ವಿದ್ಯುತ್ ಇಲ್ಲ... ಗ್ಯಾಸ್ ಗೂ ಗತಿ ಇಲ್ಲ: ದೇಶದ ಪರಿಸ್ಧಿತಿ ಬಿಚ್ಚಿಟ್ಟ ಪಾಕ್ ಪತ್ರಕರ್ತ

varthajala
0

 



ಲಾಹೋರ್: ಪಾಕಿಸ್ತಾನ ಯುದ್ಧದ ಭೀತಿಯಲ್ಲಿ ನಲುಗುತ್ತಿದ್ದು, ಇದೀಗ ದೇಶದ ಆರ್ಥಿಕತೆ ಸಂಪೂರ್ಣವಾಗಿ ಹಳ್ಳ ಹಿಡಿದಿದೆ, ಎಂದು ಸ್ವತಃ ಪಾಕಿಸ್ತಾನದ ಪತ್ರಕರ್ತ ಅಹ್ಮದ್ ರಶೀದ್ ಹೇಳಿಕೆ ನೀಡಿದ್ದಾರೆ, 

ಸಂದರ್ಶನವೊಂದರಲ್ಲಿ ಮಾತನಾಡುತ್ತ ರಶೀದ್ ಸ್ವತಃ ನಮ್ಮ ಮನೆಯಲ್ಲಿ ಕಳೆದ 6 ತಿಂಗಳಿಂದ ಗ್ಯಾಸ್ ಸಿಲಿಂಡರ್ ಬಂದಿಲ್ಲ, ನಮ್ಮ ದೇಶ ಮುನ್ನಡೆಯಲು ಬೇಕಿರುವ ಆರ್ಥಿಕ ಶಕ್ತಿಯೇ ಕುಸಿದಿದೆ ಎಂದಿದ್ದಾರೆ, 

ಇನ್ನು ಪಾಕಿಸ್ತಾನದ ಆರ್ಥಿಕ ಪರಿಸ್ಧಿತಿಯ ಕುರಿತು ಮಾತು ಮುಂದುವರೆಸಿರುವ ಅವರು ಯಾರೂ ಕೂಡ ಪಾಕಿಸ್ತಾನದಲ್ಲಿ ಹೊಡಿಕೆ ಮಾಡಲು ಮುಂದೆ ಬರುತ್ತಿಲ್ಲ, ಮೊದಲಿನಿಂದಲೂ ಪಾಕಿಸ್ತಾನಕ್ಕೆ ಭಾರತ ಹಾಗೂ ಅಫ್ಘಾನಿಸ್ತಾನದಿಂದ ಬೆದರಿಕೆ ಇರುವುದರಿಂದ ನಮ್ಮ ದೇಶದ ಹಣ ಮಿಲಿಟರಿ ಹಾಗೂ ಶಾಸ್ತ್ರಾಸ್ತ್ರಗಳು, ನ್ಯೂಕ್ಲಿಯರ್ ಬಾಂಬ್ ತಯಾರಿಕೆಯಲ್ಲೇ ಮುಗಿದು ಹೋಗುತ್ತಿದೆ, 

ನಮ್ಮ ದೇಶದಲ್ಲಿ ನಿತ್ಯ ಕೇವಲ 12 ಗಂಟೆಗಳ ಕಾಲ ಮಾತ್ರ ವಿದ್ಯುತ್ ಸಿಗುತ್ತಿದೆ, ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಹಣವಿಲ್ಲ ಎಂದು ಪತ್ರಕರ್ತ ಅಹ್ಮದ್ ರಶೀದ್ ಪಾಕಿಸ್ತಾನದ ದುಸ್ಧಿತಿಯನ್ನು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ ,

Tags

Post a Comment

0Comments

Post a Comment (0)