ನವದೆಹಲಿ: ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಎಕ್ಸ್ ಫೋಸ್ಟ್ ನಲ್ಲಿ ಗಾಯಬ್ ಹೆಸರಿನಲ್ಲಿ ತಲೆಯಿಲ್ಲದೆ ಮನುಷ್ಯವ ದೇಹದ ಚಿತ್ರವನ್ನು ಹಂಚಿಕೊಂಡಿದೆ, ಕಾಂಗ್ರೆಸ್ ನ ಈ ಮನಸ್ಧಿತಿ ಪಾಕಿಸ್ತಾನಕ್ಕೆ ಸ್ಪಷ್ಟ ಬೆಂಬಲ ಸೂಚಿಸುವುದನ್ನು ತೋರಿಸುತ್ತದೆ, ಈ ಪೋಸ್ಟ್ ಶಿರಚ್ಛೇದನದ ಚಿತ್ರಣವಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ,
ಗಾಯಬ್ ಹೆಸರಿನಲ್ಲಿ ಕಾಂಗ್ರೆಸ್ ಪೋಸ್ಟ್ ಹಂಚಿಕೊಂಡಿರುವುದಕ್ಕೆ ಕಿಡಿಕಾರಿರುವ ಬಿಜೆಪಿ ನಾಯಕ್ ಗೌರವ್ ಭಾಟಿಯಾ ಲಷ್ಕರ್ ಎ ಪಾಕಸಿಸ್ತಾನ್ ಕಾಂಗ್ರೆಸ್ ಆಗಿ ರೂಪಾಂತರಗೊಳ್ಳುತ್ತಿರುವುದು ಆತಂಕಕಾರಿ, ಪಾಕಿಸ್ತಾನದೊಂದಿಗೆ ಭಾರತ ಉದ್ವಗ್ನ ಸ್ಧಿತಿಯಲ್ಲಿರುವಾಗಲೇ ಮೋದಿ ಅವರ ತಲೆಯಿಲ್ಲದ ಚಿತ್ರವನ್ನು ಕಾಂಗ್ರೆಸ್ ಟ್ವೀಟ್ ಮಾಡಿದ್ದಾರೆ, ಅವರು ಭಾರತ ಸರ್ಕಾರವನ್ನು ಬೆಂಬಲಿಸುತ್ತಿದ್ದೇವೆ ಎಂದು ಹೇಳಿದ ಮೇಲೂ ಇಂತಹ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ, ಪಾಕಿಸ್ತಾನಿಗಳು ಕಾಂಗ್ರೆಸ್ ನ ಇಂತಹ ಟ್ವೀಟ್ ಗಳನ್ನು ತುಂಬಾ ಮೆಚ್ಚುತ್ತಾರೆ, ಕಾಂಗ್ರೆಸ್ ನಾಯಕರು ಈ ಟ್ವೀಟ್ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ,
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮಾತನಾಡಿ ಕಾಂಗ್ರೆಸ್ ಮಾಡಿರುವ ಗಾಯಬ್ ಪೋಸ್ಟ್ ದೊಡ್ಡ ತಪ್ಪು ಇದು ಬಹಳ ಸೂಕ್ಷ್ಮ ವಿಷಯ, ಈ ವಿಷಯದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವುದು ವಿರೋಧ ಪಕ್ಷದ ಜವಾಬ್ದಾರಿಯಾಗಿದೆ,
ಕಾಂಗ್ರೆಸ್ ನಂತಹ ಪಕ್ಷಗಳು ಪಾಕಿಸ್ತಾನದ ವಿಚಾರದ ಬಗ್ಗೆ ರಾಜಕೀಯ ಮಾಡಿದರೆ ಇದು ಒಳ್ಳೆಯದಲ್ಲ ಎಂದಿದ್ದಾರೆ,
ಬಿಹಾರ ಉಪಮುಖ್ಯಮಂತ್ರಿ ಸಾಮ್ರಾ ಚೌಧರಿ ಮಾತನಾಡಿ ಪ್ರಧಾನಿ ಮೋದಿ ಸರ್ಕಾರ ಎಷ್ಟು ಎಚ್ಚರಿಕೆಯಿಂದ ದೇಶವನ್ನು ನಡೆಸುತ್ತಿದೆ ಎಂಬುದು ದೇಶದ ಜನರಿಗೆ ತಿಳಿದಿದೆ, ದೇಶದ ಜನರಿಗೆ ವಿರೋಧ ಪಕ್ಷದ ನಾಯಕ ಎಲ್ಲಿದ್ದಾರೆಂದು ತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ,