್ ನ ಒಳಗೊಳ್ಳುವಿಕೆಯು ರಾಷ್ಟ್ರ ನಿರ್ಮಾಣಕ್ಕೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಚಟುವಟಿಕೆಗಳ ಮೂಲಕ ನೆರವಾಗುವ ಅದರ ಬದ್ಧತೆಯನ್ನು ತೋರಿಸುತ್ತದೆ. ಸ್ಯಾಮ್‌ಸಂಗ್‌ನ ಇತರ ಸಿಎಸ್‌ಆರ್‌ ಪ್ರಯತ್ನವಾದ ಸಾಲ್ವ್ ಫಾರ್ ಟುಮಾರೋ ಇತ್ಯಾದಿಯಂತಹ ಕಾರ್ಯಕ್ರಮಗಳನ್ನೂ ಇಲ್ಲಿ ನೆನೆಯಬಹುದು. ಈ ಉಪಕ್ರಮಗಳ ಮೂಲಕ, ಭಾರತದ ಭವಿಷ್ಯದ ನಾಯಕರಿಗೆ ಅಗತ್ಯವಾದ ಶಿಕ್ಷಣ ಮತ್ತು ಕೌಶಲ್ಯಗಳನ್ನು ಒದಗಿಸುವ ಮೂಲಕ ಸಶಕ್ತಗೊಳಿಸಿ ಅರ್ಥಪೂರ್ಣ ಬದಲಾವಣೆ ತರುವ ಗುರಿಯನ್ನು ಸ್ಯಾಮ್‌ಸಂಗ್ ಹೊಂದಿದೆ.

Post a Comment

0Comments

Post a Comment (0)