ಮಂಗಳೂರು: ಸುಳ್ಳಿನ ಆಧಾರದಲ್ಲಿ ದಂತ ಕಥೆ ಹೇಳುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಸ್ಸೀಮರು ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಟೀಕಿಸಿದರು,
ಇಂದು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿರುವ ಮೂರು ದಿನಗಳ ಮಾವು ಮೇಳವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗಳಿಗೆ ಪಹಲ್ಗಾಮ್ ದಾಳಿ ನಂತರದ ಬೆಳವಣಿಗೆ ಭಾರತ ಪಾಕ್ ನಡುವಿನ ಕದನ ವಿರಾಮ ಒಪ್ಪಂದ ಬಗ್ಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಣೆ ವಿಚಾರವನ್ನು ಸಚಿವರು ಉಲ್ಲೇಖಿಸಿದರು,
ದೇಶದ ಜನರು ಈ ಬಗ್ಗೆ ಸ್ಪಷ್ಟ ಉತ್ತರವನ್ನು ಬಯಸುತ್ತಿದ್ದಾರೆ,
ಪಾಕಿಸ್ತಾನದವರು ನಮ್ಮ ಐದು ಜೆಟ್ ಗಳನ್ನು ಹೊಡೆದು ಹಾಕಿದ್ದೇವೆ ಎಂದಿದ್ದಾರೆ, ಇದಕ್ಕೆ ನಮ್ಮ ಪ್ರಧಾನಿಯವರು ಸ್ಪಷ್ಟವಾಗಿ ಉತ್ತರಿಸಲು ತಯಾರಿಲ್ಲ ಎಂದರು,
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ವಿಚಾರದಲ್ಲಿ ಅಮಾಯಕರನ್ನು ಕೊಂದ ಭಯೋತ್ಪಾದಕರನ್ನು ಹುಡಕಿ ಮಣ್ಣುಪಾಲು ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದು ಏನಾಯಿತು? ನಾವೆಲ್ಲರೂ ಕೇಂದ್ರಕ್ಕೆ ಬೆಂಬಲ ಸೂಚಿಸಿ ಪಾಕ್ ಉಗ್ರರ ವಿರುದ್ಧ ಹೋರಾಡಲು ಸಹಮತ ಸೂಚಿಸಿದ್ದೇವೆ
ಅತ್ತ ನೋಡಿದರೆ ಭಾರತ-ಪಾಕ್ ನಡುವಿನ ಕದನ ವಿರಾಮದ ಬಗ್ಗೆ ಟ್ರಂಪ್ ಬಾರಿ ಮಾಧ್ಯಮಗಳ ಎದುರು ಬಂದು ಮಾತನಾಡಿದುತ್ತಾರೆ, ಅದರೆ ನಮ್ಮ ಪ್ರಧಾನಿಗಳಿಗೆ ಯಾರೂ ಪ್ರಶ್ನೆಗಳನ್ನು ಕೇಳಲು ಆಗಲ್ಲ, ಸರ್ವ ಪಕ್ಷ ಸಭೆ ಕರೆದು ನಮ್ಮೆಲ್ಲ ಪ್ರಶ್ನೆಗಳಿಗೆ ಪ್ರಧಾನಿಯವರು ಉತ್ತರ ನೀಡಬೇಕು, ಮೋದಿಯವರು ಹೇಳಿದ್ದೆಲ್ಲಾ ಎಲ್ಲರೂ ನಂಬಬೇಕಾ? ಇಡೀ ದೇಶದಲ್ಲಿ ಅತೀ ದೊಡ್ಡ ಸುಳ್ಳುಗಾರ ಎಂದರೆ ಅದು ಮೋದಿ ಎಂದು ದಿನೇಶ್ ಗುಂಡೂರಾವ್ ಜರಿದರು..