ಜಯಮಹಲ್ ಲಯನ್ಸ್ ಸಂಸ್ಥೆ ಬೆಂಗಳೂರಿನ ವಸಂತನಗರದಲ್ಲಿ ಉಚಿತ ಕಣ್ಣು ತಪಾಸಣಾ ಕೇಂದ್ರವನ್ನು ಸ್ಥಳಿಯ ಶಾಸಕ ರಿಜ್ವಾನ್ ಹರ್ಷದ್ ರವರು ಉದ್ಘಾಟಿಸಿ ಮಾತನಾಡುತ್ತಾ ಅಂತರಾಷ್ಟ್ರೀಯ ಮಟ್ಟದಲ್ಲಿ ಲಯನ್ಸ್ ಸಂಸ್ಥೆ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಇದರಿಂದ ಅನೇಕ ಬಡವರಿಗೆ ಅನುಕೂಲವಾಗಿದೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಗವರ್ನರ್ ಸಿ.ಎಂ. ನಾರಾಯಣಸ್ವಾಮಿ ಹಾಗೂ ಉಪಕುಲಪತಿ ಡಾ. ಚಂದ್ರಶೇಖರ್ ಶೆಟ್ಟಿ ಅವರು ಇದೇ ಸಂದರ್ಭದಲ್ಲಿ ಜಯಮಹಲ್ ನೂತನ ಸಭಾ ಕೊಠಡಿಯನ್ನು ಉದ್ಘಾಟಿಸಿದರು.
ಲಯನ್ ವೈ ಬಿ ತಿಪ್ಪೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಮಾಜಿ ಜಿಲ್ಲಾ ರಾಜ್ಯಪಾಲರಾದ ದೀಪಕ್ ಸುಮನ್, ಉಪರಾಜ್ಯಪಾಲ ರಾಜು ಚಂದ್ರಶೇಖರ್ ಹಾಗೂ ಮಾಜಿ ಜಿಲ್ಲಾ ರಾಜ್ಯಪಾಲರು ಕ್ಯಾಬಿನೆಟ್ ಸದಸ್ಯರು ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು, ಲಯನ್ ಅರವಿಂದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.