ಇಂದ್ರಜಿತ್ ಲಂಕೇಶ್ ಗೆ ಇಂಡಿಯನ್ ಲೆಜೆಂಡರಿ ಪ್ರಶಸ್ತಿ ಪ್ರಧಾನ

varthajala
0

 ಬೆಂಗಳೂರು: ಪ್ಯಾಷನ್ ಮತ್ತು ಸೌಂದರ್ಯ ಕ್ಷೇತ್ರದಲ್ಲಿ ಅತಿದೊಡ್ಡ ಸಂಸ್ಥೆಯಾದ ಸುಧಾ ವೆಂಚರ್ಸ್ ಸಂಸ್ಥೆಯು ಇದೀಗ  ಮಹಿಳಾ ಸಬಲೀಕರಣಕ್ಕಾಗಿ ಹೊಸ ಹೆಜ್ಜೆ ಇರಿಸಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸುಧಾ ವೆಂಚರ್ಸ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಶೀ-ರೋ ಆವಾರ್ಡ್ 2024 ( ಶೀ ಈಸ್ ದಿ ಹೀರೋ) ಎಂಬ ಗೌರವ ನೀಡಿ ಸನ್ಮಾನಿಸಿದೆ. ಇದರ ಜೊತೆಗೆ ಹೇಗೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇರುವಳೋ ಹಾಗೇ ಯಶಸ್ವಿ ಮಹಿಳೆಯ ಹಿಂದೆ ಪುರುಷ ಶಕ್ತಿ ಜೊತೆಯಾಗಿರುತ್ತದೆ. ಇದೇ ಅಲೋಚನೆಯ ಹೊತ್ತು ಸ್ತ್ರೀ ಸಾಧಕಿಯರ ಜೊತೆಗೆ ನಿಂತ ಪುರುಷರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪುರುಷರನ್ನು ಗುರುತಿಸಿ ದ ಇಂಡಿಯನ್ ಲೆಜೆಂಡರಿ ಪ್ರಶಸ್ತಿ 2024 ನೀಡಿ ಸನ್ಮಾನಿಸಿದ್ದು, ಸುಧಾ ವೆಂಚರ್ಸ್ ಸಂಸ್ಥೆಯ ವಿಭಿನ್ನತೆಗೆ ಸಾಕ್ಷಿ.. 


ಬೆಂಗಳೂರಿನ ವೈಟ್ ಫೀಲ್ಡ್ ಎಸ್ಸೆಟೋ ಹೋಟೆಲ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚಿತ್ರರಂಗದ ಇಂದ್ರಜಿತ್ ಲಂಕೇಶ್, ತರುಣ್ ಸುದೀರ್, ಅನಿರುದ್ಧ ಜತಕರ, ಹರ್ಷಿಕಾ ಪೂಣಚ್ಚ ಸೇರಿದಂತೆ ಚಿತ್ರರಂಗ ಖ್ಯಾತರು ಉಪಸ್ಥಿತರಿದ್ದರು.  



ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಡಾ.ಎನ್ ಸಂತೋಷ್ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿ ಹಾಗೂ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷರಾದ ಎ. ಅಮೃತ್ ರಾಜ್ ಆಗಮಿಸಿ ನಮ್ಮ ಈ ಸಾಮಾಜಿಕ ಕಳಕಳಿಯ  ಪ್ರೋತ್ಸಾಹಿಸಿದರು. ವೈಟ್ ಫೀಲ್ಡ್ ನ ಎಸ್ಸೆಟ್ಟೋ ಹೋಟೆಲ್ ಭವ್ಯ ವೇದಿಕೆಯಲ್ಲಿ  ಮುಖ್ಯ ಅತಿಥಿಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಸುಧಾ ವೆಂಚರ್ಸ್ ಸಂಸ್ಥೆಯಿಂದ ಆರತಿ (ದೂರದರ್ಶನದ ಪ್ರೋಗ್ರಾಂ ಎಕ್ಸಿಕ್ಯುಟಿವ್, ಮಾಧ್ಯಮ ಕ್ಷೇತ್ರ), ಪ್ರತಿಮಾ (ಸೌಂದರ್ಯ ಕ್ಷೇತ್ರ), ಪ್ರಿಯಾ ಪ್ರಶಾಂತ್ (ಫ್ಯಾಷನ್),
ಪ್ರತಿಮಾ ರಾವ್(ಕ್ರೀಡೆ), ಲಾವಣ್ಯ (ಬೆಸ್ಟ್ ಹೆಲ್ತ್ ಫಿಟ್ನೆಸ್ ಟ್ರೇನರ್), ಜಿ.ಎನ್.ಕೋಮಲ (ಶಿಕ್ಷಣ ಕ್ಷೇತ್ರ), ಶ್ರೀಮತಿ(ಸೌಂದರ್ಯ ಕ್ಷೇತ್ರ) ಪುಷ್ಪ (ಶಿಕ್ಷಣ ಕ್ಷೇತ್ರ), 
ಸಾಧನ ಆಶ್ರಿತ್ (ಪ್ಯಾಷನ್ ಆಕಾಡೆಮಿ)
ಸುಬ್ಬಲಕ್ಷ್ಮಿ (ಸಂಗೀತ). ಅವರಿಗೆ ಶೀ-ರೋ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 

ಇಂದ್ರಜಿತ್ ಲಂಕೇಶ್ (ಚಿತ್ರರಂಗ), ಅನಿರುದ್ಧ ಜತಕರ (ಚಿತ್ರರಂಗ), ತರುಣ್ ಸುಧೀರ್ (ಚಿತ್ರರಂಗ), ನಿರಂಜನ್ ದೇಶಪಾಂಡೆ (ಅತ್ಯುತ್ತಮ ನಿರೂಪಕರು), ಶೈಲೇಶ್ ಕುಮಾರ್ (ಆರೋಗ್ಯ ಮತ್ತು ಚಿತ್ರರಂಗ), ಆಲ್ ಓಕೆ, (ಸಂಗೀತ), ಬಿ.ಎಸ್. ಅವಿನಾಶ್ (ಚಿತ್ರರಂಗ), ಧನಂಜಯ್ (ಮನೋರಂಜನ) ಸತೀಶ್ (ಉದ್ಯಮಿ), ಅಂಬರೀಶ್ ಗೌಡ ಎನ್.ಎಲ್,  ಸಾಮಾಜಿಕ ಕಾರ್ಯಕರ್ತ ಮತ್ತು ರಾಜಕಾರಣಿ
ಸುರೇಶ್ ರಾಥೋಡ್ (ಉದ್ಯಮಿ), ಮೊಹಮ್ಮದ್ ವಸೀಮ್ (ಹೋಟೆಲ್ ಉದ್ಯಮ), ಕೆ.ವಿಜಯ್ ಕುಮಾರ್ (ಉದ್ಯಮಿ, ಸಾಮಾಜಿಕ ಕಾರ್ಯಕರ್ತ), ನಾಗರಾಜು (ಸೆಲೆಬ್ರಿಟಿ ಕಾಸ್ಟ್ಯೂಮ್ ಡಿಸೈನರ್), ಸಂತೋಷ್ ಕಟ್ಟಿಮನಿ (ಉದ್ಯಮಿ)ಇವರಿಗೆ  ಇಂಡಿಯನ್ ಲೆಜೆಂಡರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇನ್ನೂ ಧನಂಜಯ್ ಮತ್ತು ಶೃತಿ ಅತ್ಯುತ್ತಮವಾಗಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಚಿನ್ ನಗರ್ಥ್ ಅವರ ಅದ್ಭುತ ಗಾಯನ ಮತ್ತು ಕರ್ನಾಟಕ ಕಿಂಗ್ಸ್ ಡ್ಯಾನ್ಸ್ ಅಕಾಡೆಮಿ ತಂಡದ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು. 
ಮಹಿಳಾ ಸಬಲೀಕರಣ ಮತ್ತು ಸಾಮಾಜದಲ್ಲಿ ಸಾಧನೆಗೈದು ಎಲೆಮರೆಕಾಯಿಗಳಿಂತಿರುವ ಸಾಧಕರ ಹೊರ ಜಗತ್ತಿಗೆ ಪರಿಚಯಿಸುವ ಒಂದೊಳ್ಳೆ ಉದ್ದೇಶದಿಂದ ಸುಧಾ ವೆಂಚರ್ಸ್ ಇಂತದ್ದೊಂದು ಕಾರ್ಯಕ್ರಮ ಆಯೋಹಿಜಿಸಿತ್ತು. ನೃತ್ಯ, ಸಂಗೀತದಂತಹ ಮನೋರಂಜನೆಯ ಜೊತೆಗೆ ಅತ್ಯದ್ಭುತ ಕಾರ್ಯಕ್ರಮ ನೆರವೇರಿತು.

Post a Comment

0Comments

Post a Comment (0)