ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೊತ್ತಲ್ಲೇ ಪಾಕ್ ಶಾಸಕರು ನಾಲಿಗೆ ಹರಿಬಿಟ್ಟಿದ್ದಾರೆ. ಒಂದಲ್ಲ ಒಂದು ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಭಾರತವನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ.
ಅಯೋಧ್ಯೆಯ ಹೊಸ ಬಾಬರಿ ಮಸೀದಿಗೆ ಮೊದಲ ಇಟ್ಟಿಗೆಯನ್ನು ಪಾಕಿಸ್ತಾನ ಸೇನಾ ಸೈನಿಕರು ಇಡುವ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮೊದಲ ಅಜಾನ್ ನೀಡುವ ಸಮಯ ದೂರವಿಲ್ಲ ಎಂದು ಹೇಳಿಕೆ ಮೂಲಕ ಪಾಕಿಸ್ತಾನ ಶಾಸಕಿ ಪಲ್ವಾಶಾ ಮೊಹಮ್ಮದ್ ಜೈ ಖಾನ್ ನಾಲಿಗೆ ಹರಿಬಿಟ್ಟಿದ್ದಾರೆ.
ಭಾರತದ ಯಾವುದೇ ದುಸ್ಸಾಹಸಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕು ಎಂದು ಪಾಕಿಸ್ತಾನಿ ಶಾಸಕರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಪಾಕಿಸ್ತಾನ ಸಂಸತ್ತಿನ ಮೇಲ್ಮನೆಯಲ್ಲಿ ಪಲ್ವಾಶಾ ಮತ್ತು ಇತರ ಸೆನೆಟರ್‌ಗಳ ಹೇಳಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಬಹುದು.
ನೆರೆಯ ದೇಶವು (ಭಾರತ) ತಮ್ಮ ಚಲನಚಿತ್ರಗಳಲ್ಲಿ ನಡೆಯುವ ಘಟನೆಗಳು ಮತ್ತು ಯುದ್ಧಭೂಮಿಯಲ್ಲಿ ನಡೆಯುವ ಘಟನೆಗಳ ನಡುವೆ ದೊಡ್ಡ ವ್ಯತ್ಯಾಸವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಪಲ್ವಾಶಾ ಹೇಳಿಕೆ ನೀಡಿದ್ದಾರೆ.