ನವದೆಹಲಿ: ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ಸಂಬAಧ ಉದ್ವಿಗ್ನಗೊಂಡಿದೆ, ಭಾರತ ಸರ್ಕಾರ ದೇಶಾದ್ಯಂತ ನಾಗರಿಕ ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸುತ್ತಿದೆ, ಪಾಕಿಸ್ತಾನಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿ ಭಾರತ ದೇಶಾದ್ಯಂತ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸಲು ಸಿದ್ಧತೆ ನಡೆಸುತ್ತಿದೆ,
ಅಧಿಕಾರಿಗಳ ಪ್ರಕಾರ ಸೋಮವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮೇ 7 ರಂದು ಸಂಘಟಿತ ನಾಗರಿಕ ರಕ್ಷಣಾ ತಾಲೀಮು ನಡೆಸುವಂತೆ ನಿರ್ದೇಶನ ನೀಡಿದೆ, ಈ ವ್ಯಾಯಾಮಗಳು ಭಾರತದ ಎಲ್ಲಾ 244 ಗೊತ್ತುಪಡಿಸಿದೆ,
ಮುಖ್ಯವಾಗಿ ದೇಶಾದ್ಯಂತ 25 ರಾಜ್ಯಗಳ ರಾಜಧಾನಿ ಸೇರಿದಂತೆ ಒಟ್ಟು 244 ಪ್ರದೇಶಗಳಲ್ಲಿ ಈ ಮಾಕ್ ಡ್ರಿಲ್ ನಡೆಯಲಿದೆ,
ಕರ್ನಾಟಕದಲ್ಲಿ ಬೆಂಗಳೂರು ನಗರ ಮಲ್ಲೇಶ್ವರ ಹಾಗೂ ರಾಯಚೂರಿನಲ್ಲಿ ಮಾಕ್ ಡ್ರಿಲ್ ನಡೆಯಲಿದೆ,
1971 ರ ಬಳಿಕ ಭಾರತ ಇದೇ ಮೊದಲ ಬಾರಿಗೆ ಮಾಕ್ ಡ್ರಿಲ್ ನಡೆಸುತ್ತಿದೆ, ಕಾರ್ಗಿಲ್ ಸಂಘರ್ಷದ ಸಮಯದಲ್ಲಿ ಕೂಡ ಅಂತಹ ಯಾವುದೇ ಮಟ್ಟದ ನಾಗರಿಕ ರಕ್ಷಣಾ ಕವಾಯತುಗಳನ್ನು ನಡೆಸಲಾಗಿರುಲಿಲ್ಲ