ಉಭಯ ಸದನಗಳಲ್ಲಿ ಅಗಲಿದ ಗಣ್ಯರಿಗೆ ಸಂತಾಪ

varthajala
0

3-3-2025  : ಇಂದು ಆರಂಭವಾದ ವಿಧಾನ ಮಂಡಲದ ಅಧಿವೇಶನದಲ್ಲಿ ಗೌರವಾನ್ವಿತ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ  ಇತ್ತೀಚೆಗೆ ನಿಧನರಾದ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಪಟೇಲ್ ಶಿವರಾಂ, ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ ಸಿಂಗ್. ಹಿರಿಯ ಸಾಹಿತಿ ನಾ.ಡಿಸೋಜ, ಸಂಗೀತ ನಿರ್ದೇಶಕರಾದ ಎಸ್.ಸೋಮಸುಂದರಂ, ಚಲನಚಿತ್ರ ನಟ ಆರ್.ವಿಜಯಕುಮಾರ್ (ಸರಿಗಮ ವಿಜಿ) ಹಾಗೂ ಜಾನಪದ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ ಅವರುಗಳಿಗೆ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚಿಸಿದರು.



ವಿಧಾನಸಭೆಯಲ್ಲಿ ಮಾಜಿ ಪ್ರಧಾನಮಂತ್ರಿಯವರಾದ ಡಾ: ಮನಮೋಹನ್ ಸಿಂಗ್, ಲೋಕಸಭೆಯ ಮಾಜಿ ಸದಸ್ಯರು ಹಾಗೂ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಎಂ. ಶ್ರೀನಿವಾಸ್, ವಿಧಾನಸಭಾ ಸದಸ್ಯರಾದ ಶ್ರೀಮತಿ ಜಯವಾಣಿ ಮಂಚೇಗೌಡ, ಖ್ಯಾತ ಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್, ಹಿರಿಯ ಸಾಹಿತಿ ನಾ. ಡಿಸೋಜಾ, ಜಾನಪದ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ, ಅವರುಗಳು ನಿಧನ ಹೊಂದಿದ್ದು ಇವರುಗಳಿಗೆ ವಿಧಾನಸಭೆಯ ಸಭಾಧ್ಯಕ್ಷರಾದ  ಯು.ಟಿ ಖಾದರ್ ಫರೀದ್ ಅವರು  ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ ಸಂತಾಪ ವ್ಯಕ್ತಪಡಿಸಿದರು.    
ಪಟೇಲ್ ಶಿವರಾಂ:
ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಪಟೇಲ್ ಶಿವರಾಂ ಅವರು 2025 ನೇ ಜನವರಿ 16 ರಂದು ನಿಧನ ಹೊಂದಿರುತ್ತಾರೆ.

ಶ್ರೀಯುತರು 1950ರ ಏಪ್ರಿಲ್ 10ರಂದು ಹಾಸನ ಜಿಲ್ಲೆಯ ದೊಡ್ಡಗೇಣಿಗೆರೆ ಗ್ರಾಮದಲ್ಲಿ ಜನಿಸಿದ್ದು,  ವೃತ್ತಿಯಲ್ಲಿ ಕೃಷಿಕರಾಗಿದ್ದರು. 2010 ರಿಂದ 2016ರ ಅವಧಿಯಲ್ಲಿ ಹಾಸನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗಿ ಸೇವೆಯನ್ನು ಸಲ್ಲಿಸಿದ್ದರು. 1978-83ರ ಅವಧಿಗೆ ದೊಡ್ಡಗೇಣಿಗೇರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, 1984ರಲ್ಲಿ ಹಾಸನ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರಾಗಿ, ಹಾಸನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ, ಹಾಸನ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ, ನವದೆಹಲಿಯ ಕ್ರಿಪ್ಕೊ ಸದಸ್ಯರಾಗಿ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಮತ್ತು ಡಿ.ಸಿ.ಸಿ.ಬ್ಯಾಂಕ್ ಹಾಸನ ಇದರ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು. ಸಹಕಾರಿ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶ್ರೀಯುತರು ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.

ಡಾ: ಮನಮೋಹನ್ ಸಿಂಗ್:

ಭಾರತದ ಮಾಜಿ ಪ್ರಧಾನಿ, ರಾಷ್ಟ್ರದ ಅರ್ಥಕ್ರಾಂತಿಯ ಹರಿಕಾರ ಹಾಗೂ ಶಿಕ್ಷಣ ತಜ್ಞರಾಗಿದ್ದ  ಡಾ: ಮನಮೋಹನ್ ಸಿಂಗ್ ಅವರು  2024ನೇ ಡಿಸೆಂಬರ್ 26 ರಂದು ನಿಧನ ಹೊಂದಿರುತ್ತಾರೆ.

ಶ್ರೀಯುತರು 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್‍ನ ಗಾಡ್‍ನಲ್ಲಿ ಜನಿಸಿದ್ದು,  ಅರ್ಥಶಾಸ್ತ್ರದಲ್ಲಿ ಪಿಎಚ್‍ಡಿ ಪದವೀಧರರಾಗಿದ್ದು, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಹಾಗೂ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಿಂದ ಡಿ.ಫಿಲ್. ಗೌರವ ಪಡೆದಿದ್ದು, ಪಂಜಾಬ್ ಹಾಗೂ ದೆಹಲಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಮಂತ್ರಾಲಯದಲ್ಲಿ ಸಲಹೆಗಾರರಾಗಿ ತಮ್ಮ ವೃತ್ತಿಯನ್ನು ಆರಂಭಿಸಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರು ಹಾಗೂ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕರು ಮತ್ತು ಗೌವರ್ನರ್ ಆಗಿ, ಯೋಜನಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ. 1991ರಿಂದ 2019ರವರೆಗೆ ಅಸ್ಸಾಂ ರಾಜ್ಯದಿಂದ ಹಾಗೂ 2019ರಿಂದ 2024ರವರೆಗೆ ರಾಜಸ್ಥಾನ ರಾಜ್ಯದಿಂದ ರಾಜ್ಯಸಭೆಯ ಸದಸ್ಯರಾಗಿ ಸತತವಾಗಿ 33 ವರ್ಷಗಳು ಸಂಸದರಾಗಿ ಸೇವೆ ಸಲ್ಲಿಸಿರುತ್ತಾರೆ. 1991ರಿಂದ 1996ರವರೆಗೆ ಕೇಂದ್ರ ವಿತ್ತೀಯ ಸಚಿವರಾಗಿ, 1998ರಿಂದ 2004ರವರೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. 2004ರಿಂದ 2014ರವರೆಗೆ ಎರಡು ಬಾರಿ ಭಾರತದ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು. ಇವರ ಆಡಳಿತಾವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, ವಿಶಿಷ್ಟ ಗುರುತಿನ ಪ್ರಾಧಿಕಾರ, ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಮತ್ತು ಮಾಹಿತಿ ಹಕ್ಕು ಕಾಯ್ದೆ ಹಾಗೂ ಶಿಕ್ಷಣದ ಹಕ್ಕು ಸೇರಿದಂತೆ ಹಲವಾರು ಪ್ರಮುಖ ಶಾಸನಗಳು ಮತ್ತು ಯೋಜನೆಗಳನ್ನು ಜಾರಿಗೆ ತಂದಿದ್ದರು.

1991ರಲ್ಲಿ ಹಣಕಾಸು ಸಚಿವರಾಗಿ ನೇಮಕಗೊಂಡಾಗ ದೇಶವು ಆರ್ಥಿಕ, ಕುಸಿತದ ಅಂಚಿನಲ್ಲಿದ್ದು, ರೂಪಾಯಿ ಮೌಲ್ಯವನ್ನು ವೃದ್ಧಿಸಿ. ತೆರಿಗೆಗಳನ್ನು ಕಡಿಮೆ ಮಾಡಿಸುವುದರ ಜೊತೆಗೆ ಸರ್ಕಾರಿ ಚಾಲಿತ ಕೈಗಾರಿಕೆಗಳನ್ನು ಖಾಸಗೀಕರಣಗೊಳಿಸಿ ವಿದೇಶಿ ಹೂಡಿಕೆಯನ್ನು ಪೆÇ್ರೀತ್ಸಾಹಿಸಿ, ಆರ್ಥಿಕ ಉತ್ಕರ್ಷಕ್ಕೆ ಮಹತ್ವದ ಸುಧಾರಣೆಗಳನ್ನು ತಂದು, 2009ರಲ್ಲಿ ಭಾರತವು ಬ್ರಿಕ್ಸ್‍ನ ಸ್ಥಾಪಕ ಸದಸ್ಯ ರಾಷ್ಟ್ರವಾಗಿ ಭಾರತದ ಆರ್ಥಿಕತೆಯು ಸದೃಢ ಮಟ್ಟಕ್ಕೆ ಬೆಳೆಯಲು ಮಹತ್ವದ ಪಾತ್ರವಹಿಸಿದ್ದರು. ಸರ್ವಶಿಕ್ಷಾ ಅಭಿಯಾನ ಕಾರ್ಯಕ್ರಮವನ್ನು ಜಾರಿಗೊಳಿಸುವುದರ ಜೊತೆಗೆ ಎಐಐಎಮ್‍ಎಸ್, ಐಐಟಿ, ಐಐಎಮ್ ಹಾಗೂ ಇನ್ನಿತರೆ ವಿದ್ಯಾ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದವರಿಗೆ ಶೇ.27ರಷ್ಟು ಸೀಟ್‍ಗಳನ್ನು ಕಾಯ್ದಿರಿಸುವ ಕಾನೂನನ್ನು ಜಾರಿಗೊಳಿಸಿದ ಕೀರ್ತಿಗೆ ಭಾಜನರಾಗಿರುತ್ತಾರೆ.

1991ರಿಂದ ಹಲವಾರು ಅಂತರರಾಷ್ಟ್ರೀಯ ಸಮಾವೇಶ ಮತ್ತು ಸಂಘಟನೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ, 1993ರಲ್ಲಿ ಸೈಪ್ರಸ್‍ನಲ್ಲಿ ನಡೆದ ಕಾಮನ್‍ವೆಲ್ತ್ ಸರ್ಕಾರದ ಮುಖ್ಯಸ್ಥರ ಸಭೆ ಹಾಗೂ ವಿಯನ್ನಾದಲ್ಲಿ ನಡೆದ ವಿಶ್ವಮಾನವ ಹಕ್ಕುಗಳ ಸಮಾವೇಶದಲ್ಲಿ ಪಾಲ್ಗೊಂಡ ಭಾರತೀಯ ನಿಯೋಗದ ನೇತೃತ್ವವನ್ನು ವಹಿಸಿದ್ದರು. ಸಾಮಾಜಿಕ ಕ್ಷೇತ್ರದ ತಮ್ಮ ಅದ್ವಿತೀಯ ಸಾಧನೆಗಾಗಿ ಪದ್ಮ ವಿಭೂಷಣ. ವಿಜ್ಞಾನ ಕಾಂಗ್ರೆಸ್‍ನ ಜವಾಹರ್‍ಲಾಲ್ ನೆಹರೂ ಜನ್ಮಶತಮಾನೋತ್ಸವ ಪ್ರಶಸ್ತಿ, ಹಣಕಾಸು ಸಚಿವರಿಗೆ ನೀಡುವ ಏμÁ್ಯ ವಿತ್ತ ಪ್ರಶಸ್ತಿ ಹಾಗೂ ಯೂರೋ ಹಣ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ನಾ.ಡಿ'ಸೋಜಾ:

ಖ್ಯಾತ ಹಿರಿಯ ಸಾಹಿತಿ ನಾಬರ್ಟ್ ಡಿ'ಸೋಜಾ ಅವರು 2025 ನೇ ಜನವರಿ 05 ರಂದು ನಿಧನ ಹೊಂದಿರುತ್ತಾರೆ.

ಶ್ರೀಯುತರು 19378 ಜೂನ್ 6ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದ್ದು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್‍ಮೀಡಿಯೆಟ್ ಶಿಕ್ಷಣ ಪಡೆದು, ಲೋಕೋಪಯೋಗಿ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿ ಶರಾವತಿ ಯೋಜನೆ, ಕಾರ್ಗಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರಗಳಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 75 ಕಾದಂಬರಿಗಳು, 06 ಚಾರಿತ್ರಿಕ ಕಾದಂಬರಿ, ಮಕ್ಕಳಿಗಾಗಿ 25 ಕಾದಂಬರಿ, 09 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು, ಸುಮಾರು 500ಕ್ಕೂ ಹೆಚ್ಚು ಕಥೆಗಳು, ಹತ್ತಾರು ನಾಟಕಗಳು, ರೇಡಿಯೋ ನಾಟಕಗಳು, ಅನೇಕಾ ಪತ್ರಿಕಾ ಲೇಖನಗಳು ಹೀಗೆ ವಿಶಾಲ ವ್ಯಾಪ್ತಿಯ ಬರಹಗಳನ್ನು ನಾಡಿಗೆ ನೀಡುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇವರ "ಮುಳುಗಡೆಯ ಊರಿಗೆ ಬಂದವರು" ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ "ಬಾಲ ಸಾಹಿತ್ಯ ಪುರಸ್ಕಾರ" "ದ್ವೀಪ" ಮತ್ತು "ಕಾಡಿನ ಬೆಂಕಿ" ಕಾದಂಬರಿಗಳು ಚಲನಚಿತ್ರಗಳಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿವೆ. ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಶ್ರೀಯುತರ ಸಣ್ಣ ಕಥೆಗಳು ಕೊಂಕಣಿ, ಮಲಯಾಳಂ, ತೆಲುಗು, ಹಿಂದಿ, ಇಂಗ್ಲೀμï ಭಾμÉಗಳಿಗೆ ಅನುವಾದಗೊಂಡಿರುತ್ತವೆ. "ಮುಳುಗಡೆ", "ಕೊಳಗ", ಒಳಿತನ್ನು ಮಾಡಲು ಬಂದವರು", "ಬಣ್ಣ", "ಪಾದರಿಯಾಗುವ ಹುಡುಗ", "ಇಬ್ಬರು ಮಾಜಿಗಳು" ಮುಂತಾದ ಕಾದಂಬರಿಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿವೆ. ಶ್ರೀಯುತರು ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆಗೆ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಹೀಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.

ಎಸ್.ಸೋಮಸುಂದರಂ:

ಖ್ಯಾತ ಸುಗಮ ಸಂಗೀತ ಗಾಯಕ, ಪ್ರದರ್ಶಕ ಮತ್ತು ಸಂಯೋಜಕರಾದ ಎಸ್. ಸೋಮಸುಂದರಂ ಅವರು 2025 ನೇ ಜನವರಿ 12 ರಂದು ನಿಧನ ಹೊಂದಿರುತ್ತಾರೆ.

ಶ್ರೀಯುತರು ವಿದ್ಯಾರ್ಥಿಯಾಗಿದ್ದಾಗಲೇ ಭಾವಗೀತೆಗಳನ್ನು ಹಾಡಲು ಪ್ರಾರಂಭಿಸಿ, ಕ್ರಮೇಣ ಆಕಾಶವಾಣಿಯಲ್ಲಿ ಸುಗಮ ಸಂಗೀತ ಮತ್ತು ಭಾವಗೀತೆಗಳನ್ನು ಹಾಡಿ, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 1000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದ ಇವರು ಹದಿನೈದು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹತ್ತು ಹಲವು ಭಾμÉಗಳಲ್ಲಿ ಹಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. 1957ರಲ್ಲಿ ಬೆಂಗಳೂರಿನಲ್ಲಿ "ಗಾನಸುಧಾ ಸುಗಮ ಸಂಗೀತ ಅಕಾಡೆಮಿ" ಅನ್ನು ಪ್ರಾರಂಭಿಸುವ ಮೂಲಕ ಸುಗಮ ಸಂಗೀತ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದರು. ಇವರ ಅತ್ಯುತ್ತಮ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ, ಐದು ಬಾರಿ ಕೇರಳ ಹಾಗೂ ನಾಲ್ಕು ಬಾರಿ ತಮಿಳುನಾಡು ರಾಜ್ಯ ಪ್ರಶಸ್ತಿ, ಸಂತ ಶಿಶುನಾಳ ಶರೀಫ್, ಕರ್ನಾಟಕ ಕಲಾಶ್ರೀ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಆರ್. ವಿಜಯಕುಮಾರ್:

ಸರಿಗಮ ವಿಜಿ ಎಂದು ಹೆಸರುವಾಸಿಯಾಗಿದ್ದ ರಂಗಭೂಮಿ ಹಾಗೂ ಸಿನಿಮಾರಂಗದ ನಟ. ಬರಹಗಾರ ಮತ್ತು ನಿರ್ದೇಶಕರಾದ ಆರ್. ವಿಜಯಕುಮಾರ್ ಅವರು 2025ನೇ ಜನವರಿ 15 ರಂದು  ನಿಧನ ಹೊಂದಿರುತ್ತಾರೆ.

1949ರಲ್ಲಿ ಬೆಂಗಳೂರಿನ ವಿಮಾನಪುರದಲ್ಲಿ (ಎಚ್‍ಎಎಲ್ ಪ್ರದೇಶ) ಜನಿಸಿದ್ದು, ಸರ್ಕಾರಿ ಸ್ವಾಮ್ಯದ ಎನ್‍ಜಿಇಎಫ್ ಸಂಸ್ಥೆಯ ಉದ್ಯೋಗಿಯಾಗಿದ್ದರು. ರಂಗಭೂಮಿ ಕಲಾವಿದರಾಗಿದ್ದರು. ಸಿನಿಮಾಗೆ ಪಾದರ್ಪಣೆ ಮಾಡಿ, ಸಹಾಯಕ ನಿರ್ದೇಶಕರಾಗಿ 80ಕ್ಕೂ ಅಧಿಕ ಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 1980ರಲ್ಲಿ ಗೀತಪ್ರಿಯಾ ನಿರ್ದೇಶನದ "ಬೆಳವಲದ ಮಡಿಲಲ್ಲಿ" ಚಿತ್ರದಲ್ಲಿ ಸಣ್ಣ ಪಾತ್ರ ಅಭಿನಯಿಸುವುದರ ಮೂಲಕ ಸಿನಿಮಾ ರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದ ಇವರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ಪೆÇೀಷಕ ಮತ್ತು ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಯುತರ "ಸಂಸಾರದಲ್ಲಿ ಸರಿಗಮ" ಹಾಸ್ಯ ನಾಟಕವು 1000ಕ್ಕೂ ಹೆಚ್ಚು ಪ್ರದರ್ಶನಗಳೊಂದಿಗೆ ಅವರಿಗೆ "ಸರಿಗಮ ವಿಜಿ" ಎಂಬ ಹೆಸರನ್ನು ತಂದುಕೊಟ್ಟಿತು. ಇವರು 2400 ಕಂತುಗಳ ದೂರದರ್ಶನ ಧಾರವಾಹಿಗಳನ್ನು ನಿರ್ದೇಶಿಸಿದ್ದು, ಜೀ ಕನ್ನಡದಲ್ಲಿ ಪ್ರಸಾರವಾದ ರಿಯಾಲಿಟಿ ಶೋ, ಕಾಮಿಡಿ ಖಿಲಾಡಿಗಳು ಚಾಂಪಿಯನ್‍ಶಿಪ್‍ನಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು. 38 ವರ್ಷಗಳ ಕಲಾ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ಮತ್ತು ತೆಲುಗು ವಿಜ್ಞಾನ ಸಮಿತಿಯು ಶ್ರೀಕೃಷ್ಣದೇವರಾಯ ಪುರಸ್ಕಾರ ನೀಡಿ ಗೌರವಿಸಿದೆ.

ಸುಕ್ರಿ ಬೊಮ್ಮ ಗೌಡ:

ಪದ್ಮಶ್ರೀ ಪುರಸ್ಕøತ ಕಾಡಿನ ಹಕ್ಕಿ, ಜಾನಪದ ಕೋಗಿಲೆ ಎಂದೇ ಪ್ರಸಿದ್ದರಾಗಿದ್ದ ಸುಕ್ರಿ ಬೊಮ್ಮಗೌಡ ಅವರು 2025ನೇ ಫೆಬ್ರವರಿ 13 ರಂದು ನಿಧನ ಹೊಂದಿರುತ್ತಾರೆ.

1937ರಲ್ಲಿ ಜನಿಸಿದ್ದ ಶ್ರೀಯುತರು ಕರ್ನಾಟಕದ ಅಂಕೋಲಾದ ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಬುಡಕಟ್ಟಿನ ಸಾಂಪ್ರದಾಯಿಕ ಹಾಡಿನ ಜೊತೆಗೆ ತಾರ್ಲೆ ಕುಣಿತ ತಂಡವನ್ನು ಕಟ್ಟಿ ತಮ್ಮ ಜನಾಂಗದವರಿಗೆ ಕಲಿಸಿ, ಸಂಗೀತವನ್ನು ಪ್ರದರ್ಶಿಸುತ್ತಿದ್ದರಲ್ಲದೇ ಬುಡಕಟ್ಟು ಜನಾಂಗದ ಸಂಸ್ಕøತಿಯನ್ನು ಹಾಗೂ ಸಂಗೀತಗಳ ಭಂಡಾರವನ್ನು ಸಂರಕ್ಷಿಸಲು ಬಹಳಷ್ಟು ಶ್ರಮಿಸಿದ್ದರು. ಇವರ ಪ್ರತಿಭೆ ಹಾಡಿಗμÉ್ಟ ಸೀಮಿತವಾಗಿರದೆ ಪರಂಪರಾಗತ ನಾಟಿ ವೈದ್ಯ ಪದ್ಧತಿಯಲ್ಲೂ ಅಪಾರ ಜ್ಞಾನ ಹೊಂದಿದ್ದರು.

ದಶಕಗಳ ಕಾಲ ಸಾಕ್ಷರತಾ ಆಂದೋಲನಾ, ಸಾರಾಯಿ ನಿμÉೀಧ, ರೈತ ಹೋರಾಟಗಳಂತಹ ಸಾಮಾಜಿಕ ಸಮಸ್ಯೆಗಳ ಕುರಿತು ತಮ್ಮ ತಂಡದ ಮೂಲಕ ಜನಜಾಗೃತಿ ಮೂಡಿಸಿದ್ದರು. ಕರ್ನಾಟಕದ ಬಡಗೇರಿಯ ಸ್ಥಳೀಯ ಸರ್ಕಾರಿ ಸಂಸ್ಥೆಯಾದ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು 5000 ಹಾಲಕ್ಕಿ ಪದಗಳನ್ನು ಕಂಠಪಾಠ ಮಾಡಿದ್ದ ಸುಕ್ತಾಜಿಯವರನ್ನು "ಹಾಲಕ್ಕಿಯ ನೈಟಿಂಗೇಲ್' ಎಂದು ಕರೆಯಲಾಗಿದೆ. ತಮ್ಮ ಪಾರಂಪರಿಕ ಜ್ಞಾನದ ಮೂಲಕ ಜಾನಪದ ಅಧ್ಯಯನ ನಡೆಸುವವರಿಗೆ ವಿಶ್ವಕೋಶವೇ ಆಗಿದ್ದರು. ಪರಂಪರೆಯಿಂದ ಹರಿದು ಬಂದ ರಾಮಾಯಣ, ಮಹಾಭಾರತ ಕಥೆಗಳನ್ನು ಹಾಡಬಲ್ಲವರಾಗಿದ್ದ ಶ್ರೀಯುತರು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸುಗ್ಗಿ ಕುಣಿತ ಮತ್ತು ಗುಮಟ ಕಲೆಗಳ ತರಬೇತಿ. ನೀಡುತ್ತಿದ್ದರು.

ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ನೀಡಿದ್ದ ಅಪಾರ ಕೊಡುಗೆಗಳಿಗಾಗಿ ಜಾನಪದಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಾಂಪ್ರದಾಯಿಕ ಬುಡಕಟ್ಟು ಸಂಗೀತವನ್ನು ಸಂರಕ್ಷಿಸುವ ಕಾರ್ಯಕ್ಕಾಗಿ ಭಾರತದ ಅತ್ಯುನ್ನತ ನಾಗರೀಕ ಗೌರವವಾದ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.

ವಿಧಾನ ಸಭೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ  ಆರ್.ಅಶೋಕ್,  ಸಚಿವ ಹೆಚ್.ಕೆ.ಪಾಟೀಲ್,  ಸಚಿವರಾದ ಸಂತೋಷ್ ಲಾಡ್, ಕೃಷಿ ಸಚಿವ ಚೆಲುವರಾಯಸ್ವಾಮಿ, ಶಾಸಕರುಗಳಾದ ಜಿ.ಟಿ. ದೇವೇಗೌಡ, ಅರಗ ಜ್ಞಾನೇಂದರ, ದಿನಕರಶೆಟ್ಟಿ, ಸಂತಾಪ ಸೂಚನೆಗೆ ಬೆಂಬಲವನ್ನು ಸೂಚಿಸಿದರು.

ವಿಧಾನ ಪರಿಷತ್ತಿನಲ್ಲಿ ಸಭಾ ನಾಯಕರು ಹಾಗೂ ಸಚಿವರಾದ ಎನ್. ಎಸ್. ಭೋಸರಾಜು, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ, ಸದಸ್ಯರಾದ ತಳವಾರ ಸಾಬಣ್ಣ, ಬಿ.ಕೆ. ಹರಿಪ್ರಸಾದ್, ಹೆಚ್. ವಿಶ್ವನಾಥ್, ಐವಾನ್ ಡಿಸೋಜಾ, ಸಲೀಮ್ ಅಹಮ್ಮದ್, ಶ್ರೀಮತಿ ಉಮಾಶ್ರೀ, ಟಿ.ಎ. ಶರವಣ, ಭೋಜೇಗೌಡ ಹಾಗೂ ಎಂ ನಾಗರಾಜು ಅವರು ಸಂತಾಪ ಸೂಚನೆಗೆ ಬೆಂಬಲ ವ್ಯಕ್ತ ಪಡಿಸಿದರು.  

ನಂತರ ಉಭಯ ಸದನಗಳಲ್ಲಿ ಒಂದು ನಿಮಿಷಗಳ ಕಾಲ ಮೌನವನ್ನು ಆಚರಿಸಲಾಯಿತು.

Post a Comment

0Comments

Post a Comment (0)