ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಬಿ.ವೈ.ವಿಜಯೇಂದ್ರರಿಗೆ ಸನ್ಮಾನ

varthajala
0

ಎಲ್ಲ ಸಮುದಾಯ ಅಭಿವೃದ್ದಿಗೆ ಧ್ವನಿಯಾಗಿ ಸೇವೆ ಸಲ್ಲಿಸಿದರು ಬಿ.ಎಸ್.ಯಡಿಯೂರಪ್ಪ

ಕೇಂದ್ರ ಸರ್ಕಾರ ಜಾತಿಜನಗಣತಿ ತೀರ್ಮಾನಕ್ಕೆ ಸ್ವಾಗತ, ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು-ಬಿ.ವೈ.ವಿಜಯೇಂದ್ರ

ಪದ್ಮನಾಭನಗರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಗಾಯಿತ್ರಿ ಭವನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರು ಭೇಟಿ ನೀಡಿದರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್.ರಘುನಾಥ್ ರವರು, ಶಾಸಕರಾದ ಸಿ.ಕೆ.ರಾಮಮೂರ್ತಿ,  ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ರವರು, ಖಜಾಂಚಿ ಸುಬ್ಬನರಸಿಂಹ, ಮಾಜಿ ಅಧ್ಯಕ್ಷರಾದ ಎಂ.ಆರ್.ವಿ.ಪ್ರಸಾದ್, ಬಿಜೆಪಿ ಮುಖಂಡ ದತ್ತಾತ್ರಿರವರು ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಬಿ.ವೈ.ವಿಜಯೇಂದ್ರ ರವರು ಮಾತನಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಆನೇಕ ಹಿರಿಯರು ಪ್ರಾಮಾಣಿಕ ಸೇವೆಯಿಂದ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ.





ವಿಪ್ರರ ಅಭಿವೃದ್ದಿಗೆ 100ಕೋಟಿ ದತ್ತನಿಧಿ ಸಂಗ್ರಹಕ್ಕೆ ಗುರಿ ತಲುಪುವ ವಿಶ್ವಾಸವಿದೆ. ಗಂಡು ಮಕ್ಕಳು ಆಗಬೇಕು ಎಂದು ನನ್ನ ತಂದೆಯವರು ಮಂತ್ರಾಲಯ ಗುರುರಾಯರ ಪ್ರಾರ್ಥನೆಯಿಂದ ಬಿ.ವೈ.ರಾಘವೇಂದ್ರರವರ ಜನನವಾಯಿತು. ಬಿ.ಎಸ್.ಯಡಿಯೂರಪ್ಪರವರು ಆಡಳಿತದ ಅವಧಿಯಲ್ಲಿ 5ಕೋಟಿ ಅನುದಾನ ನೀಡಿದ್ದರು, ಎಲ್ಲ ಸಮಾಜದ ಧ್ವನಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ಜಾತಿ ಜನಗಣತಿ ತೀರ್ಮಾನ ಸ್ವಾಗತ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಜಾತಿ, ಜಾತಿ ನಡುವೆ ವಿಷಬೀಜ ಬಿತ್ತುತ್ತಿದೆ. ರಾಜ್ಯ ಸರ್ಕಾರಗಳು ಜಾತಿಗಣತಿ ಮಾಡುವ ಅವಕಾಶವಿಲ್ಲ. ಕೇಂದ್ರ ಸರ್ಕಾರ ಮಾತ್ರ ಜಾತಿಗಣತಿ ಮಾಡಲು ಅವಕಾಶವಿದೆ. ಬಿ.ಎಸ್.ಯಡಿಯೂರಪ್ಪರವರು ಬ್ರಾಹ್ಮಣ ಮಹಾಸಭಾದ ನಡುವೆ ಉತ್ತಮ ಅವಿನಾಭವ ಸಂಭಂದವಿದೆ. ಬ್ರಾಹ್ಮಣ ಸಮಾಜದವರ ಆಶೀರ್ವಾದ ಸಹಕಾರವಿರಲಿ ಎಂದು ಹೇಳಿದರು.

ಎಸ್.ರಘುನಾಥ್ ರವರು ಮಾತನಾಡಿ ಮಹಾಸಭಾಗೆ  ಬಿ.ವೈ.ವಿಜಯೇಂದ್ರರವರು ಗಾಯಿತ್ರಿ ಭವನಕ್ಕೆ ಬಂದಿರುವುದು ಸಂತೋಷದಾಯಕ ಸುದ್ದಿಯಾಗಿದೆ. 30ಕುಂಟೆ ಜಾಗದಲ್ಲಿ ಮಹಿಳಾ ಹಾಸ್ಟಲ್ ನಡೆಯುತ್ತಿದೆ ಅಲ್ಲಿ ಇನ್ನು ಅಭಿವೃದ್ದಿ ಕೆಲಸವಾಗಬೇಕಾಗಿದೆ ಅದಕ್ಕೆ ಸಹಕಾರ ನೀಡಬೇಕು ಮತ್ತು ವಿಪ್ರರ ಅಭಿವೃದ್ದಿಗೆ 100ಕೋಟಿ ದತ್ತ ನಿಧಿ ಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ.  ಐದು ವರ್ಷಗಳಲ್ಲಿ ಬ್ರಾಹ್ಮಣ ಶ್ರೇಯೋಭಿವೃದ್ದಿಗಾಗಿ ಶ್ರಮಿಸಲು ವಿಪ್ರ ಮುಖಂಡರು ಸಹಕಾರ ನೀಡಬೇಕು. ರಾಜ್ಯ ಬಿಜೆಪಿಯಲ್ಲಿ ಬ್ರಾಹ್ಮಣರು ಕಾರ್ಯಕರ್ತರು ಇದ್ದಾರೆ ಅವರಿಗೆ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಬೆಂಗಳೂರುನಗರ ಜಿಲ್ಲಾ ಪ್ರತಿನಿಧಿಗಳಾದ ಎಸ್.ಎಸ್.ಪ್ರಸಾದ್, ಕೆ.ಎನ್.ರವಿಕುಮಾರ್, ದಿಲೀಪ್, ಸತೀಶ್ ಉರಾಳ್, ಪಿ.ಎಸ್.ಪ್ರಕಾಶ್, ರಾಜಶೇಖರ್ ಜಿ.ರಾವ್, ಶ್ರೀನಿವಾಸ್ ರಾಘವನ್ ರವರು ಉಪಸ್ಥಿತರಿದ್ದರು.

Post a Comment

0Comments

Post a Comment (0)