ಬೆಂಗಳೂರು, ; ಬೆಳವಣಿಗೆಯಾಗುತ್ತಿರುವ ಕೃತಕ ಬುದ್ದಿಮತ್ತೆ ಯುಗಕ್ಕೆ ಅನುಗುಣವಾಗಿ ಯುವ ಜನಾಂಗಕ್ಕೆ ನಗರದ ಬಿ.ಎಂ.ಎಸ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ “ಬಿಲ್ಡ್ ವಿತ್ ಎಐ – ಜೆಮಿನಿ 2.0 ಫ್ಲಾಶ್” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೈಂಡ್ ಮ್ಯಾಟ್ರಿಕ್ಸ್ ಮತ್ತು ಗೂಗಲ್ ಫಾರ್ ಡೆವಲಪರ್ಸ್ ಇಂಡಿಯಾ ಎಜು ಪ್ರೋಗ್ರಾಂ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಿಲ್ಡ್ ವಿತ್ ಎಐ – ಜೆಮಿನಿ 2.0 ಫ್ಲಾಶ್ ಕಾರ್ಯಕ್ರಮವು ರಾಜ್ಯದ ಎಲ್ಲಾ ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳು ಭಾಗವಹಿಸಿದ್ದರು.
ಈ ಮಹತ್ವದ ಪ್ರಯತ್ನದ ಹಿಂದೆ ಮೈಂಡ್ ಮ್ಯಾಟ್ರಿಕ್ಸ್ ನ ಸಿಇಓ ಸುಜಿತ್ ಕುಮಾರ್ ಹಾಗೂ ಮೈಂಡ್ ಮ್ಯಾಟ್ರಿಕ್ಸ್ ನ ಸಲಹೆಗಾರರಾದ ಡಾ. ಎಸ್. ಮೋಹನ್ ಕುಮಾರ್, ಎಸ್ ಜೆಎಂ ವಿಶ್ವವಿದ್ಯಾಲಯ ಮಾಜಿ ಉಪಕುಲಪತಿಗಳು ಕಾರ್ಯಾಗಾರದ ವೈಶಿಷ್ಟ್ಯತೆಯನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ್, ಬಿ.ಎಂ.ಎಸ್. ಕಾಲೇಜಿನ ಪ್ರಾಚಾರ್ಯರಾದ ಡಾ. ಭೀಮಶಾ ಆರ್ಯ, ಉಪ ಪ್ರಾಂಶುಪಾಲರಾದ ಡಾ. ರವಿಕುಮಾರ್ ಪ್ರಾಧ್ಯಾಪಕರಾದ ಡಾ. ಎಸ್. ಮೋಹನ್ ಕುಮಾರ್, ಮೈಂಡ್ ಮ್ಯಾಟ್ರಿಕ್ಸ್ ಅಮಿತಾಬ್ ಸತ್ಯಂ ನ ಸಲಹೆಗಾರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿ.ಎಂ.ಎಸ್. ಶಿಕ್ಷಣ ಟ್ರಸ್ಟ್ ನ ಟ್ರಸ್ಟಿ ಅವಿರಾಮ್ ಶರ್ಮಾ ಅಧ್ಯಕ್ಷೀಯ ಭಾಷಣ ಮಾಡಿದರು. ರವರು ವಂದನಾರ್ಪಣೆಯನ್ನು ನೀಡಿದರು.
ತಿರುಮಲ ದೇಸಾಯಿರವರು (ಮೈಂಡ್ ಮ್ಯಾಟ್ರಿಕ್ಸ್) ಕಾರ್ಯಾಗಾರದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಗೂಗಲ್ ಜೆಮಿನಿ 2.0 ಮತ್ತು ಎಐ ಸ್ಟುಡಿಯೋ ಬಳಸಿ ಪ್ರಾಯೋಗಿಕ ತರಬೇತಿ ನೀಡಿದರು.