ಮುಂದಿನ 36 ಗಂಟೆಗಳಲ್ಲಿ ಮಿಲಿಟರಿ ಕ್ರಮಕ್ಕೆ ಭಾರತ ಮುಂದಾಗಿದೆ: ಪಾಕ್‌ ಸಚಿವ

varthajala
0

 


ಇಸ್ಲಾಮಾಬಾದ್: ಪಾಕಿಸ್ತಾನ  ವಿರುದ್ಧ ಮಿಲಿಟರಿ ಕ್ರಮಕ್ಕೆ ಭಾರತ ಮುಂದಾಗುತ್ತಿದೆ. ಮುಂದಿನ 24-36 ಗಂಟೆಗಳಲ್ಲಿ ಭಾರತ  ಮಿಲಿಟರಿ ಕಾರ್ಯಾಚರಣೆ ನಡೆಸಲು ಯೋಜಿಸುತ್ತಿದೆ ಎಂದು ಪಾಕ್‌ ಸಚಿವ ಅತಾವುಲ್ಲಾ ತರಾರ್‌  ಹೇಳಿಕೆ ನೀಡಿದ್ದಾರೆ. ಅಲ್ಲದೇ, ಸೇನಾ ಕ್ರಮ ಕೈಗೊಂಡರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಧಾನಿ ಮೋದಿ  ಅವರ ಸರಣಿ ಸಭೆ ನಡೆಸಿದ್ದು, ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಮೋದಿ ಬ್ಯಾಕ್‌ ಟು ಬ್ಯಾಕ್‌ ಸಭೆಗೆ ಪಾಕಿಸ್ತಾನ ಅಕ್ಷರಶಃ ಬೆಚ್ಚಿಬಿದ್ದಿದೆ. ಇದರ ಬೆನ್ನಲ್ಲೇ ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿ ಪಾಕಿಸ್ತಾನ ಮಾತನಾಡಿದೆ.

26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬ ಭಾರತದ ಆರೋಪ ಆಧಾರರಹಿತವಾದದ್ದು. ಕಪೋಲಕಲ್ಪಿತ ಆರೋಪಗಳ ಆಧಾರದ ಮೇಲೆ ಭಾರತೀಯ ಪಡೆಗಳು ದಾಳಿ ನಡೆಸಲು ಸಿದ್ಧತೆ ನಡೆಸುತ್ತಿವೆ ಎಂದು ಪಾಕ್ ಸಚಿವ ಅತಾವುಲ್ಲಾ ತರಾರ್ ಹೇಳಿದ್ದಾರೆ.

ಭಾರತ ಸ್ವತಃ ತಾನೇ ತೀರ್ಪುಗಾರನಂತೆ ವರ್ತಿಸುತ್ತಿದೆ. ಜವಾಬ್ದಾರಿಯುತ ರಾಷ್ಟ್ರವಾಗಿ ಸತ್ಯವನ್ನು ಖಚಿತಪಡಿಸಿಕೊಳ್ಳಲು ತಜ್ಞರ ಆಯೋಗಕ್ಕೆ ವಿಶ್ವಾಸಾರ್ಹ, ಪಾರದರ್ಶಕ ಹಾಗೂ ಸ್ವತಂತ್ರ ತನಿಖೆ ನಡೆಸಲು ಪಾಕಿಸ್ತಾನ ಮುಕ್ತ ಅವಕಾಶ ನೀಡಿದೆ. ಪಾಕಿಸ್ತಾನವು ಭಯೋತ್ಪಾದನೆಯ ಬಲಿಪಶುವಾಗಿದೆ ಎಂದು ತರಾರ್‌ ಮಾತನಾಡಿದ್ದಾರೆ.

Post a Comment

0Comments

Post a Comment (0)