ಸುಧೀಂದ್ರನಗರ ರಾಯರ ಮಠದಲ್ಲಿ ಟಿಟಿಡಿ ಕಾರ್ಯಕ್ರಮ

VK NEWS
0

 ಸುಧೀಂದ್ರನಗರ ರಾಯರ ಮಠದಲ್ಲಿ ಟಿಟಿಡಿ ಕಾರ್ಯಕ್ರಮ 

ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಮತ್ತು ಶ್ರೀ ರಾಘವೇಂದ್ರ ಸೇವಾ ಸಮಿತಿ, ಸುಧೀಂದ್ರನಗರ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 13 ರಿಂದ 16ರ ವರೆಗೆ ಜರುಗುವ ಕಾರ್ಯಕ್ರಮಗಳು ಈ ರೀತಿ ಇವೆ :

ಭಜನಾ ಕಾರ್ಯಕ್ರಮ (ಪ್ರತಿದಿನ ಸಂಜೆ 6 ರಿಂದ 7) : 

ಮೇ 13ರಂದು- ವಿದ್ಯಾರಣ್ಯಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿ, ಮೇ 14ರಂದು-ರಾಜಾಜಿನಗರದ ಶ್ರೀ ಸಮೀರ ಭಜನಾ ಮಂಡಳಿ, ಮೇ 15ರಂದು-ಈಜುಕೊಳದ ಬಡಾವಣೆಯ ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿ.

ಪ್ರವಚನ ಕಾರ್ಯಕ್ರಮ (ಪ್ರತಿದಿನ ಸಂಜೆ 7 ರಿಂದ 8) :

ಮೇ 13 ರಿಂದ 16ರ ವರೆಗೆ ಶ್ರೀ ಬಿ.ವಿ. ಕೃಷ್ಣಮೂರ್ತಿಯವರಿಂದ "ಭಾಗವತ ಸಾರೋದ್ಧಾರ" ವಿಷಯವಾಗಿ ಧಾರ್ಮಿಕ ಪ್ರವಚನ.

ಹರಿನಾಮ ಸಂಕೀರ್ತನೆ : ಮೇ 16, ಶುಕ್ರವಾರ ಸಂಜೆ 6-30ಕ್ಕೆ. ಗಾಯನ : ಶ್ರೀಮತಿ ರಂಜಿತಾ ಪ್ರಸಾದ್,  ಕೀಬೋರ್ಡ್ : ಶ್ರೀ ಟಿ.ಎಸ್. ರಮೇಶ್, ತಬಲಾ : ಶ್ರೀ ಶ್ರೀನಿವಾಸ ಕಾಖಂಡಕಿ. 

ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003

Post a Comment

0Comments

Post a Comment (0)