ಕಾಬೂಲ್: ಆಫ್ಘಾನಿಸ್ತಾನದಲ್ಲಿ ಧಾರ್ಮಿಕ ಕಾರಣಗಳನ್ನು ಒಡ್ಡಿ ಚೆಸ್ ಆಟವನ್ನು ನಿಷೇಧಿಸಿ ತಾಲಿಬಾನ್ ಆದೇಶ ಹೊರಡಿಸಿದೆ, ತಾಲಿಬಾನ್ ಸರ್ಕಾರದ ಕ್ರೀಡಾ ಸಚಿವಾಲಯವು ಈ ಸಂಗತಿಯನ್ನು ಧೃಡಪಡಿಸಿದೆ,
ಇಡೀ ದೇಶದಲ್ಲಿ ಚೆಸ್ ಆಟವನ್ನು ಆಡುವುದು ಆಟಕ್ಕೆ ಸಂಬಂಧಿಸಿದ ವಸ್ತುಗಳ ಮಾರಾಟ, ಬಳಕೆ ಹಾಗೂ ಮೀಕ್ಷಣೆಯನ್ನು ನಿಷೇಧಿಸಿರುವುದಾಗಿ ತಾಲಿಬಾನ್ ಹೇಳಿದೆ, ಇಸ್ಲಾಮ್ ಕಾನೂನಿಗೆ ಸಂಬಂಧಿಸಿದಂತೆ ಚೆಸ್ ಆಡುವುದು ಹರಾಂ ಅದ್ದರಿರಂದ ಈ ಕ್ರಮ ಕೈಗೊಂಡಿರುವುದಾಗಿ ತಾಲಿಬಾನ್ ವಕ್ತಾರರು ವಿವರಿಸಿದ್ದಾರೆ,
ಈ ನಿಷೇಧವನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ತಾಲಿಬಾನ್ ನ ಚೆಸ್ ಆಟಗಾರರು ಮನವಿ ಮಾಡಿಕೊಂಡಿದ್ದಾರೆ,
ಒಂದಾನೊಂದು ಕಾಲದಲ್ಲಿ ಬುದ್ದಿವಂತರ ಆಟ ಎಂದು ಆಘ್ಘಾನಿಸ್ತಾನದಲ್ಲಿ ಹೆಸರಾಗಿದ್ದ ಚೆಸ್ ಆಟವು ಇನ್ನು ಮುಂದೆ ಕೇವಲ ಇತಿಹಾಸವಾಗಿ ಉಳಿಯಲಿದೆ ಎಂದು ಅಲ್ಲಿನ ಚೆಸ್ ಆಟಗಾರರು ವಿಷಾದ ವ್ಯಕ್ತಪಡಿಸಿದ್ದಾರೆ,