"ಸಾಂಸ್ಕೃತಿಕ ಲೋಕದ ಕಲ್ಪವೃಕ್ಷ ಸಂಭ್ರಮ"

varthajala
0

ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ಸಂಭ್ರಮ ಸಂಸ್ಥೆಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ "ರಂಗ ಸಂಭ್ರಮ" ಕಾರ್ಯಕ್ರಮವನ್ನು ಡಾ. ಸಿ. ಸೋಮಶೇಖರ್ ರವರು ಹಣ್ಣಿನ ಗಿಡಕ್ಕೆ ನೀರೇರೆಯುವ ಮೂಲಕ  ಉದ್ಘಾಟಿಸಿದರು.

 25 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂಭ್ರಮ ಸಂಸ್ಥೆ ಸಾವಿರಾರು ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಾ ಜನಮನ್ನಣೆಯನ್ನು ಗಳಿಸಿದೆ.  

ಸಾಂಸ್ಕೃತಿಕ ಕಾರ್ಯಕ್ರಮದ ಜೊತೆ ಜೊತೆಯಲಿ ಸಾಮಾಜಿಕವಾಗಿಯೂ ಸೇವೆ ಸಲ್ಲಿಸುತ್ತಿರುವ ಸಂಭ್ರಮ ಸಂಸ್ಥೆ ಸಾವಿರಾರು ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸಿರುವುದು ಈ ಪ್ರಕೃತಿಗೆ ಕೊಟ್ಟಿರುವ ದೊಡ್ಡ ಕೊಡುಗೆ, ಸಂಭ್ರಮ ಸಂಸ್ಥೆಯ ಸ್ಥಾಪಕರಾದ ಡಾ. ಜೋಗಿಲ ಸಿದ್ದರಾಜುರವರು ನಮ್ಮ ನಾಡಿನ ಹೆಸರಾಂತ ಜನಪದ ಗಾಯಕರು, ಜನಪದ ವಿದ್ವಾಂಸರು, ಮತ್ತು ವಿನಯ ಶೀಲರು ಅವರು ಮುನ್ನಡೆಸುತ್ತಿರುವ ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದು ಸಾಂಸ್ಕೃತಿಕ ಲೋಕದ ಮೇರುಪರ್ವತವಾಗಿ ಬೆಳೆಯಲಿ ಎಂದು ಶುಭ ಕೋರಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀನಿವಾಸ್ ಜಿ. ಕಪ್ಪಣ್ಣ ಸಂಭ್ರಮ ಸಂಸ್ಥೆ ನಡೆದು ಬಂದ ಆದಿ ಅದು ಸಾಂಸ್ಕೃತಿಕ ಲೋಕಕ್ಕೆ ಕೊಟ್ಟಿರುವ ಕೊಡುಗೆ ಅಪಾರ.  ನಾಡಿನ ಮತ್ತು ದೇಶದ ಉದ್ದಗಲಕ್ಕೂ ಅನೇಕ ಜನಪ್ರಿಯ ಜನಪದ ಗೀತೆಗಳು ಜನರ ಮನೆ ಮತ್ತು ಮನಸ್ಸುಗಳಲ್ಲಿ ರಾರಾಜಿಸುತ್ತಿವೆ ಅದಕ್ಕೆ ಮುಖ್ಯ ಕಾರಣ ಜಾನಪದ ಜಾತ್ರೆ ಸಂದರ್ಭದಲ್ಲಿ ಜೋಗಿಲ ಸಿದ್ದರಾಜುರವರು ಸಂಗ್ರಹ ಮಾಡಿ  ಧ್ವನಿ ಮುದ್ರಿಸಿದ ಈ ಗೀತೆಗಳು. 

ಇಂದು ಕನ್ನಡ ನಾಡಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಡಿ ಕುಣಿದು ಕುಪ್ಪಳಿಸುತ್ತಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ರವೀಂದ್ರನಾಥ್ ಸಿರಿವರ, ವಿದುಷಿ ಉಷಾ ಬಸಪ್ಪ, ವಿದುಷಿ ಡಾ. ದರ್ಶಿನಿ ಮಂಜುನಾಥ್, ಶ್ರೀ ಶಿವಣ್ಣಗೌಡ, ಶ್ರೀ ಎಂ ಬೈರೇಗೌಡ, ಶ್ರೀ ಕೆ ಎಸ್ ಡಿ ಎಲ್ ಚಂದ್ರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ರೂಪಾಂತರ ತಂಡ ಅಭಿನಯಿಸಿದ ಪರಸಂಗದ ಗೆಂಡೆತಿಮ್ಮ ನಾಟಕ ಬಹಳ ಅದ್ಭುತವಾಗಿ ಪ್ರದರ್ಶನಗೊಂಡಿತು.

Post a Comment

0Comments

Post a Comment (0)