ದೆಹಲಿ: ಭಾರತದ ಎದುರು ಸೋತು ಸುಣ್ಣವಾಗುವ ಭಯದಿಂದ ಕದನ ವಿರಾಮದ ಮೊರೆ ಹೋಗಿದ್ದ ಪಾಕಿಸ್ತಾನ , ಬಳಿಕ ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಳ್ಳೆ ನರಿಯಂತೆ ಭಾರತದ ಮೇಲೆ ಡ್ರೋನ್ ದಾಳಿ ಮಾಡಿತ್ತು. ಭಾರತದ ಕ್ಷಿಪಣಿ ನಾಶ ಮಾಡಿದೆ, ಭಾರತ ನಮ್ಮ ಶಕ್ತಿಗೆ ಹೆದರಿಕೊಂಡಿತು ಅಂತೆಲ್ಲ ಪಾಕ್ ಪ್ರಧಾನಿ ಬೊಗಳೆ ಬಿಡುತ್ತಿದ್ದಾನೆ. ಆದರೆ ಭಾರತ ಮಾತ್ರ ಯಾವುದೂ ಬಡಾಯಿ ಕೊಚ್ಚಿಕೊಳ್ಳದೇ, ಪಾಕಿಸ್ತಾನಕ್ಕೆ ಏನು ಮಾಡಬೇಕು ಅದನ್ನು ಅವರ ನೆಲದಲ್ಲೇ ಮಾಡಿ ಮುಗಿಸಿದೆ. ಮುಖ್ಯವಾಗಿ ಪಾಕಿಸ್ತಾನದ ಏರ್‌ಬೇಸ್‌ಗಳನ್ನು ಸರ್ವನಾಶ ಮಾಡಿದೆ. ಈ ಪೈಕಿ ಪ್ರಮುಖ ಏರ್‌ಬೇಸ್ ಆಗಿದ್ದ ನೂರ್ ಖಾನ್ ಏರ್ ಬೇಸ್ ಸಂಪೂರ್ಣ ಹಾಳಾಗಿದೆ. ಮೇ 8 ಮತ್ತು 10 ರ ನಡುವೆ ಭಾರತದ ಆಪರೇಷನ್ ಸಿಂಧೂರ್ ಅಡಿಯಲ್ಲಿ ನಡೆದ ದಾಳಿಯಲ್ಲಿ ನೂರ್ ಖಾನ್ ಏರ್ ಬೇಸ್‌ಗೆ ನೂರಾರು ಹಾನಿಯಾಗಿದ್ದು, ಚೀನಾದ ಉಪಗ್ರಹ ಸಂಸ್ಥೆ ಬಿಡುಗಡೆ ಮಾಡಿದ ಚಿತ್ರದಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ
ಚೀನಾದ ಉಪಗ್ರಹ ಸಂಸ್ಥೆ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಣವು ಭಾರತೀಯ ಸಶಸ್ತ್ರ ಪಡೆಗಳ ದಾಳಿಯ ನಂತರ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಗೆ ಏನೆಲ್ಲಾ ಹಾನಿಯಾಗಿವೆ ಎಂಬುದನ್ನು ತೋರಿಸಿದೆ. ಭಾರತೀಯ ಸಶಸ್ತ್ರ ಪಡೆಗಳು ಪಂಜಾಬ್‌ನ ರಫೀಕಿ, ಮುರಿಯ್, ನೂರ್ ಖಾನ್, ಚುನಿಯನ್ ಮತ್ತು ಸುಕ್ಕೂರ್‌ನಲ್ಲಿರುವ ಪಾಕಿಸ್ತಾನಿ ವಾಯುಪಡೆಯ ನೆಲೆಗಳನ್ನು ಗುರಿಯಾಗಿಸಿಕೊಂಡವು.