ಬಂಗಾಳಕೊಲ್ಲಿ ಸಮುದ್ರದ ಆಳದಿಂದ ಶಕ್ತಿ ಚಂಡಮಾರುತ ರೂಪಗೊಂಡಿದೆ, ಇದು ಸಂಪೂರ್ಣವಾಗಿ ಸಕ್ರಿಯವಾದರೆ ಭಾರತದ ಪೂರ್ವ ಕರಾವಳಿ ರಾಜ್ಯಗಳು ಹಾಗೂ ನೆರೆಯ ಬಾಂಗ್ಲಾದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ,
ವರದಿಯ ಪ್ರಕಾರ ಮೇ 16 ಮತ್ತು 18 ರ ನಡುವೆ ಅಂಡಮಾನ್ ಸಮುದ್ರದ ಮೇಲೆ ಚಂಡಮಾರುತವು ರೂಪುಗೊಳ್ಳುವ ಸಾಧ್ಯತೆಯಿಮದ ಇದು ಮೇ 22 ರ ವೇಳೆಗೆ ಕಡಿಮೆ ಒತ್ತಡದ ಪ್ರದೇಶವಾಗಿ ಬದಲಾಗಬಹುದು, ಇದರ ನಂತರ ಇದು ಮೇ 23 ರಿಂದ 28 ರ ನಡುವೆ ಶಕ್ತಿ ಎಂಬ ಚಂಡಮಾರುತದ ರೂಪವನ್ನು ಪಡೆಯಬಹುದು ಎನ್ನಲಾಗಿದೆ,