ಕದನ ವಿರಾಮ ಯಾರು ಮಾಡಿಸಿದ್ದು ಪ್ರಧಾನಿ ದೇಶದ ಜನತೆಗೆ ಸತ್ಯ ಹೇಳಲಿ

varthajala
0

 


 ಕಲಬುರಗಿ : ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆಯುತ್ತಿರುವ ಯುದ್ಧಕ್ಕೆ ಕದನ ವಿರಾಮ ಘೋಷಣೆ ಮಾಡಿಸಿದ್ದು ಯಾರು ಎನ್ನುವ ಸತ್ಯವನ್ನು ದೇಶದ ಪ್ರಧಾನಿ ಮೋದಿ ಜನರ ಮುಂದೆ ಹೇಳಬೇಕು ಎಂದು ರಾಜ ಪಂಚಾಯತ್ ಅಭಿವೃದ್ಧಿ ಹಾಗೂ ಗ್ರಾಮೀಣ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು.

ಅಮೆರಿಕ ಅಧ್ಯಕ್ಷ ಟ್ರಂಪ್ ಕದನ ವಿರಾಮ ತಾನು ಮಾಡಿಸಿದ್ದು ಎಂದು ಎರಡು ಮೂರು ಬಾರಿ ಹೇಳಿಕೆ ನೀಡುತ್ತಿದ್ದಾರೆ. ಕನಿಷ್ಠಪಕ್ಷ ಅದನ್ನು ಅಲ್ಲಗಳೆಯುವ ಧೈರ್ಯವು ಪ್ರಧಾನಮಂತ್ರಿ ತೋರಿಸುತ್ತಿಲ್ಲ. ಈಗಲಾದರೂ ದೇಶದ ಜನರಿಗೆ ಪ್ರಧಾನಿ ಮೋದಿ ಸತ್ಯ ಹೇಳಬೇಕು, ಕದನ ವಿರಾಮ ಘೋಷಣೆ ಅಮೆರಿಕ ಮಾಡಿಸಿದ್ದಾ?, ಮೋದಿ ಮಾಡಿದ್ದಾ? ಅಥವಾ ಪಾಕಿಸ್ತಾನ ಮಾಡಿಸಿದ್ದಾ ? ದೇಶದ ಜನರ ಮುಂದೆ ಈ ಸತ್ಯ ಮೋದಿ ಹೇಳಬೇಕು ಎಂದರು.

ಮೋದಿಯವರು ಕೇವಲ ಸೋಶಿಯಲ್ ಮೀಡಿಯಾ ಬಳಸಿಕೊಂಡು ಯುದ್ಧ ಮಾಡುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೋದಿಯವರಿಗೆ ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ. ಆದರೂ ಪ್ರಧಾನಿ ಮೋದಿ ಸರ್ವ ಪಕ್ಷಗಳೊಂದಿಗೆ ಚರ್ಚಿಸುತ್ತಿಲ್ಲ, ಸಂಸತ್ ಅಧಿವೇಶನ ಕೂಡ ಕರೆಯುತ್ತಿಲ್ಲ. ವಿದೇಶಿ ವ್ಯಾಪಾರ ನಿಲ್ಲಿಸುವ ಟ್ರಂಪ ಬೆದರಿಕೆಗೆ ಬಗ್ಗಿ ನೀವು ಈ ನಿರ್ಣಯ ಕೈಗೊಂಡಿದ್ದೀರಾ ? ಎಂದು ಹರಿಹಾಯದರು. ಅತ್ತ ಪಾಕಿಸ್ತಾನ ಪ್ರಧಾನಿ ಅಲ್ಲಿನ ಸಂಸತ್ತಿನಲ್ಲಿ ಯುದ್ಧ ಗೆದ್ದಿದ್ದು ನಾವೇ ಎಂದು ಹೇಳಿಕೊಳ್ಳುತ್ತಿದ್ದಾರೆ ? ನಿನ್ನೆ ದೇಶ ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಮೋದಿ ಈ ಬಗ್ಗೆ ಹೇಳಬೇಕುತ್ತು ಎಂದರು.

56 ಇಂಚ್ ಎದೆಯುಳ್ಳ ಪ್ರಧಾನಿ ಕೇವಲ ಕೆಂಪು ಕೋಟೆಯ ಮೇಲೆ ಮಾತನಾಡಲು ಮಾತ್ರ ಸೀಮಿತವಾಗಿದ್ದಿರಿ. ಪಾಕಿಸ್ತಾನಕ್ಕೆ ಈಗಾಗಲೇ ನಾಲ್ಕು ಬಾರಿ ಭಾರತ ಸೋಲಿಸಿದ್ದಾಗಿದೆ. ಈ ಬಾರಿ ವಿದೇಶಾಂಗ ನೀತಿಯಲ್ಲಿಯೇ ಭಾರತ ಸೋತಿದೆ. ಪಹಲ್ಗಾಂ ದಾಳಿ ನಡೆಸಿದ ನಾಲ್ವರು ಉಗ್ರರು ಈಗ ಎಲ್ಲಿದ್ದಾರೆ ? ಹೇಳ್ತಾರಾ ? ಅವರು ದೇಶದ ಒಳಗಡೆ ಬಂದಿದ್ದಾರಾ ? ಹೊರಗಡೆ ಹೋಗಿದ್ದಾರಾ ? ಎಲ್ಲಿದ್ದಾರೆ ? ಏಕೆ ಹೇಳುತ್ತಿಲ್ಲ ? ಎಂದು ಪ್ರಶ್ನಿಸಿದರು. ಕೂಡಲೇ ಸಂಸತ್ ಅಧಿವೇಶನ ಕರೆದು ಈ ಬಗ್ಗೆ ಚರ್ಚಿಸಬೇಕು ಎಂದು ಆಗ್ರಹಿಸಿದರು.

Post a Comment

0Comments

Post a Comment (0)