ವಿಜಯಪುರ: ಪೆಹಲ್ಗಮ್ ನಲ್ಲಿ ಉಗ್ರರು ನಡೆಸಿದ ದುರಂತದ ಬಳಿಕ ಪಾಪಿ ಪಾಕ್ ವಿರುದ್ಧ ಭಾರತ ನಿಗಿನಿಗಿ ಕೆಂಡವಾಗಿದೆ, ಈ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರಮಣಾಕಾರಿ ಹೇಳಿಕೆ ನೀಡಿದ್ದು, ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ,
ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪಾಕಿಸ್ತಾನಕ್ಕೆ ಜೈಕಾರ ಹಾಕುವವರಿಗೆ ಚಪ್ಪಲಿಯಿಂದ ಹೊಡೆಯಿರಿ, ಅವರ ಪರವಾಗಿ ನಾನು ಇರುತ್ತೇನೆ, ಅವರ ವಕಾಲತ್ತು ನಾನು ನೋಡಿಕೊಳ್ಳುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳೀ ನಡೆಸಿದರು,
ಹಾಗೆಯೇ ಸಚಿವ ಶಿವನಾಂದ ಪಾಟೀಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯತ್ನಾಳ್ ಅವನಿಗೆ ತಾಕತ್ ಇದ್ದರೆ ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಸ್ಧಾನಕ್ಕೆ ರಾಜೀನಾಮೆ ಕೊಟ್ಟು, ನನ್ನ ವಿರುದ್ಧ ಸ್ಪರ್ಧಿಸಲಿ, ಮುಂದಿನ ಶುಕ್ರವಾರದೊಳಗೆ ರಾಜೀನಾಮೆ ಕೊಡಲಿ ನಿಮ್ಮ ಮತ ಕ್ಷೇತ್ರದಲ್ಲೇ ಪಕ್ಷೇತರವಾಗಿ ನಿಂತು ಆರಿಸಿ ಬರುತ್ತೇನೆ ಎಂದು ಸವಾಲ್ ಹಾಕಿದರು,