*ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿರುವ ಶ್ರೀ ಅದಿ ಶಕ್ತಿ ಅಮ್ಮನವರ ದೇವಸ್ಥಾನ ಸರಿಸುಮಾರು 300ವರ್ಷಗಳ ಹಳೆಯದಾದ ಪುರಾತನ ದೇವಸ್ಥಾನವಾಗಿದೆ, ಇತ್ತಿಚೇಗೆ ದೇವಸ್ಥಾನ ಅಭಿವೃದ್ದಿ ಮತ್ತು ನವೀಕರಣ ಕಾರ್ಯ ಕೈಗೊಂಡಗ ಆರ್ಥಿಕವಾಗಿ ತೊಂದರೆಯಾದ ಕಾರಣ ನಿಧಾನಗತಿಯಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ ಇದರ ಕುರಿತು ದೇವಸ್ಥಾನ ನಿರ್ವಹಣೆ ಮಾಡುವವರು ಮತ್ತು ಅರ್ಚಕರು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರನ್ನು ಭೇಟಿ ಮಾಡಿದರು.
ಎ.ಅಮೃತ್ ರಾಜ್ ರವರು ಮತ್ತು ಸಂಘದ ಪದಾಧಿಕಾರಿಗಳನ್ನ ದೇವಸ್ಥಾನದವರು ನವೀಕರಣ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶ್ರೀ ಅದಿ ಶಕ್ತಿ ಅಮ್ಮನವರ ದೇವಸ್ಥಾನದಲ್ಲಿ ಸಪ್ತಮಾತೃಕೆಯವರು, ನವಗ್ರಹ ದೇವರು ದೇವಸ್ಥಾನವಿದೆ . ಇತಿಹಾಸ ಪ್ರಸಿದ್ದಿ ಪಡೆದಿರುವ ದೇವಸ್ಥಾನವಾಗಿದೆ.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು ನವೀಕರಣ ಕಾರ್ಯದಲ್ಲಿ ಆರ್ಥಿಕ ಸಹಕಾರ ನೀಡಬೇಕು.
ಮಹಾಪೌರರ ಪದಗ್ರಹಣ ಮತ್ತು ಬಜೆಟ್ ಮಂಡನೆ, ಕರಗ ಮಹೋತ್ಸವ ನವರಾತ್ರಿ ಉತ್ಸವಗಳು, ವಿಶೇಷ ಪೂಜೆ ನಡೆಯುತ್ತಿರುತ್ತದೆ.
ಬರುವ ಭಕ್ತಾಧಿಗಳಿಗೆ ಸುಸಜ್ಜಿತ ದೇವಸ್ಥಾನ ಹಾಗೂ ಪ್ರಸಾದ ವಿತರಣಾ ಸ್ಥಳ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ.
ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿರುವ ದೇವಸ್ಥಾನವನ್ನು ಅತಿಶೀಘ್ರದಲ್ಲಿ ವೇಗವಾಗಿ ಅಭಿವೃದ್ದಿ ಮತ್ತು ನವೀಕರಣ ಕಾರ್ಯವಾಗಲು ಅಧಿಕಾರಿ ಮತ್ತು ನೌಕರರ ಆರ್ಥಿಕ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗುತ್ತಿದೆ ಎಂದು *ಎ.ಅಮೃತ್ ರಾಜ್ ರವರು* ಹೇಳಿದರು