ಟರ್ಕಿ ರವಾನಿಸಿದ್ದ 'Appreciation letter' ಹರಿದು ಹಾಕಿದ ಹಂಪಿ ಪ್ರವಾಸಿ ಮಾರ್ಗದರ್ಶಿ

varthajala
0

 


ಹಂಪಿ/ವಿಜಯನಗರ: ಕಳೆದ ಡಿಸೆಂಬರ್‌ನಲ್ಲಿ ಹಂಪಿಗೆ ಭೇಟಿ ನೀಡಿದ ಟರ್ಕಿ ರಾಷ್ಟ್ರದ ರಾಯಭಾರ ಕಚೇರಿಯ ಅಧಿಕಾರಿಗಳು ರವಾನಿಸಿದ್ದ ಮೆಚ್ಚುಗೆ ಪತ್ರ (Appreciation lette r)ನ್ನು ಹರಿದು ಹಾಕುವ ಮೂಲಕ ಹಂಪಿಯ ಪ್ರವಾಸಿ ಮಾರ್ಗದರ್ಶಿಯೊಬ್ಬರು ಟರ್ಕಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಟರ್ಕಿಯ ರಾಯಭಾರಿ ಎಚ್ ಇ ಫಿರತ್ ಸುನೆಲ್ ಮತ್ತು ಹೈದರಾಬಾದ್‌ನಲ್ಲಿರುವ ಟರ್ಕಿಯ ಕಾನ್ಸುಲ್ ಜನರಲ್ ಓರ್ಹಾನ್ ಯಲ್ಮನ್ ಓಕನ್ ಅವರು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹಂಪಿ ಮತ್ತು ಬಳ್ಳಾರಿಯಲ್ಲಿರುವ ಟರ್ಕಿ ಸೈನಿಕರ ಸ್ಮಾರಕ ಇರುವ ಪ್ರದೇಶಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದ್ದರು.

ರಾಯಭಾರ ಕಚೇರಿ ಮರಳಿದ ಬಳಿಕ ಇಬ್ಬರೂ ನನಗೆ ಮೆಚ್ಚುಗೆ ಪತ್ರ ರವಾನಿಸಿದ್ದಾರೆ. ನಾನು ಭಾರತೀಯ ಸೇನೆಗೆ ಸೇರುವ ಕನಸನ್ನು ಹೊಂದಿದ್ದೆ, ಆದರೆ ಮೂರು ಬಾರಿ ಪ್ರಯತ್ನಿಸಿದರೂ ನನ್ನ ಕನಸು ನನಸಾಗಲಿಲ್ಲ. ನನ್ನ ಗುರಿ ಏನೇ ಇರಲಿ, ನನ್ನ ದೇಶ, ದೇಶದ ಸುರಕ್ಷತೆ ನನ್ನ ಪ್ರಮುಖ ಆದ್ಯತೆಯಾಗಿದೆ. ಟರ್ಕಿ ರಾಷ್ಟ್ರದ ಶಸ್ತ್ರಾಸ್ತ್ರಗಳನ್ನು ಹೊತ್ತ ವಿಮಾನ ಪಾಕಿಸ್ತಾನದಲ್ಲಿ ಇಳಿದಿದೆ ಎಂಬುದನ್ನು ರಾಷ್ಟ್ರೀ ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ.

ಯಾವುದೇ ವ್ಯಕ್ತಿ ಅಥವಾ ದೇಶವು ನಮ್ಮ ಪ್ರತಿಸ್ಪರ್ಧಿ ದೇಶವನ್ನು ಬೆಂಬಲಿಸಿದರೆ, ನಾನು ಅವರಿಂದ ಮೆಚ್ಚುಗೆಯನ್ನು ಬಯಸುವುದಿಲ್ಲ. ನಾನು ಆ ಪತ್ರವನ್ನು ವಿರೂಪಾಕ್ಷ ದೇವಾಲಯದ ಮುಂದೆ ಹರಿದು ಹಾಕಿದೆ ಹಂಪಿ ಮಾರ್ಗದರ್ಶಿ ವಿರೂಪಾಕ್ಷಿ ಅವರು ಹೇಳಿದ್ದಾರೆ.

ಮೊದಲನೆಯ ಮಹಾಯುದ್ಧದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಟರ್ಕಿಶ್ ಮತ್ತು ಭಾರತೀಯ ಸೈನಿಕರ ಸ್ಮರಿಕೆಗಾಗಿ, ಬಳ್ಳಾರಿಯಲ್ಲಿ ಅವರ ಸ್ಮಾರಕಗಳನ್ನು ನಿರ್ಮಿಸಲಾಗಿದೆ ಎಂದು ಇದೇ ವೇಳೆ ವಿರೂಪಾಕ್ಷಿಯವರು ಮಾಹಿತಿ ನೀಡಿದ್ದಾರೆ.

Tags

Post a Comment

0Comments

Post a Comment (0)