ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 12ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ 88.39% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸಿಬಿಎಸ್‌ಇ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ, ಡಿಜಿಲಾಕರ್ ಪೋರ್ಟಲ್, ಉಮಂಗ್ ಆ್ಯಪ್‌ನಲ್ಲಿ ಕೂಡ ಲಭ್ಯವಿದೆ. ಸುಮಾರು 17.88 ಲಕ್ಷ ವಿದ್ಯಾರ್ಥಿಗಳು 12 ನೇ ತರಗತಿಯ ಪರೀಕ್ಷೆ ಬರೆದಿದ್ದರು. 12ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳನ್ನು ಅಧಿಕೃತವಾಗಿ cbseresults.nic.in, cbse.gov.in, results.cbse.nic.in, ಮತ್ತು DigiLocker (results.digilocker.gov.in) ಜಾಲತಾಣಗಳು ಅಥವಾ UMANG ಆ್ಯಪ್ ಬಳಸಿ ವಿದ್ಯಾರ್ಥಿಗಳು ಪಡೆಯಬಹದು. SMS ಮೂಲಕ ಫಲಿತಾಂಶ ಪಡೆಯಲು : CBSE12 WỞ 7738299899 ಸಂಖೆಗೆ ಕಳುಹಿಸಿ ಪಡೆಯಬಹುದಾಗಿದೆ. ರಿಜಲ್ಟ್ ರಿ-ಇವ್ಯಾಲ್ಯೂಷನ್: ಜೂನ್ 1ರಿಂದ ಅರ್ಜಿ ಸಲ್ಲಿಸಬಹುದು.