ಭಾರತೀಯ ಕ್ರಿಕೆಟ್‌ನ ಅತ್ಯಂತ ಪ್ರತಿಭಾವಂತ ಬ್ಯಾಟ್ಸ್ಮನ್‌ಗಳಲ್ಲಿ ಒಬ್ಬರು, ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕನಾದ ಕೊಹ್ಲಿ, ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳುವ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಿಳಿಸಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆ, ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಮ್ಮ ಟೆಸ್ಟ್ ಪಯಣದ ಬಗ್ಗೆ ಮನದಾಸೆಯಿಂದ ಮಾತನಾಡಿದ್ದಾರೆ.
14 ವರ್ಷದ ಹಿಂದೆ ನಾನು ಟೆಸ್ಟ್ ಕ್ರಿಕೆಟ್ ನಲ್ಲಿ ಆಡಲು ಶುರುವಾಡಿದೆ, ಈ ಪಯಣ ಇಲ್ಲಿಯವರೆಗೂ ಕರೆತರುವುದೆಂದು ನಾನೆಂದೂ ಊಹಿಸಿರಲಿಲ್ಲ, ಅದು ನನ್ನನ್ನು ಪರೀಕ್ಷಿಸಿತು, ರೂಪಿಸಿತು, ಹಾಗೂ ನನ್ನ ಜೀವನವಿಡೀ ನೆನಪಿಡಬಹುದಾದ ಪಾಠ ಕಲಿಸಿತು,
ಟೆಸ್ಟ್ ಕ್ರಿಕೆಟ್ ಆಡುವುದು ನನಗಂತೂ ತೀರಾ ವೈಯಕ್ತಿಕ ಭಾವನಾತ್ಮಕ ಸಂಗತಿ, ಖಾಲಿ ಸ್ಟೇಡಿಯಂ ಹಲವು ದಿನಗಳ ಆಟ ಯಾರೂ ನೆನೆಪಿಟ್ಟುಕೊಳ್ಳದ ಸಣ್ಣ ಸಂಗತಿಗಳು ಅದರೆ ನಾನೆಂದಿಗೂ ನಿಮ್ಮ ಜೊತೆ ಇರುವ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ,