ಸನಾತನ ಕಲೆಗಳಿಗೆ ಆದಿಯಿಲ್ಲ ಅಂತ್ಯವಿಲ್ಲ - ಪಂ.ವಿನಾಯಕ್ ತೋರ್ವಿ

varthajala
0

 ಯಾವುದಕ್ಕೆ ಹುಟ್ಟು ಇದೆ ಅದಕ್ಕೆ ಸಾವು ತಪ್ಪಿದ್ದಲ್ಲ, ಆದರೆ ಸನಾತನ ಕಲೆಗಳ ಆದಿಯೇ ನಮಗೆ ತಿಳಿದಿಲ್ಲ...ಹಾಗಾಗಿ ಅದಕ್ಕೆ ಅಂತ್ಯವಿಲ್ಲ ಎಂದು ಹಿಂದೂಸ್ತಾನಿ ಗಾಯಕರಾದ ಪಂ. ವಿನಾಯಕ ತೊರವಿ ಹೇಳಿದರು.


ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಷಡ್ಜ ಕಲಾ ಕೇಂದ್ರದಲ್ಲಿ ಭಾನುವಾರ, ಮಾರ್ಚ್ 31 ರಂದು ನಡೆದ ಸಂಗೀತ ಬೈಠಕ್ ನಲ್ಲಿ ಅವರು ಮಾತನಾಡಿದರು.
ಸಂಗೀತ ವಿದ್ಯಾರ್ಥಿಗಳಿಗೆ ವೇದಿಕೆಯ ಅನುಭವ ನೀಡುವುದರ ಜೊತೆಗೆ ಖ್ಯಾತ ಕಲಾವಿದರ ಸಂಗೀತ ಕಛೇರಿಗಳನ್ನು ಆಯೋಜಿಸಿ, ವಿದ್ಯಾರ್ಥಿಗಳಲ್ಲಿ ಸಂಗೀತ ಪ್ರಸ್ತುತಿಯ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಈಗಿನ ಯುವ ಗಾಯಕರಲ್ಲಿ ತಾಳ ಹಾಗೂ ಲಯದ ಮೇಲಿನ ಹಿಡಿತ ಹೆಚ್ಚಾಗಿರುವುದನ್ನು ಕಾಣಬಹುದು. ಆದರೆ ಈಗ ಗುರು ಶಿಷ್ಯರ ಸಂಬಂಧಗಳು ಮೊದಲಿನಂತೆ ಇಲ್ಲ. ಈಗಿನ ಮಕ್ಕಳಿಗೆ ಬೈದು ಹೇಳಿದರೆ ಅರ್ಥವಾಗುವುದಿಲ್ಲ... ಹಾಗಾಗಿ ಅವರು ತಂಬೂರಿ ಹಿಡಿದಿರುವವರೆಗೆ ನಮ್ಮ ಶಿಷ್ಯರಾಗಿರುತ್ತಾರೆ, ಉಳಿದ ವೇಳೆ ಅವರು ನಮ್ಮ ಸ್ನೇಹಿತರಾಗುತ್ತಾರೆ ಎಂದು ವಿನಾಯಕ ತೊರವಿ ಹೇಳಿದರು.


ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ತಬಲಾ ವಾದಕರಾದ ಶ್ರೀ ಯೋಗೀಶ್ ಭಟ್ ತಬಲಾ ಸ್ವತಂತ್ರ ವಾದನ ಪ್ರಸ್ತುತಪಡಿಸಿದರು. ಅವರಿಗೆ ಹಾರ್ಮೋನಿಯಂ ಲೇಹರಾ ದಲ್ಲಿ ಶ್ರೀ ಸುಜಿತ್ ಟಿ.ಎನ್ ಸಮರ್ಥ ಸಾಥ್ ನೀಡಿದರು.
ಇದೇ ವೇಳೆ ‘ಷಡ್ಜ' ದ ವಿದ್ಯಾರ್ಥಿ ಶ್ರೀ ರಾಮ್ ಭಟ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಅವರಿಗೆ ತಬಲಾ ಸಲ್ಲಿ ಅಭಯ್ ದಾಮ್ಲೆ ಹಾಗೂ ಹಾರ್ಮೋನಿಯಂ ನಲ್ಲಿ ಸುಜಿತ್ ಟಿ.ಎನ್ ಸಾಥ್ ನೀಡಿದರು.
ಬಳಿಕ ಶ್ರೀ ಅಶ್ವಿನ್ ಬಾಳಿಗ ಅವರು ಪಠದೀಪ್ ರಾಗ ಪ್ರಸ್ತುತಪಡಿಸಿದರು. 
ನಂತರ ಪಂ. ಪರಮೇಶ್ವರ್ ಹೆಗಡೆ ಅವರ ಶಿಷ್ಯರಾದ ಶ್ರೀ ನಯನ್ ಯಾವಗಲ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಅವರಿಗೆ ತಬಳಾದಲ್ಲಿ ಶ್ರೀ ಯೋಗೀಶ್ ಭಟ್ ಹಾಗೂ ಹಾರ್ಮೋನಿಯಂ ನಲ್ಲಿ ಸತ್ಯಜಿತ್ ಸಂಜು ಸಮರ್ಥ ಸಾಥ್ ನೀಡಿದರು.



ಈ ಸಂದರ್ಭದಲ್ಲಿ ಖ್ಯಾತ ತಬಲಾ ವಾದಕರಾದ ಪಂ. ರವೀಂದ್ರ ಯಾವಗಲ್, ಖ್ಯಾತ ಹಾರ್ಮೋನಿಯಂ ಕಲಾವಿದರಾದ ಪಂ.ರವೀಂದ್ರ ಕಾಟೋಟಿ, ಷಡ್ಜ ಕಲಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಡಾ.ದತ್ತಾತ್ರೇಯ ವೆಲಣಕರ್ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)