ರಾಮನಗರ: ಕಾಂಗ್ರೆಸ್ ಗ್ಯಾರಂಟಿ ಯೋಜನೆ ಗಳನ್ನು ಡಿಸಿಎಂ ಡಿಕೆಶಿ ಹಾಡಿ ಹೊಗಳಿದ್ದಾರೆ, 52,000 ಕೋಟಿ ರೂ ಹಣವನ್ನು ಗ್ಯಾರಂಟಿಗಳ ಮೂಲಕ ಜನರಿಗೆ ತಲುಪಿಸುತ್ತಿದ್ದೇವೆ, ಕಾಂಗ್ರೆಸ್ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಹೆಚ್ಚಿದೆ ಎಂದು ಹೇಳಿದ್ದಾರೆ,
ರಾಮನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಆಯೋಜಿಸಿದ್ದ ಡಾ ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಮನಗರದ ಮನೆಮನೆಗಳಿಗೆ ತೆರಳಿ, ಸಹಿ ಹಾಕಿ ಗ್ರಾರಂಟಿಯ ವಾಗ್ದಾನವನ್ನು ನಮ್ಮ ತಾಯಂದಿರಿಗೆ ನೀಡಿದ್ದೇವು, ಆ ವಾಗ್ದಾನ ಇಂದು ಈಡೇರಿದ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು,
ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿ ಪಥದತ್ತ ಸಾಗಿದೆ, ಸರ್ಕಾರ ಜನಮೆಚ್ಚುಗೆಗೆ ಪಾತ್ರವಾಗಿದೆ ಮುಂದೆಯೂ ಜನರು ಕಾಂಗ್ರೆಸ್ ಪರ ನಿಲ್ಲಲಿದ್ದಾರೆ ಎಂದು ಡಿಕೆಶಿ ಹೇಳಿದರು,
ಜೈ ಭಾಪು, ಜೈ ಭೀಮ್, ಜೈ ಸಂವಿಧಾನ್ ಕಾರ್ಯಕ್ರಮದ ಮೂಲಕ ಸಂವಿಧಾನವೇ ಕಾಂಗ್ರೆಸ್ ಬದುಕು ಎಂಬುವುದನ್ನು ಸಾರಿದ್ದೇವೆ, ಅಂಬೇಡ್ಕರ್ ಅವರು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರಲಿಲ್ಲ, ಅವರು ಎಲ್ಲಾ ವರ್ಗದ ಏಳಿಗೆಗಾಗಿ ಶ್ರಮಿಸಿದವರು, ಹಾಗಾಗಿ ಇಂದು ಅವರ ಪ್ರತಿಮೆಗೆ ಪೂಜೆಯನ್ನು ಸಲ್ಲಿಸುತ್ತಿಲ್ಲ, ಬದಲಾಗಿ ಪ್ರತಿಭೆಗೆ ಪೂಜೆ ಸಲ್ಲಿಸುತ್ತಿದ್ದೇವೆ, ಆದ್ದರಿಂದ ದೇವರ ವಿಗ್ರಹ ಹೊರತಾಗಿ ಒಬ್ಬ ವ್ಯಕ್ತಿಯ ವಿಗ್ರಹವನ್ನು ಈ ದೇಶದಲ್ಲಿ ಅತಿ ಹೆಚ್ಚು ಕಾಣುತ್ತಿದ್ದೇವೆ ಎಂದರೆ, ಅದು ಬಾಬಾ ಸಾಹೇಬ್ ಅಂಬೇಡ್ಕರ್ ವಿಗ್ರಹ ಮಾತ್ರ, ಅಂಬೇಡ್ಕರ್ ನೀಡಿದ ಸಂವಿಧಾನ ನಮ್ಮ ದೇಶದ ಪವಿತ್ರ ಗ್ರಂಥ ಎಂದು ಡಿಕೆಶಿ ಬಣ್ಣನೆ ಮಾಡಿದರು,